• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ-ಉಣಕಲ್ ಜೋಡಿಹಳಿ ರೈಲು ಸಂಚಾರಕ್ಕೆ ಮುಕ್ತ

|

ಧಾರವಾಡ, ಅಕ್ಟೋಬರ್ 20 : ಧಾರವಾಡ-ಉಣಕಲ್ ನಡುವಿನ ಜೋಡಿಹಳಿಯಲ್ಲಿ ಗೂಡ್ಸ್ ಮತ್ತು ಪ್ರಯಾಣಿಕರ ರೈಲು ಸಂಚಾರಕ್ಕೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಹಾಯಕವಾಗಲಿದೆ.

ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಅಕ್ಟೋಬರ್ 14ರಂದು ಧಾರವಾಡ-ಉಣಕಲ್ ನಡುವಿನ 17 ಕಿ. ಮೀ. ಜೋಡಿ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದರು. ಈಗ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ.

ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ

ಹೊಸಪೇಟೆ-ವಾಸ್ಕೋ ನಡುವಿನ ಜೋಡಿಹಳಿ ಯೋಜನೆಯ ಭಾಗವಾಗಿ ಹುಬ್ಬಳ್ಳಿ-ಧಾರವಾಡ ನಡುವಿನ ಜೋಡಿಹಳಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ರೈಲು ನಂಬರ್ 02630 ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 16ರಂದು ಮೊದಲ ಬಾರಿಗೆ ಹೊಸ ಮಾರ್ಗದಲ್ಲಿ ಸಂಚಾರ ನಡೆಸಿದೆ.

ಹುಬ್ಬಳ್ಳಿ-ಧಾರವಾಡ ಮಂದಿಗೆ ರೈಲ್ವೆಯಿಂದ ಸಿಹಿ ಸುದ್ದಿ

ಉಣಕಲ್‌ನಲ್ಲಿ ಹೊಸ ರೈಲು ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಹೊಸ ಫ್ಲಾಟ್‌ ಫಾರಂ, ಮೇಲು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಧಾರವಾಡ-ಉಣಕಲ್, ಉಣಕಲ್-ಹುಬ್ಬಳ್ಳಿ ಎಂದು ಎರಡು ಭಾಗ ಮಾಡಿಕೊಂಡು ಜೋಡಿಹಳಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು.

ಹುಬ್ಬಳ್ಳಿ-ಧಾರವಾಡ ನಡುವೆ 30 ನಿಮಿಷದಲ್ಲಿ ಪ್ರಯಾಣಿಸಿ

ಉಣಕಲ್-ಹುಬ್ಬಳ್ಳಿ ನಡುವಿನ ಜೋಡಿಹಳಿ ಕಾಮಗಾರಿ 2021ರ ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಆಗ ಅವಳಿ ನಗರಗಳ ನಡುವಿನ ರೈಲು ಸಂಚಾರದ ಅವಧಿ 20 ರಿಂದ 30 ನಿಮಿಷಕ್ಕೆ ಇಳಿಕೆಯಾಗಲಿದೆ. ಬೇರೆ ರೈಲುಗಳು ಬಂದರೆ ಕ್ರಾಸಿಂಗ್‌ಗಾಗಿ ಕಾಯುವುದು ತಪ್ಪಲಿದೆ.

ನೈಋತ್ಯ ರೈಲ್ವೆ ಧಾರವಾಡ-ಉಣಕಲ್ ನಡುವಿನ ಜೋಡಿಹಳಿ ನಿರ್ಮಾಣ ಕಾಮಗಾರಿಯನ್ನು 62.17 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿತ್ತು. ಹೊಸಪೇಟೆ-ವಾಸ್ಕೋ ನಡುವಿನ ಕಾಮಗಾರಿಯ ಮೊತ್ತ 1,200 ಕೋಟಿ ರೂ.ಗಳು.

English summary
Commissioner of Railway Safety (CRS) approved for the good and passengers train run between newly laid double line between Dharwad and Unkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X