ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡಕ್ಕೆ ಬಂದ ಕೊರೊನಾ ಸೋಂಕಿತರ ಪ್ರಯಾಣದ ವಿವರ

|
Google Oneindia Kannada News

ಧಾರವಾಡ, ಮೇ 21: ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಆಗಮಿಸಿದ ಐದು ಜನರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಇಂದು ದೃಢಪಟ್ಟಿದೆ. ಅವರನ್ನು P-1505, P-1506, P-1507, P-1508 ಹಾಗೂ P-1509 ಎಂದು ಗುರುತಿಸಲಾಗಿದೆ. ಐದು ಜನರ ಪ್ರಯಾಣದ ವಿವರವನ್ನು ಧಾರವಾಡ ಜಿಲ್ಲಾಡಳಿತ ಪ್ರಕಟಿಸಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

P-1505 ಹಾಗೂ P-1506 ಸಂಖ್ಯೆ ರೋಗಿಗಳು ಹುಬ್ಬಳ್ಳಿ ನಗರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ. ಇವರು ಕಳೆದ ಮಾರ್ಚ್ ನಲ್ಲಿ ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್ ನ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.

ಕೋವಿಡ್‍ಯೇತರ ಖಾಯಿಲೆಗಳಿಗೆ ಖಾಸಗಿ ವೈದ್ಯರು ಚಿಕಿತ್ಸೆ ನೀಡದಿದ್ದರೆ ನೋಂದಣಿ ರದ್ದುಕೋವಿಡ್‍ಯೇತರ ಖಾಯಿಲೆಗಳಿಗೆ ಖಾಸಗಿ ವೈದ್ಯರು ಚಿಕಿತ್ಸೆ ನೀಡದಿದ್ದರೆ ನೋಂದಣಿ ರದ್ದು

ಆ ನಂತರ ಮೇ 17 ರ ಸಂಜೆ 5 ಗಂಟೆಗೆ ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೋ ಮೂಲಕ ಕರ್ನೂಲ್ ನ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 06.30 ಕ್ಕೆ ಬಾಡಿಗೆ ಕಾರಿನ ಮೂಲಕ ರಾಯಚೂರು, ಮಾನ್ವಿ, ಗಂಗಾವತಿ ಮಾರ್ಗವಾಗಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೋಸ್ಟ್ ದಾಟಿ ಹುಬ್ಬಳ್ಳಿ ತಲುಪಿದ್ದರು.

Travel Details Of Coronavirus Positive Cases In Dharwad

ಹುಬ್ಬಳ್ಳಿಗೆ ಆಗಮಿಸಿದ ಕುಟುಂಬ ಸದಸ್ಯರ ಎಲ್ಲಾ ಸದಸ್ಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ P-1505 ಹಾಗೂ P-1506 ಇವರು ಕೋವಿಡ್-19 ಸೋಂಕಿತರೆಂದು ದೃಢಪಟ್ಟಿದೆ.

P-1507, P-1508 ಹಾಗೂ P-1509 ಇವರು ಮಹಾರಾಷ್ಟ್ರದ ಮುಂಬೈನ ನಗರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ. ಮೇ 16 ರಂದು ಬಾಡಿಗೆ ಕಾರಿನಲ್ಲಿ ಕುಟುಂಬದ 11 ಜನ ಸದಸ್ಯರು ಮುಂಬೈಯಿಂದ ಹೊರಟು ಮೇ 18 ರಂದು ಮುಂಜಾನೆ 5 ಗಂಟೆಗೆ ಧಾರವಾಡ ತಲುಪಿದ್ದಾರೆ.

ಅದೇ ದಿನ ಕುಟುಂಬದ ಎಲ್ಲಾ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಇವರ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
The Dharwad district Administration has Released the travel details of five people infected with coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X