ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಿಲು ಮುಚ್ಚುತ್ತಿರುವ ಉರ್ದು ಶಾಲೆಗಳು: ತನ್ವೀರ್ ಸೇಠ್ ಕಳವಳ

|
Google Oneindia Kannada News

ಧಾರವಾಡ, ಜನವರಿ 13: ಉರ್ದು ಭಾಷೆ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ, ಉರ್ದು ಶಾಲೆಗಳು ಬಂದ್ ಆಗುತ್ತಿವೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೆಲ್ ಫೇರ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ ಸಮಾಜದ ಅನೇಕ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಆದರೂ ಉರ್ದು ಭಾಷೆಯ ಸಮಸ್ಯೆ ನಿವಾರಿಸಲು ಸುತ್ತೊಲೆ ಹೊರಡಿಸಲಾಗಿದೆ ಎಂದರು.

ಇಂದು ಸರಕಾರದ ಪ್ರಯತ್ನದಿಂದ ೬ ಮುಸ್ಲಿಂ ವಿದ್ಯಾರ್ಥಿಗಳು ಐಎಎಸ್ ಪಾಸ್ ಆಗಿದ್ದಾರೆ, ನಾವು ಅಕ್ಷಕರಸ್ಥರಾಗುವರೆಗೆ ನಮ್ಮೊಂದಿಗೆ ಅನ್ಯಾಯ ನಡೆಯುತ್ತವೆ. ಶೇಕಡಾ 50 ರಷ್ಟು ಜನರು ಈವರೆಗೆ ಸೌಲಭ್ಯ ವಂಚಿತರಾಗಿದ್ದಾರೆ. ಮುಸ್ಲಿಂ ಸಮುದಾಯದ ಎಲ್ಲರೂ ಜನರು ಸವಾಲು ಸ್ವೀಕರಿಸಿ ಪಣ ತೊಡಬೇಕು ಎಂದು ಹೇಳಿದರು.

Tanveer sait express concern on Urdu schools closure

ಉರ್ದು ಶಾಲೆ ಬಂದ್ ಆಗುತ್ತಿವೆ, ಇದಕ್ಕೆ ಹೊಣೆ ಯಾರು, ಉಪನ್ಯಾಸ ನೀಡುವುದು ನಮ್ಮ ಕೆಲಸ ಅಲ್ಲ. ಸಮಾಜದ ಮಕ್ಕಳು ದಾರಿ ತಪ್ಪಬಾರದು ಸುಶಿಕ್ಷಿತ ರಾಗಬೇಕು, ಮದರಸಾ ಬಂದ್ ನಿಂದ ಸಮಾಜಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಆಗುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.

ಮಾತೃ ಭಾಷೆ ಅವನತಿಯ ನಾವು ಸಹಿಸುವುದಿಲ್ಲ ಸಮಯದ ಸಂದಿಗ್ಧತೆಯನ್ನು ನಾವು ಅರಿತುಕೊಳ್ಳದಿದ್ದರೆ ನಮಗೆ ನಷ್ಟ ಉಂಟಾಗುತ್ತದೆ. ಸಮಾಜದ ಜನತೆ ಮುಂದುವರೆಯಬೇಕಾದರೆ ಸಹಾಯ, ಸಹಕಾರ ಅಗತ್ಯ, ನನಗೆ ಮುಂದೆ ಏನಾಗುತ್ತದೆ ನನಗೆ ಗೊತ್ತಿಲ್ಲ ಸಾವಿರಲ್ಲಿ ಒಬ್ವರೆ ಅಧಿಕಾರ ಸಿಕ್ಕಿದೆ ಅದನ್ನು ಸಮಾಜಕ್ಕೆ ಬಳಸಬೇಕು ಎಂದರು.

English summary
Education minister Tanveer sait expressed concern about closure of Urdu schools in the state despite efforts made by the government regarding minority students education and welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X