• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

|
Google Oneindia Kannada News

ಧಾರವಾಡ, ಅಕ್ಟೋಬರ್ 22 : ಧಾರವಾಡದ ನಾರಾಯಣ ಹೃದಯಾಲಯದ ವೈದ್ಯರು ಮಗುವಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿ ಜೀವದಾನ ನೀಡಿದ್ದಾರೆ. 20 ದಿನದ ಮಗು ಗಂಭೀರ ಹೃದಯ ಸಮಸ್ಯೆಯಿಂದ ಬಳಲುತ್ತಿತ್ತು.

ಹುಬ್ಬಳ್ಳಿ ಮೂಲಕ ಫಾರೂಕ್ ಮತ್ತು ಮುಬಿನ್ ದಂಪತಿಯ ಮಗು ಹುಟ್ಟಿದಾಗ 2.3 ಕೆಜಿ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಇರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು.

ಮನೆಗೆ ಮಾತ್ರೆ ತಲುಪಿಸಿ ಹೃದಯ ಗೆದ್ದ ಕೊರೊನಾ ಸೈನಿಕರು ಮನೆಗೆ ಮಾತ್ರೆ ತಲುಪಿಸಿ ಹೃದಯ ಗೆದ್ದ ಕೊರೊನಾ ಸೈನಿಕರು

ಪೋಷಕರು ಮಗುವನ್ನು ಮೊದಲು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯರು ನಾರಾಯಣ ಹೃದಯಾಲಕ್ಕೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಮಗುವಿನ ಹೃದಯದ ಮಹಾಪಧಮನಿಯಲ್ಲಿ ದೊಡ್ಡ ಪ್ರಮಾಣದ ದೋಷವಿತ್ತು. ಇದರಿಂದಾಗಿ ರಕ್ತ ಪರಿಚಲನೆಗೆ ತೊಂದರೆಯಾಗಿತ್ತು. ಸೂಕ್ತ ಸಮಯದಲ್ಲಿ ಮಗುವಿಗೆ ಚಿಕಿತ್ಸೆ ಸಿಕ್ಕಿದೆ. ಇಲ್ಲವಾದಲ್ಲಿ ಗಂಭೀರ ಸಮಸ್ಯೆ ಎದುರಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಜಗತ್ತಿನ ಶ್ರೇಷ್ಠ ಹೃದಯ ಚಿಕಿತ್ಸಾ ಕೇಂದ್ರ ಇರುವುದು ನಮ್ಮ ಬೆಂಗಳೂರಲ್ಲಿ!ಜಗತ್ತಿನ ಶ್ರೇಷ್ಠ ಹೃದಯ ಚಿಕಿತ್ಸಾ ಕೇಂದ್ರ ಇರುವುದು ನಮ್ಮ ಬೆಂಗಳೂರಲ್ಲಿ!

ಮಗುವಿನ ಹೃದಯನಾಳದಲ್ಲಿ ಕೇವಲ 3 ಎಂಎಂ ಮಾತ್ರ ಜಾಗವಿತ್ತು. ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದು, ಮಗುವಿನ ಪೋಷಕರು ಸಂತಸಗೊಂಡಿದ್ದಾರೆ.

ಹಿರಿಯೂರು: ಪೋಷಕರ ಬಳಿ ಮಗು ಸೇರಿಸಿ, ಮಾನವೀಯತೆ ಮೆರೆದ ಶಾಸಕಿ ಕೆ.ಪೂರ್ಣಿಮಾ ಹಿರಿಯೂರು: ಪೋಷಕರ ಬಳಿ ಮಗು ಸೇರಿಸಿ, ಮಾನವೀಯತೆ ಮೆರೆದ ಶಾಸಕಿ ಕೆ.ಪೂರ್ಣಿಮಾ

   IPL ನಂತ್ರ ಆಟಗಾರರು ಕ್ವಾರಂಟೈನ್ ಫಿಕ್ಸ್ | Oneindia Kannada

   ಹೃದ್ರೋಗ ತಜ್ಞ ಡಾ. ಅರುಣ ಕೆ.ಬಬ್ಲೇಶ್ವರ, ಮುಖ್ಯ ಶಸ್ತ್ರ ಚಿಕಿತ್ಸಕ ಡಾ. ರವಿವರ್ಮ ಪಾಟೀಲ್, ಅರವಳಿಕೆ ತಜ್ಞರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

   English summary
   Dharwad Narayana heart centre doctors conducted successful heart operation for the 20 days old child.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X