ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿ ವಿವಾದ: ಕೋರ್ಟ್ ಗೆ ಮಹತ್ವದ ದಾಖಲೆ ಸಲ್ಲಿಸಲು ರಾಜ್ಯ ಸಿದ್ಧತೆ

|
Google Oneindia Kannada News

ಧಾರವಾಡ, ಡಿಸೆಂಬರ್ 20 : ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ನೀಡಿದ್ದ ಅನುಮತಿ ಪತ್ರದ ದಾಖಲೆಯನ್ನು ವಿಚಾರಣೆ ವೇಳೆ ಹಾಜರಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನವಲಗುಂದದಲ್ಲಿ ಮತ್ತೆ ಹೊತ್ತಿಕೊಂಡ ಕಳಸಾ-ಬಂಡೂರಿ ಕಿಚ್ಚು ನವಲಗುಂದದಲ್ಲಿ ಮತ್ತೆ ಹೊತ್ತಿಕೊಂಡ ಕಳಸಾ-ಬಂಡೂರಿ ಕಿಚ್ಚು

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹದಾಯಿ ವಿಚಾರವಾಗಿ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ 2003ರ ಆ.28 ರಂದು ನೀಡಿದ್ದ ಅನುಮತಿ ಪತ್ರದ ದಾಖಲೆಯನ್ನು 2018 ರ ಫೆ.6 ರಂದು ನಡೆಯುವ ವಿಚಾರಣೆ ವೇಳೆ ಹಾಜರು ಪಡಿಸಲು ನಿರ್ಧರಿಸಿದೆ.

State Govt to file central approval letter in trubunal for Mahadayi

ರಾಜ್ಯ ಸರ್ಕಾರಕ್ಕೆ ಗೋವಾ ವಿರುದ್ದ ವಾದ ಮಂಡಿಸಲು ಈ ದಾಖಲೆ ಪ್ರಬಲ ಅಸ್ತ್ರ ಎಂದೇ ಪರಿಗಣಿಸಲಾಗಿದೆ. ಮಂಗಖವಾರ ಸಭೆ ನಡೆಸಿದ ಹಿರಿಯ ಅಧಿಕಾರಿಗಳ ಕೇಂದ್ರದ ಅನುಮತಿ ಪತ್ರದ ಬಗ್ಗೆ ಚರ್ಚಿಸಿದ್ದು ವಿಚಾರಣೆಯಲ್ಲಿ ಇದೇ ದಾಖಲೆ ಪ್ರಮುಖವಾಗಿಸಿ ವಾದ ಮಂಡಿಸುವಂತೆ ರಾಜ್ಯದ ಪರ ವಕೀಲ ಮೋಹನ್ ಕಾತರಕಿಗೆ ತಿಳಿಸಲು ತೀರ್ಮಾನಿಸಿದೆ.

ಡಿಸೆಂಬರ್ 15ರೊಳಗೆ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸುತ್ತೇನೆ : ಯಡಿಯೂರಪ್ಪಡಿಸೆಂಬರ್ 15ರೊಳಗೆ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸುತ್ತೇನೆ : ಯಡಿಯೂರಪ್ಪ

ಅಚ್ಚರಿ ಎಂದರೆ 2003ರಲ್ಲೇ ಯೋಜನೆಗೆ ಅನುಮತಿ ದೊರೆತರೂ ಜಲಸಂಪನ್ಮೂಲ ಇಲಾಖೆಯಲ್ಲಿ ಈ ಬಗ್ಗೆ ದಾಖಲೆ ಇರಲಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅನುಮತಿ ಪತ್ರ ಪಡೆದುಕೊಂಡಿರು ಬಗ್ಗೆ ಪ್ರಸ್ತಾಪಿಸಿದ್ದರೂ, ಸರ್ಕಾರದ ಬಳಿ ದಾಖಲೆ ಇರದ ಕಾರಣ ಪರಿಸರಕ್ಕೆ ಹಾನಿಯಾಗುತ್ತದೆ ಎಂದೇ ಗೋವಾ ಖ್ಯಾತೆ ತೆಗೆದಿತ್ತು.

ಸುಪ್ರೀಂಕೋರ್ಟ್ ಸಹ ಇದೇ ವಾದ ಮಂಡಿಸಿತ್ತು. ಅಂತಿಮವಾಗಿ ಸಚಿವ ಎಚ್.ಕೆ. ಪಾಟೀಲ್ ವಿಶೇಷ ಕರ್ತವ್ಯಾಧಿಕಾರಿ ಲಕ್ಷ್ಮೀಕಾಂತ ಜೋಷಿ ಆರ್ ಟಿ ಐ ಮೂಲಕ ದಾಖಲೆ ಪಡೆದಿದ್ದಾರೆ.

ಡಿ.22ರಂದು ಬಿಜೆಪಿ ಸಭೆ: ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಮಹದಾಯಿ ವಿವಾದ ಪರಿಹಾರ ಸೂತ್ರ ಘೋಷಿಸುವ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಪರಿವರ್ತನಾ ಯಾತ್ರೆ ಡಿ.೨೨ಕ್ಕೆ ಮುಂದೂಡಲಾಗಿದೆ. ಗೋವಾ ಸಿಎಂ ಹಾಗೂ ಬಿಜೆಪಿ ವರಿಷ್ಠರ ಜತೆಗೆ ಸಭೆ ನಡೆಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಗುರುವಾರ ಮಹತ್ವದ ಸಭೆ ಸಾಧ್ಯತೆ ಇದೆ.

English summary
State Government collected major document regarding Mahadayi river project which is related to sentral ecology permission. State is planning to file that document in tribunal as affidavit in next hearing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X