• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಮೋದ್ ಮುತಾಲಿಕ್ ಆಗ್ರಹ: ಕಾಳಿ ಸ್ವಾಮೀಜಿಗಳ ಮುಖಕ್ಕೆ ಮಸಿ ಬಳಿದವರು ದಾಖಲೆ ಬಿಡುಗಡೆ ಮಾಡಲಿ..!

By ಧಾರವಾಡ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 13: ಹಿಂದೂ ಪರ ಹೋರಾಟಗಾರ ಕಾಳಿ ಸ್ವಾಮೀಜಿ ಮುಖಕ್ಕೆ ಮಸಿ ಬಳಿದ ಪ್ರಕರಣ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳದಿದ್ದಿನ್ನ ಖಂಡಿಸಿದ್ದಾರೆ.

"ಈ ಸಂಬಂಧ ನಾನು ಕಾಳಿ ಸ್ವಾಮೀಜಿ ಜೊತೆ ಮಾತಾಡಿದ್ದೇನೆ. ಕನ್ನಡ ವಿರೋಧಿಯಾಗಿ ಅವರು ಮಾತಾಡಿಲ್ಲ. ಒಂದು ಸುದ್ದಿ ಪ್ರಕಾರ ಅವರು ಕೆಂಪೇಗೌಡರಿಗೆ ಹಾಗೂ ಕುವೆಂಪು ಅವರಿಗೆ ಬೈದಿದಾರೆ ಎಂದು ಮಾಹಿತಿ ಬಂದಿದೆ. ಆ ರೀತಿಯಲ್ಲಿ ಕಾಳಿ ಸ್ವಾಮಿಗಳು ಮಾತನಾಡಿದ್ದೇ ಆದಲ್ಲಿ ಮಸಿ ಬಳಿದವರು ಅದರ ದಾಖಲೆ ಬಿಡುಗಡೆ ಮಾಡಬೇಕು," ಎಂದು ಆಗ್ರಹ ಮಾಡಿದರು.

ನಾಡ ದ್ರೋಹಿ ರೀತಿಯಲ್ಲಿ ಕಾಳಿ ಸ್ವಾಮೀಜಿಗಳು ಮಾತಾಡಿಲ್ಲ..!

ಈ‌ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವ ಮೂಲಕ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಒಂದು ಸುದ್ದಿ ಪ್ರಕಾರ ಅವರು ಕೆಂಪೇಗೌಡರಿಗರ ಹಾಗೂ ಕುವೆಂಪು ಅವರಿಗೆ ಬೈದಿದಾರೆ ಎಂದು ಸುದ್ದಿ ಹರಿದಾಡಿದೆ. ಆದರೆ ನಾನು ಅವರ ಜೊತೆ ಮಾತಾಡಿ ಸವಿಸ್ತಾರವಾಗಿ ಎಲ್ಲಾ ಮಾಹಿತಿಗಳ ಕಲೆ ಹಾಕಿದೆ. ನಾಡ ದ್ರೋಹ ರೀತಿಯಲ್ಲಿ ಕಾಳಿ ಸ್ವಾಮೀಜಿಗಳು ಮಾತಾಡಿಲ್ಲ. ಅಕಸ್ಮಾತ್ತಾಗಿ ಆ ರೀತಿ ಏನಾದರೂ ಮಾತನಾಡಿರುವ ದಾಖಲೆ ಮಸಿ ಬಳಿದ ದಾಳಿಕೋರರ ಬಳಿ ಇದ್ದರೆ ಕೂಡಲೇ ದಾಖಲೆ ಬಿಡುಗಡೆ ಮಾಡಬೇಕು. ಈ‌ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವದು ಅಕ್ಷಮ್ಯ ಅಪರಾಧ ಮಾಡಿದಂತೆ. ನೀವು ಕ್ಷಮೆ ಕೇಳಬೇಕು, ನಿಮಗೆ ಏನಾದ್ರು ನೋವಾಗಿದ್ದರೆ ಕೂತು ಚರ್ಚೆ ಮಾಡಬಹುದಿತ್ತು. ಅದರ ಮುಂದುವರೆದ ಭಾಗವಾಗಿ ನಿಮಗೆ ಏನಾದರು ತಪ್ಪು ಎನಿಸಿದ್ದರೆ ಕೇಸ್ ಹಾಕಬಹುದಾಗಿತ್ತು ಎಂದರು.

ಶ್ರೀರಾಮಸೇನೆ ಇದನ್ನ ಖಡಿಸುತ್ತೆ, ಕ್ಷಮೆ ಕೇಳಲೇಬೇಕು..!

ಈ ರೀತಿ ಖಾವಿಧಾರಿ ಸನ್ಯಾಸಿಗೆ ಮಸಿ ಬಳಿಯುವಂತಾದ್ದು ಸನ್ಯಾಸಿಗಳಿಗೆ ಮಾಡಿದ ಬಹಳ ದೊಡ್ಡ ಅಪರಾಧ ಮಾಡಿದ್ದೀರಿ. ನಾಳೆ ಇನ್ನೊಬ್ಬರು ಸ್ವಾಮೀಜಿಗೂ ಇದೇ ರೀತಿಯ ಕೆಲಸ ಮಾಡಬಹುದು. ಈ ರೀತಿಯ ಅಪರಾಧವನ್ನ ನಮ್ಮ ಶ್ರೀರಾಮಸೇನೆ ಖಡಿಸುತ್ತದೆ. ಕೂಡಲೇ ದಾಳಿಕೋರರು ಕ್ಷಮೆ ಕೇಳಬೇಕು, ಯಾರೆಲ್ಲಾ ಇದ್ದಾರೆ ಅವರ ಮೇಲೆ ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.

ಜ್ಜಾನ ವ್ಯಾಪಿ ಮಸೀದಿ ಕೂಡ ಹಿಂದೂಗಳದ್ದೇ

ಕಾಶಿ ವಿಶ್ವನಾಥ ದೇವಾಲಯ ಅಷ್ಟೇ ಅಲ್ಲ ಮಥುರಾ ಹೀಗೆ ಸಾವಿರಾರು ದೇವಸ್ಥಾನಗಳನ್ನ ಕೆಡವಿ ಮಸೀದಿಗಳನ್ನ ಕಟ್ಟಿರುವುದಕ್ಕೆ ದಾಖಲೆಗಳಿವೆ. ಸದ್ಯ ಕಾಶಿ ವಿಶ್ವನಾಥ್ ದೇವಲಯಕ್ಕೆ ಸಂಬಂಧಿಸಿದಂತೆ ಅಲ್ಲಿ ಸರ್ವೆ ಮಾಡಲು ಅಡ್ಡಿ ಮಾಡುವುದನ್ನ ನೋಡಿದರೆ ದಾದಾಗಿರಿ ಮಾಡುವಂತೆ ಕಾಣುತ್ತೆ. ಅಲ್ಲಿ ಬಸವಣ್ಣ ಇದ್ದಾನೆ, ಈಶ್ವರ ಲಿಂಗ‌ ಅಲ್ಲಿ ಇತ್ತು ಎಂಬ ಸಾಕ್ಷಿ ಇದೆ. ಜ್ಞಾನ ವ್ಯಾಪಿ ಮಸೀದಿ ಎಂದು ಇದೆ,‌ ಈ ರೀತಿ ಹೆಸರು ಎಲ್ಲೂ ಸಿಗಲಿಕ್ಕಿಲ್ಲ. ಆ ಇಡಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಸತ್ಯವಾಗಿದೆ. ಕೋರ್ಟ್ ನಿಂದ ಸರ್ವೆ ಅವಕಾಶ ಸಿಕ್ಕಿದೆ,‌ ಈಗ‌ ತಡೆದರೆ ಒಡೆದು ಒಳಗೆ ಹೋಗಬೇಕು. ಪೊಲೀಸ್ ಇಲಾಖೆ ಸಹಕಾರ ತಗೊಬೇಕು ಎಂದರು.

Sri Rama Sena Chief Pramod Mutalik Reaction to Black Ink Thrown to Rishi Kumar Swamiji

ನಿನ್ನೆ ವಾರಣಾಸಿ ನ್ಯಾಯಾಲಯ ಆದೇಶ ಕೊಟ್ಟಿದ್ದು ಅತ್ಯಂತ ಸಮರ್ಪಕವಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಕಾಶಿ ವಿಶ್ವನಾಥ ಗೋಡೆ ಮೇಲೆ ಇರುವ ವಿಗ್ರಹಗಳಿಗೆ ಪೂಜೆ ಮಾಡುತ್ತಾ ಬಂದಿದ್ದರು. ಮುಲಾಯಂ ಸಮಯದಲ್ಲಿ ಮುಸ್ಲಿಮರ ಓಲೈಕೆಗಾಗಿ ಅದನ್ನ ತಡೆದಿದ್ರು. ಅರ್ಚಕರು ಹಾಗೂ ಮಹಿಳೆಯರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದು, ಕೋರ್ಟ್ ಅದನ್ನ ಸರ್ವೆ ಮಾಡಿ 17ರ ಒಳಗೆ ವರದಿ ಕೊಡಬೇಕೆಂಬ ಆದೇಶ ಸ್ವಾಗತ ಮಾಡುತ್ತೇನೆ ಎಂದರು.

1991 ರ ಕಾಯ್ದೆಯನ್ನ ಕೇಂದ್ರ ಸರ್ಕಾರ ರದ್ದು ಮಾಡುವಂತೆ ಒತ್ತಾಯ ಮಾಡುವೆ..!

ರಾಜೀವ್‌ ಗಾಂಧಿ 1991 ರ ಕಾಯ್ದೆಯನ್ನ ಮುಸ್ಲಿಂ ಒಲೈಕೆಗಾಗಿ ಮಾಡಿದ್ದು, ದೇವಸ್ಥಾನಗಳ‌ ನಾಡು ಇದು. ಅದನ್ನ ನಾವು ವಾಪಸ್ ಪಡೆಯುವಂತ ಕೇಂದ್ರ ಸರ್ಕಾರ ಸಮರ್ಪಕ ಈ ಕೆಲಸ ಮಾಡಬೇಕು. ಈ ಕಾಯ್ದೆಯನ್ನ ರದ್ದು ಮಾಡಬೇಕು. ಹಿಂದೂಸ್ತಾನ ಇದು, ದೇವಸ್ಥಾನಗಳ ನಾಡು ಇದು. ನಮ್ಮ ದೇವಸ್ಥಾನಗಳ ಕೆಡವಿ ಮಸೀದಿ ಕಟ್ಟಿರುವುದನ್ನ ಪುನಃ ತೆಗೆದುಕೊಳ್ಳುವುದು ನಮ್ಮ ಹಕ್ಕು ಎಂದು ಧಾರವಾಡದಲ್ಲಿ ಹಿಂದೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಒಳಗೆ ಬಾಂಬ್ ಇವೆಯಾ, ಇತಿಹಾಸ ಒಪ್ಪಿಕೊಳ್ಳಬೇಕು..!

   Virat Kohli ಪಂದ್ಯ ಮುಗಿದಾಗ ಕಂಡುಬಂದಿದ್ದು ಹೀಗೆ | Oneindia Kannada

   ಮಸೀದಿ ಒಳಗೆ ಬಾಂಬ್ ಇದ್ಯಾ..? ಇದೇ ರೀತಿ ಮಾಡಿನೇ ರಾಮ‌ ಮಂದಿರ ನಮ್ಮ ಕೈಗೆ ಬಂದಿದೆ. ಅದೇ ಮಾದರಿಯಲ್ಲಿ ಈ ಮಸೀದಿ ಹಿಂದೂಗಳದ್ದೇ, ನೀವು ಸ್ನೇಹದಿಂದ ಬಿಟ್ಟು ಕೊಟ್ಟರೆ ನಮ್ಮ ನಿಮ್ಮಲ್ಲಿ ನಮ್ಮ-ನಿಮ್ಮಲ್ಲಿ ಪ್ರೀತಿವಿಶ್ವಾಸ ಇರಲಿದೆ. ಅದಕ್ಕೆ ಅಡ್ಡಿ ಮಾಡಿದರೆ ಸಂಘರ್ಷ, ದ್ವೇಷ ಉಳಿಯಲಿದೆ. ಇದಕ್ಕೆ ದಾರಿಮಾಡಿ ಕೊಡದಂತೆ ಮುಸ್ಲಿಂ ಸಮಾಜ ಸಹಕರಿಸಲಿ. 1991 ರಲ್ಲಿ ಒಂದು ಕಾಯ್ದೆ ಜಾರಿ ಮಾಡಿದ್ದಾರೆ ಅದೇನೆಂದರೆ ಯಾವ ದೇವಸ್ಥಾನಗಳು, ಮಸೀದಿ, ಚರ್ಚ್ ಯಾವ ರೀತಿಯಲ್ಲಿ ಇವೆ ಅವು ಹಾಗೆಯೇ ಇರಬೇಕು ಅಂತ ರಾಜೀವ್ ಗಾಂಧಿ ಕೇಸ್ ಹಾಕಿದ್ದರಿಂದ ಇವೆಲ್ಲವುದಕ್ಕೂ ಅಡ್ಡಿಯಾಗುತ್ತಿದ ಎಂದರು.

   English summary
   Srirama Sena chief Pramod Muthalik has demanded the release of a record of ink thrown face of pro-Hindu militant Kali Swamiji.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X