ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲಿದ್ದಲು ಗಣಿ ಖಾಸಗೀಕರಣ: ಎಸ್ ಆರ್ ಹಿರೇಮಠ ವಿರೋಧ

|
Google Oneindia Kannada News

ಧಾರವಾಡ, ಮೇ 22: ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದಕ್ಕೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ವಿರೋಧ ವ್ಯಕ್ತಪಡಿಸಿದ್ದಾರೆ.

Recommended Video

ಅಮೆರಿಕಾದಲ್ಲಿ ಸತ್ತವರ ಸಂಖ್ಯೆ ಕೇಳಿದ್ರೆ ಭಯ ಆಗುತ್ತೆ,ಮೋದಿ ಪ್ರಧಾನಿಯಾಗಿರೋದು ಭಾರತೀಯರ ಪುಣ್ಯ

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣ ಮಾಡಿದರೆ ಹಗಲು ದರೋಡೆ ಮಾಡಲು ಅನುಕೂಲವಾಗುತ್ತದೆ. ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಪ್ರಹ್ಲಾದ ಜೋಶಿ ಅವರು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಹೋರಾಟಗಾರ ಎಸ್ ಆರ್ ಹಿರೇಮಠ್ ಮೇಲೆ ಹಲ್ಲೆ ಆಗಿದ್ದು ಏಕೆ?ಹೋರಾಟಗಾರ ಎಸ್ ಆರ್ ಹಿರೇಮಠ್ ಮೇಲೆ ಹಲ್ಲೆ ಆಗಿದ್ದು ಏಕೆ?

ಈ ಹಿಂದೆ ಕರ್ನಾಟಕದ ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರು ಗಣಿಗಾರಿಕೆಯಲ್ಲಿ ಹಗಲು ದರೋಡೆ ಮಾಡಿದಂತೆ ದೇಶದಲ್ಲೂ ಗಣಿಗಾರಿಕೆಗಳು ಖಾಸಗೀಕರಣವಾದರೆ ಹಗಲು ದರೋಡೆಯಾಗುವುದಂತೂ ಸತ್ಯ. ಇದರಿಂದ ದೇಶದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಕೇಂದ್ರ ಸರ್ಕಾರ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣಗೊಳಿಸುವುದನ್ನು ಕೈಬಿಡಬೇಕು ಎಂದು ಹಿರೇಮಠ ಒತ್ತಾಯಿಸಿದರು.

Social Activist SR Hiremath Opposes Coal Mines Privatization

ದೇಶದ ಗಣಿ ಸಂಪತ್ತು ಮೋದಿ ಅವರಿಂದಾದರೂ ಉಳಿಯುತ್ತದೆ ಎಂದು ನಾವು ನಂಬಿದ್ದೆವು. ಆದರೆ, ಅವರೇ ಈಗ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಈ ಸಂಬಂಧ ನಾವು ರಾಷ್ಟ್ರದಾದ್ಯಂತ ಜನಾಂದೋಲನ ರೂಪಿಸುತ್ತೇವೆ ಎಂದರು.

English summary
Social Activist SR Hiremath Opposes Coal Mines Privatization. central government dession makes desaster for natural resourse. he said at press meet in dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X