ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ಖಾಸಗಿ ಶಾಲೆಯ 8 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು

|
Google Oneindia Kannada News

ಧಾರವಾಡ, ಜೂನ್ 15: ಒಂದೆಡೆ ಶಾಲೆಯ ಪುನರಾರಂಭದ ಕುರಿತು ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ ಒಂದೇ ಶಾಲೆಯ 8 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಧಾರವಾಡದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾರಂಭದ ಕುರಿತಂತೆ ಜೂನ್ 6 ರಂದು ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕಿಯಿಂದ ಉಳಿದ ಏಳು ಮಂದಿ ಶಿಕ್ಷಕರಿಗೆ ಸೋಂಕು ತಗುಲಿದೆ.

ಮೂರು ದಿನಗಳ ಹಿಂದಷ್ಟೆ ಶಾಲೆಯ ಶಿಕ್ಷಕಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಎಂಟು ಶಿಕ್ಷಕರಿಗೆ ಸೋಂಕು ತಗುಲಿದಂತಾಗಿದೆ. ಕೊರೊನಾದಿಂದಾಗಿ ಬಂದ್ ಆಗಿರುವ ಶಾಲೆಗಳನ್ನು ಆರಂಭಿಸಬೇಕೋ, ಬೇಡವೋ ಎಂಬ ಸಂದಿಗ್ಧತೆಯಲ್ಲಿರುವ ವೇಳೆಯೇ ಶಿಕ್ಷಕರಿಗೆ ಸೋಂಕು ತಗುಲಿರುವುದು ಪಾಲಕರು, ಮಕ್ಕಳಲ್ಲಿ ತೀವ್ರ ಆತಂಕ ಮೂಡಿದೆ.

ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ಶಾಲೆಗಳನ್ನು ತೆರೆಯದಿರಲು ನಿರ್ಧಾರಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ಶಾಲೆಗಳನ್ನು ತೆರೆಯದಿರಲು ನಿರ್ಧಾರ

ಧಾರವಾಡ ನಗರದ ಕಿಲ್ಲಾ ಸಮೀಪದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭ ಸಂಬಂಧ ಸಭೆ ನಡೆದಿತ್ತು. ಇನ್ನುಳಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಉಳಿದ ಶಿಕ್ಷಕರ ವರದಿ ಇನ್ನೇನು ಬರಬೇಕಿದೆ. ಅಲ್ಲಿಯವರೆಗೆ ಹೋಂ ಕ್ವಾರಂಟೈನ್‌ನಲ್ಲಿರಲು ಆದೇಶಿಸಲಾಗಿದೆ. ಸೋಂಕು ದೃಢಪಟ್ಟ ಶಿಕ್ಷಕರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಕುರಿತು ಆರೋಗ್ಯ ಇಲಾಖೆ ಮಾಹಿತಿ ಪಡೆಯುತ್ತಿದೆ.

 Seven Primary Contacts Of Dharwad School Teacher Contract Coronavirus

ಶಿಕ್ಷಕವೃಂದ, ಬೋಧಕೇತರ ಸಿಬ್ಬಂದಿ ಸೇರಿ 24 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಗೆ ಹಾಜರಾಗಿದ್ದ ಸೋಂಕಿತ ಶಿಕ್ಷಕಿಯಿಂದ ಆರು ಶಿಕ್ಷಕಿಯರು ಹಾಗೂ ಒಬ್ಬ ಶಿಕ್ಷಕ ಸೇರಿ ಒಟ್ಟು 7 ಮಂದಿಗೆ ವೈರಸ್ ತಗುಲಿದೆ.

ಧಾರವಾಡದ ಯಾಲಕ್ಕಿ ಶೆಟ್ಟರ ಕಾಲೊನಿ ನಿವಾಸಿಯಾದ ಶಿಕ್ಷಕಿಯೊಬ್ಬರು ಪಿ 5970 ತೀವ್ರ ಕೆಮ್ಮು ,ನೆಗಡಿಯಿಂದ ಬಳಲುತ್ತಿದ್ದರು. ಇವರನ್ನು ತಪಾಸಣೆಗೆ ಒಳಪಡಿಸಿದಾಗ ಜೂ 11 ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

English summary
The number of primary and secondary contacts of the Covid-19 patients testing positive for the virus is increasing in Dharwad and Ballari districts. On Sunday, seven primary contacts of a 29-year-old private school teacher in Dharwad have tested positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X