ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

LIVE:ಧಾರವಾಡದಲ್ಲಿ ಕಟ್ಟಡ ಕುಸಿತ:ಐವರ ಸಾವು, ಅವಶೇಷಗಳಡಿ 40 ಜನ

|
Google Oneindia Kannada News

ಧಾರವಾಡ, ಮಾರ್ಚ್ 19: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಏಳು ಅಂತಸ್ತಿನ ಕಟ್ಟಡ ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಟ್ಟು ಏಳು ಅಂತಸ್ತಿನ ಕಟ್ಟಡವು ಇದಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಕಟ್ಟಡದಡಿ ಸಿಲುಕಿದ್ದಾರೆ. ಸಂಪೂರ್ಣ ಕಟ್ಟಡವೇ ಧರೆಗುರುಳಿದೆ.

ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಮಧ್ಯಾಹ್ನ ಸುಮಾರು 4 ಗಂಟೆ ಹೊತ್ತಿಗೆ ಅವಗಢ ಸಂಭವಿಸಿದೆ.

Seven floor under construction complex collapsed in Dharwad

ಧಾರವಾಡದ ಕೆವಿಜಿ ಬ್ಯಾಂಕ್ ಬಳಿ ಇರುವ ಕಾಂಪ್ಲೆಕ್ಸ್ ಇದಾಗಿದೆ. ಗಾಯಾಳುಗಳನ್ನು ಬಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿವೆ.

ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಕುಸಿದಿರುವ ಸಾಧ್ಯತೆ, ಜೆಸಿಬಿಯಿಂದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಏಕಾ ಏಕಿ ಒಂದು ಅಂತಸ್ತು ಕುಸಿದು ಬಿತ್ತು ಅದರಿಂದ ಇಡೀ ಕಟ್ಟಡವೇ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

Seven floor under construction complex collapsed in Dharwad-live

ಪ್ರತ್ಯಕ್ಷ ದರ್ಶಿಗಳು ಹೇಳುವ ಪ್ರಕಾರ ಅವಶೇಷಗಳಡಿ 150ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆ ಸೇರಿದ್ದ ಕಟ್ಟಡ ಎನ್ನುವ ಮಾತುಗಳು ಕೇಳಿಬಂದಿತ್ತು .ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಏಳರಿಂದ ಎಂಟು ಜನ ಮಾಲೀಕರಿದ್ದಾರೆ ಅದರಲ್ಲಿ ನಮ್ಮ ಸಂಬಂಧಿಕರೂ ಇದ್ದಾರೆ ಒಬ್ಬರು ಎಂದಿದ್ದಾರೆ.

Newest FirstOldest First
1:02 PM, 20 Mar

ಧಾರವಾಡ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ
12:52 PM, 20 Mar

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಣೆ
10:33 AM, 20 Mar

ಧಾರವಾಡ ಕಟ್ಟಡ ಕುಸಿತ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ
9:59 AM, 20 Mar

ಕಟ್ಟಡದ ಅವಶೇಷಗಳಡಿ ಸಿಲುಕಿರುವವರಿಗಾಗಿ ಸುರಂಗ ಶೋಧ
9:59 AM, 20 Mar

ಕಟ್ಟಡ ಕುಸಿತ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷ ಆಗಿಯೇ ಆಗುತ್ತದೆ- ಸಚಿವ ಆರ್‌ವಿ ದೇಶಪಾಂಡೆ ಭರವಸೆ
9:36 AM, 20 Mar

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್‌ವಿ ದೇಶಪಾಂಡೆ ಸ್ಥಳಕ್ಕೆ ಭೇಟಿ
9:35 AM, 20 Mar

ಧಾರವಾಡ ನಿರ್ಮಾಣ ಹಂತದ ಕಟ್ಟಡ ಕುಸಿತದಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿಕೆ
Advertisement
9:20 PM, 19 Mar

ಕುಸಿತ ಬಹುಮಹಡಿ ಕಟ್ಟಡದ ಅಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು, ಇನ್ನೂ ಸುಮಾರು 40 ಮಂದಿ ಅವಶೇಷಗಳ ಅಡಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
7:20 PM, 19 Mar

ಬಸವರಾಜ ನಿಗಡಿ, ಗಂಗಾಧರ ಶಿಂತ್ರೆ, ರವಿ ಸೊಬ್ರದ ಅವರುಗಳು ಧಾರವಾಡದಲ್ಲಿ ಕುಸಿದಿರುವ ಕಟ್ಟಡದ ಮಾಲೀಕರು, ಇದರಲ್ಲಿ ಗಂಗಾಧರ ಶಿಂತ್ರೆ ಅವರು ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿ.
7:17 PM, 19 Mar

ಧಾರವಾಡದಲ್ಲಿ ನಡೆದಿರುವ ಅವಘಡದ ಸುದ್ದಿ ಕೇಳಿ ಆಘಾತವಾಗಿದೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ ನಲ್ಲಿ ಹೇಳಿದ್ದಾರೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣೆ ಶೀಘ್ರವಾಗಿ ಆಗಬೇಕು, ಗಾಯಗೊಂಡವರಿಗೆ ಪರವಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.
7:15 PM, 19 Mar

ಧಾರವಾಡದಲ್ಲಿ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದ 10ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.
7:14 PM, 19 Mar

ಸಿದ್ದರಾಮಯ್ಯ ಟ್ವೀಟ್
Advertisement
6:24 PM, 19 Mar

ಧಾರವಾಡದಲ್ಲಿ ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದ ಬಿಎಸ್‌ಎಫ್ ಪಡೆ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದೆ. ಸ್ಥಳದಲ್ಲಿನ ಜನರನ್ನು ದೂರ ಕಳಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಲು ಸಹಕಾರ ನೀಡುತ್ತಿದೆ.
6:19 PM, 19 Mar

ಕಟ್ಟಡ ಕುಸಿದ ಜಾಗದಲ್ಲಿ ನೂರಾರು ಜನರು ಸೇರಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
6:18 PM, 19 Mar

ಧಾರವಾಡ ಕಟ್ಟಡ ಕುಸಿತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ನಾಗರಾಜ್ ಆದೇಶ ಹೊರಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
5:59 PM, 19 Mar

ಎಚ್.ಡಿ.ಕುಮಾರಸ್ವಾಮಿ ಟ್ವೀಟ್
5:56 PM, 19 Mar

ಕಟ್ಟಡ ಕುಸಿತದ ಅವಶೇಷಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಿ, ಕಾರ್ಯಾಚರಣೆ ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ
5:54 PM, 19 Mar

ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ 15ಕ್ಕೂ ಅಧಿಕ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ
5:54 PM, 19 Mar

8ಕ್ಕೂ ಹೆಚ್ಚು ಜೆಸಿಬಿಗಳ ಸಹಾಯದಿಂದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ
5:49 PM, 19 Mar

ಮೂರು ಅಗ್ನಿಶಾಮಕ ದಳಗಳು, ಮತ್ತು ಐದು ಜೆಸಿಬಿ ಯಂತ್ರಗಳನ್ನು ಬಳಸಿ ರಕ್ಷಣಾ ಕಾರ್ಯವನ್ನು ನಡೆಸಲಾಗುತ್ತಿದೆ.
5:38 PM, 19 Mar

ವಿಶೇಷ ವಿಮಾನದಲ್ಲಿ ಧಾರವಾಡಕ್ಕೆ ಹೆಚ್ಚುವಳಿ ಪಡೆಗಳು ಆಗಮಿಸುತ್ತಿದ್ದು, ರಕ್ಷಣಾ ಕಾರ್ಯದಲ್ಲಿ ನೆರವಾಗಲಿವೆ.
4:48 PM, 19 Mar

ಇದುವರೆಗೆ 10-15 ಮಂದಿ ರಕ್ಷಣೆ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು
4:44 PM, 19 Mar

ಗಾಯಾಳುಗಳನ್ನು ಸಾಗಿಸಲು 10 ಅಂಬುಲೆನ್ಸ್ ನಿಯೋಜನೆ
4:43 PM, 19 Mar

ಧಾರವಾಡದ ಕುಮಾರೇಶ್ವರನಗರದಲ್ಲಿ ನಡೆದ ಅವಘಡ
4:42 PM, 19 Mar

ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಕುಸಿದಿರುವ ಶಂಕೆ, ಜೆಸಿಬಿಯಿಂದ ಅವಶೇಷಗಳ ತೆರವು ಕಾರ್ಯಾಚರಣೆ
4:37 PM, 19 Mar

ಅವಶೇಷಗಳಡಿ ಸಿಲುಕಿದ್ದವರಲ್ಲಿ ಓರ್ವ ಸಾವು, ಹಲವರ ಸ್ಥಿತಿ ಗಂಭೀರ
4:33 PM, 19 Mar

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಅವಶೇಷಗಳಡಿ 150ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ
4:33 PM, 19 Mar

ಅಂಗಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು, ಅಂಡಿಗೆ ಬಂದವರೂ ಕೂಡ ಸಿಲುಕಿರುವ ಶಂಕೆ

English summary
More than 70 people struck under construction building collapse in Dharwad, rescue operation is under going
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X