ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ : ಜು.1ರಿಂದ ಬಿಆರ್‌ಟಿಸ್‌ ಬಸ್‌ಗೆ ಪ್ರತ್ಯೇಕ ಪಥ

|
Google Oneindia Kannada News

ಧಾರವಾಡ, ಜೂನ್ 27 : ಜುಲೈ 1ರಿಂದ ಪ್ರತ್ಯೇಕ ಕಾರಿಡಾರ್‌ನಲ್ಲಿ ಬಿ.ಆರ್.ಟಿ.ಎಸ್. ಬಸ್ ಸಂಚಾರ ನಡೆಸಲಿವೆ. ಖಾಸಗಿ ವಾಹನಗಳು ಕಾರಿಡಾರ್‌ನಲ್ಲಿ ಸಂಚಾರ ನಡೆಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಗುರುವಾರ ಬಸ್ ಸಂಚಾರದ ಕುರಿತು ಮಾಹಿತಿ ಪಡೆದುಕೊಂಡರು. ಅವಳಿ ನಗರಗಳ ನಡುವೆ ಬಿ.ಆರ್.ಟಿ.ಎಸ್. ಬಸ್‌ಗಳು ಸುಗಮವಾಗಿ ಸಂಚರಿಸಲು ಮತ್ತು ಬಸ್ ಸಂಚಾರಕ್ಕಾಗಿ ನಿರ್ಮಿಸಿರುವ ವಿಶೇಷ ಕಾರಿಡಾರ್ ರಸ್ತೆಯಲ್ಲಿ ಖಾಸಗಿ ವಾಹನಗಳು ಸಂಚರಿಸದಂತೆ ಭದ್ರತಾ ಸಿಬ್ಬಂದಿ ನೇಮಿಸಲಾಗುತ್ತದೆ ಎಂದರು.

ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭ

ಕೋರ್ಟ್ ವೃತ್ತದಲ್ಲಿರುವ ಬಿ.ಆರ್.ಟಿ.ಎಸ್ ಬಸ್‌ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಧಾರವಾಡ ಮಿತ್ರಸಮಾಜದಿಂದ ಹುಬ್ಬಳ್ಳಿಯವರೆಗೆ ಬಿ.ಆರ್.ಟಿ.ಎಸ್. ಬಸ್‌ಸಂಚಾರಕ್ಕಾಗಿ 24 ಕಿ.ಮೀ.ರಸ್ತೆ ನಿರ್ಮಿಸಲಾಗಿದೆ ಎಂದರು.

ಬಿಎಂಟಿಸಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ನಿಗಮಬಿಎಂಟಿಸಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ನಿಗಮ

Separate corridor for BRTS bus from July 1

ಈ ಪಥದಲ್ಲಿ 31 ಬಸ್ ನಿಲ್ದಾಣ ಆರಂಭಿಸಲಾಗಿದೆ, 21 ಜಂಕ್ಷನ್ ಮಾಡಲಾಗಿದೆ. ಬಸ್‌ಗಳ ಸುಗಮ ಸಂಚಾರಕ್ಕಾಗಿ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು 70 ಹೋಮ್‌ಗಾರ್ಡ್, 120 ಸೆಕ್ಯೂರಿಟಿ ಗಾರ್ಡ ಮತ್ತು ಪೋಲಿಸ್ ಕಮಿಶನರೇಟ್‌ದಿಂದ 70 ಪೋಲಿಸ್ ಪೇದೆಗಳನ್ನು ನೇಮಿಸಲಾಗಿದೆ ಎಂದು ರಾಜೇಂದ್ರ ಚೋಳನ್ ಹೇಳಿದರು.

ಹುಬ್ಬಳ್ಳಿ-ಧಾರವಾಡ ನಡುವೆ 'ಚಿಗರಿ' ಸಂಚಾರಹುಬ್ಬಳ್ಳಿ-ಧಾರವಾಡ ನಡುವೆ 'ಚಿಗರಿ' ಸಂಚಾರ

ಬಸ್ ನಿಲ್ದಾಣ ಸೇರಿದಂತೆ ರಸ್ತೆಯುದ್ದಕ್ಕೂ ಇರುವ ಪ್ರಮುಖ ಸ್ಥಳಗಳಲ್ಲಿ ಸುಮಾರು 68 ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು. ಜುಲೈ 1ರಿಂದ ಬಸ್‌ಗಳು ಪ್ರತ್ಯೇಕ ಪಥದಲ್ಲಿ ಸಂಚಾರ ನಡೆಸಲಿವೆ ಎಂದು ತಿಳಿಸಿದರು.

English summary
BRTS bus will run in separate corridor from July 1 between Hubballi-Dharwad, Karnataka. Hubli-Dharwad BRTS Company Limited created the Bus Rapid Transit System (BRTS) corridor in 24 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X