ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

|
Google Oneindia Kannada News

ಧಾರವಾಡ, ಫೆಬ್ರವರಿ 10 : ಉತ್ತರ ಕರ್ನಟಕ ಭಾಗದ ಜನರ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಒಪ್ಪಿಗೆ ಕೊಟ್ಟಿದೆ. ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 988.3 ಕೋಟಿ ರೂ.ಗಳ ಯೋಜನೆ ಇದಾಗಿದೆ.

ಧಾರವಾಡ-ಬೆಳಗಾವಿ ನಗರಗಳ ನಡುವೆ ನೇರ ರೈಲು ಮಾರ್ಗ ನಿರ್ಮಾಣಗೊಂಡರೆ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಕಡಿತಗೊಳ್ಳಲಿದೆ. ಪ್ರಸ್ತುತ ರೈಲುಗಳು ಲೋಂಡಾ ಜಂಕ್ಷನ್ ಮೂಲಕ ಸಂಚಾರವನ್ನು ನಡೆಸುತ್ತಿವೆ.

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧ

2019ರ ನವೆಂಬರ್‌ನಲ್ಲಿ ಧಾರವಾಡ-ಬೆಳಗಾವಿ ನಡುವಿನ 90 ಕಿ. ಮೀ. ಬ್ರಾಡ್‌ ಗೇಜ್ ರೈಲು ಮಾರ್ಗದ ಸಮೀಕ್ಷೆಯನ್ನು ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಸಲ್ಲಿಸಲಾಗಿತ್ತು. ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದೆ.

 ಕೋಲಾರಕ್ಕಿಲ್ಲ ರೈಲ್ವೆ ಕೋಚ್ ಫ್ಯಾಕ್ಟರಿ; ಸುರೇಶ್ ಅಂಗಡಿ ಹೇಳಿದ್ದೇನು? ಕೋಲಾರಕ್ಕಿಲ್ಲ ರೈಲ್ವೆ ಕೋಚ್ ಫ್ಯಾಕ್ಟರಿ; ಸುರೇಶ್ ಅಂಗಡಿ ಹೇಳಿದ್ದೇನು?

ಹೊಸ ರೈಲು ಮಾರ್ಗದ ಜೊತೆ ಕಿತ್ತೂರಿನಲ್ಲಿ ರೈಲ್ವೆ ಬಿಡಿಭಾಗಳ ಹಬ್ ಅನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದಾಗಿ ಸ್ಮಾರ್ಟ್‌ ಸಿಟಿಗಳಾದ ಧಾರವಾಡ ಮತ್ತು ಬೆಳಗಾವಿಯ ಅಭಿವೃದ್ಧಿಗೂ ಸಹಾಯಕವಾಗಲಿದೆ.

ಕರ್ನಾಟಕದ 3 ಸಾವಿರ ಉದ್ಯೋಗಕ್ಕೆ ಕತ್ತರಿ ಹಾಕಿದ ಕೇಂದ್ರ ಕರ್ನಾಟಕದ 3 ಸಾವಿರ ಉದ್ಯೋಗಕ್ಕೆ ಕತ್ತರಿ ಹಾಕಿದ ಕೇಂದ್ರ

ಸುರೇಶ್ ಅಂಗಡಿ ಪ್ರಯತ್ನದ ಫಲ

ಸುರೇಶ್ ಅಂಗಡಿ ಪ್ರಯತ್ನದ ಫಲ

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗದ ಸಮೀಕ್ಷೆಯಲ್ಲಿ 2013-14ರಲ್ಲಿ ನಡೆಸಲಾಗಿತ್ತು. ಆದರೆ, ಯೋಜನೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ಸಮೀಕ್ಷೆಗೆ ಸೂಚಿಸಿದ್ದರು. 2019ರ ಆಗಸ್ಟ್‌ನಲ್ಲಿ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿತ್ತು.

90 ಕಿ. ಮೀ. ರೈಲು ಮಾರ್ಗ

90 ಕಿ. ಮೀ. ರೈಲು ಮಾರ್ಗ

ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ನೇರ ರೈಲು ಮಾರ್ಗ 90 ಕಿ. ಮೀ. ಇದ್ದು ಧಾರವಾಡದಿಂದ ಹೊರಡುವ ರೈಲು ಕಿತ್ತೂರು, ಎಂ. ಕೆ. ಹುಬ್ಬಳ್ಳಿ, ಬಾಗೇವಾಡಿ ಮೂಲಕ ಬೆಳಗಾವಿಗೆ ತಲುಪಲಿದೆ.

11 ನಿಲ್ದಾಣಗಳು

11 ನಿಲ್ದಾಣಗಳು

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗದ ಯೋಜನೆಗೆ 988.3 ಕೋಟಿ ವೆಚ್ಚವಾಗಲಿದೆ. ಈ ಮಾರ್ಗದಲ್ಲಿ 11 ನಿಲ್ದಾಣಗಳು ನಿರ್ಮಾಣವಾಗಲಿವೆ (ಈಗಾಗಲೇ 4 ನಿಲ್ದಾಣಗಳಿವೆ). ಈ ಯೋಜನೆ ಪೂರ್ಣಗೊಂಡರೆ ಧಾರವಾಡ ಮತ್ತು ಬೆಳಗಾವಿ ಅಭಿವೃದ್ಧಿಗೆ ಸಹಾಯಕವಾಗಲಿದೆ.

ಕರ್ನಾಟಕ ಸರ್ಕಾರದ ಒಪ್ಪಿಗೆ

ಕರ್ನಾಟಕ ಸರ್ಕಾರದ ಒಪ್ಪಿಗೆ

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ನೇರ ರೈಲು ಮಾರ್ಗದಲ್ಲಿ ಮಲಪ್ರಭಾ ನದಿಗೆ ಸೇತುವೆಯನ್ನು ನಿರ್ಮಾಣ ಮಾಡಬೇಕಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗುವ ದಿನಾಂಕ ತೀರ್ಮಾನವಾಗುವ ಸಾಧ್ಯತೆ ಇದೆ.

English summary
Direct railway line between Dharwad and Belagavi has been the long standing demand of people of North Karnataka. Project approved in the union budget 2020. 90 KM new broad-gauge railway line project cost Rs.988.3 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X