ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸೇಡಿಗೆ ಸೇಡು': ಬಿಜೆಪಿ ಭಿನ್ನಮತಕ್ಕೆ ತುಪ್ಪ ಸುರಿದ ಜೆಡಿಎಸ್ ಮುಖಂಡ

|
Google Oneindia Kannada News

ಧಾರವಾಡ, ಮೇ 29: ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಂಡಿದೆ ಎನ್ನುವ ಸುದ್ದಿಗೆ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎನ್.ಎಚ್. ಕೋನ ರೆಡ್ಡಿ ತುಪ್ಪ ಸುರಿಯುವ ಹೇಳಿಕೆಯನ್ನು ನೀಡಿದ್ದಾರೆ.

"ಮಾಡಿದುಣ್ಣೋ ಮಹಾರಾಯ ಎನ್ನುವ ಗಾದೆ ಮಾತಿದೆ. ಬಿಜೆಪಿಯವರು ಆಪರೇಷನ್ ಕಮಲ ಮುಂತಾದ ಪ್ರಜಾಪ್ರಭುತ್ವದ ವಿರುದ್ದದ ಕೆಲಸವನ್ನು ಮಾಡಿದ್ದು, ಈಗ ಅವರಿಗೇ ತಿರುಗುಬಾಣವಾಗುತ್ತಿದೆ"ಎನ್ನುವ ಅಭಿಪ್ರಾಯವನ್ನು ಕೋನ ರೆಡ್ಡಿ ವ್ಯಕ್ತ ಪಡಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!

"ಬಿಜೆಪಿಯಲ್ಲಿನ ಬೆಳವಣಿಗೆ ಆಶ್ಚರ್ಯವನ್ನು ಮೂಡಿಸುತ್ತಿದೆ. ಕೆಲವೊಂದು ಹಿರಿಯ ಮುಖಂಡರಿಗೆ ಸಂಪುಟದಲ್ಲಿ ಆದ್ಯತೆ ಸಿಗದೇ ಇದ್ದಿದ್ದಕ್ಕೆ ಅಸಮಾಧಾನಗೊಂಡಿರಬಹುದು"ಎಂದು ಕೋನ ರೆಡ್ಡಿ ಹೇಳಿದ್ದಾರೆ.

Reports Of Crisis In Karnataka BJP Unit: JDS Leader NH Kona Reddy Statement

"ಉತ್ತರ ಕರ್ನಾಟಕದ ಭಾಗದಲ್ಲಿ ಉಮೇಶ್ ಕತ್ತಿ, ಪ್ರಭಾವೀ ಮುಖಂಡ. ಹೀಗಾಗಿ ಅವರಿಗೆ ಯಡಿಯೂರಪ್ಪನವರು ಸಚಿವ ಸ್ಥಾನ ನೀಡಬೇಕಿತ್ತು"ಎಂದು ಕೋನ ರೆಡ್ಡಿ ಹೇಳಿದ್ದಾರೆ.

"ಸೇಡಿಗೆ ಸೇಡು ಎನ್ನುವಂತೆ, ಕೆಲವೊಂದು ಬಿಜೆಪಿಯ ಹಿರಿಯ ಮುಖಂಡರು ತಿರುಗಿಬಿದ್ದಿದ್ದಾರೆ. ಇನ್ನಾದರೂ ಬಿಜೆಪಿಯವರು ಪಾಠ ಕಲಿಯಲಿ"ಎಂದು ಕೋನ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ 'ತಲ್ಲಣ'ಗೊಳ್ಳುವ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಕಾಂಗ್ರೆಸ್ 'ತಲ್ಲಣ'ಗೊಳ್ಳುವ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ

ಬಿಎಸ್ವೈ ಸರಕಾರದ ವಿರುದ್ದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿರುವ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ನಾವು ಶಾಸಕ ಉಮೇಶ್ ಕತ್ತಿ ಅವರ ಮನೆಗೆ ಊಟಕ್ಕೆ ಹೋಗಿದ್ದೆವು. ಉತ್ತರ ಕರ್ನಾಟಕದ ಊಟ ಸಿಗುತ್ತದೆ ಅಂತ ಸೇರಿದ್ದೆವು. ನಾವು ಸಿಎಂ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

English summary
Reports Of Crisis In Karnataka BJP Unit: JDS Leader NH Kona Reddy Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X