ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿತ್ತೂರು ರಾಣಿ ಚೆನ್ನಮ್ಮ ಆಡಳಿತದ ದೃಶ್ಯವೈಭವ ರಂಗಭೂಮಿಗೆ ತರಲು ಸಜ್ಜಾದ ಧಾರವಾಡ ರಂಗಾಯಣ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಆಗಸ್ಟ್‌, 12: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಧಾರವಾಡ ರಂಗಾಯಣ ಮತ್ತೆ ಕಾರ್ಯಪ್ರವೃತ್ತವಾಗಿದೆ. 18ನೇ ಶತಮಾನದ ರಾಣಿಯರ ಚಿತ್ರಣವನ್ನು ರಂಗಭೂಮಿ ಮೇಲೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ. ನಾಟಕವು ಸ್ವಾತಂತ್ರ್ಯ ಹೋರಾಟ ಮತ್ತು ಚೆನ್ನಮ್ಮನ ಆಡಳಿತದ ದೃಶ್ಯಗಳನ್ನು ಮರುಸೃಷ್ಟಿಸುತ್ತದೆ.

ನಿಜವಾದ ಕುದುರೆ, ಆನೆಗಳು ಹಾಗೂ ಸೈನಿಕರನ್ನು ವೀಕ್ಷಕರ ಕಣ್ಣೆದುರು ನಾಟಕದ ಮೂಲಕ ತಂದು ನಿಲ್ಲಿಸುವ ಹೊಸ ಪ್ರಯೋಗಕ್ಕೆ ವಿದ್ಯಾಕಾಶಿಯ ರಂಗಾಯಣ ಸಜ್ಜಾಗಿದೆ. ಮರಾಠಿ ಮೆಗಾ ಡ್ರಾಮಾ 'ಜನತಾ ರಾಜ' ಮಾದರಿಯಲ್ಲಿ ಈ ಯೋಜನೆ ಇರಲಿದೆ. ಕುದುರೆ, ಆನೆ, ಒಂಟೆಗಳಲ್ಲದೆ 150 ಕಲಾವಿದರನ್ನು ವೇದಿಕೆಗೆ ಕರೆತರಲಾಗಿದೆ. ಶಿವಶಾಹಿರ್ ಬಾಬಾಸಾಹೇಬ್ ಪುರಂದರೆ ಬರೆದು ನಿರ್ದೇಶಿಸಿದ 'ಜನತಾ ರಾಜ'(ಬುದ್ಧಿವಂತ ರಾಜ) ಐತಿಹಾಸಿಕ ನಾಟಕವಾಗಿದೆ. ಇದು ರಾಷ್ಟ್ರೀಯ ಐಕಾನ್‌ ಆಗಿರುವ ಛತ್ರಪತಿ ಶಿವಾಜಿ ಅವರ ಜೀವನವನ್ನು ಚಿತ್ರಿಸುತ್ತದೆ.

ಮೊದಲ ಪ್ರದರ್ಶನವನ್ನು ಏಪ್ರಿಲ್ 14, 1984ರಂದು ಪುಣೆಯಲ್ಲಿ ಪ್ರದರ್ಶಿಸಲಾಯಿತು. ಇದುವರೆಗೆ ದೇಶಾದ್ಯಂತ 1,550 ಪ್ರದರ್ಶನಗಳನ್ನು ಪ್ರದರ್ಶಿಸಲಾಗಿದೆ. ಅದರ ಯಶಸ್ಸಿನಿಂದ ಪ್ರೇರಿತರಾದ ರಂಗಕರ್ಮಿ ಏಣಗಿ ಬಾಳಪ್ಪ ಅವರ ಪುತ್ರ ನಟರಾಜ್ ಏಣಗಿ ಅವರು ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದಾಗ, ಇದೇ ರೀತಿಯ ನಾಟಕ ಪ್ರದರ್ಶಿಸುವ ಕನಸು ಕಂಡಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿಯಿತು ಮತ್ತು ಅವರು ಅನಾರೋಗ್ಯದಿಂದ ನಿಧನರಾದರು.

Dharwad Rangayana ready bring memorys of Kittur Rani Chennamma

ಇದೀಗ ನಟರಾಜ್ ಅವರ ಕನಸನ್ನು ನನಸು ಮಾಡಲು ಧಾರವಾಡ ರಂಗಾಯಣದ ಹಾಲಿ ನಿರ್ದೇಶಕ ರಮೇಶ ಪರ್ವಿನಾಯ್ಕರ್ ಮುಂದಾಗಿದ್ದಾರೆ. ಪರ್ವಿನಾಯ್ಕರ್ ಅವರ ಮಹತ್ವಾಕಾಂಕ್ಷೆಯ ಯೋಜನೆ‌ ಮೂರು ತಿಂಗಳ ತರಬೇತಿಯನ್ನು ಹೊಂದಿದ್ದು, ಏಣಗಿ ನಟರಾಜ ಅವರ ಕನಸನ್ನು ನನಸು ಮಾಡಲು ಪಣ ತೊಟ್ಟು ನಿಂತಿದ್ದಾರೆ. ಇದೀಗ ಹಣದ ಕೊರತೆ ಉಂಟಾಗಿದ್ದು, ಅವರು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಅಡಿಯಲ್ಲಿ ಆರ್ಥಿಕ ಸಹಾಯವನ್ನು ಬಯಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಯೋಜನೆಗೆ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದಾಸೀನ ಧೋರಣೆಗೂ ಪರ್ವಿನಾಯ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾವಿದರಿಗೆ ಸಂಭಾವನೆ ನೀಡಲು ರಂಗಾಯಣ ಪ್ರತಿ ತಿಂಗಳು 26 ಲಕ್ಷ ರೂಪಾಯಿ ವ್ಯಹಿಸಬೇಕಾಗುತ್ತದೆ. ಹಾಗಾಗಿ ಪ್ರಭಾವಿ ರಾಜಕೀಯ ಮುಖಂಡರಿಂದ ಹಣ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.

Dharwad Rangayana ready bring memorys of Kittur Rani Chennamma

ಕಿತ್ತೂರು ಕೋಟೆ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕಿತ್ತೂರು ಚೆನ್ನಮ್ಮನ ಸಮಾಧಿ ಸ್ಥಳವಾದ ಬೈಹೊಂಗಲದಲ್ಲಿ ಐದು ಕಾರ್ಯಕ್ರಮಗಳು ನಡೆಯಲಿವೆ. ಜನವರಿಯಲ್ಲಿ ಧಾರವಾಡ ಮತ್ತು ಬೆಳಗಾವಿಯಲ್ಲಿ ಮೆಗಾ ನಾಟಕ ಪ್ರದರ್ಶನಗೊಳ್ಳಲಿದೆ.

Recommended Video

Yuvraj Singh ಅಭ್ಯಾಸದಲ್ಲಿ ಯರ್ರಾಬಿರ್ರಿ ಸಿಕ್ಸ್ ಹೊಡೆದರು | *Cricket | Oneindia Kannada

English summary
Dharwad Rangayana prepared for performance Kittur Rani Chennamma , Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X