• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ-ಧಾರವಾಡ ನಡುವೆ 30 ನಿಮಿಷದಲ್ಲಿ ಪ್ರಯಾಣಿಸಿ

|

ಧಾರವಾಡ, ಅಕ್ಟೋಬರ್ 04: ಹುಬ್ಬಳ್ಳಿ-ಧಾರವಾಡ ನಡುವಿನ ರೈಲು ಸಂಚಾರದ ಅವಧಿ 20 ರಿಂದ 30 ನಿಮಿಷಕ್ಕೆ ಬರಲಿದೆ. ಉಣಕಲ್-ಧಾರವಾಡ, ಹುಬ್ಬಳ್ಳಿ-ಉಣಕಲ್ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ.

ಹೊಸಪೇಟೆ-ವಾಸ್ಕೋ ನಡುವಿನ ಜೋಡಿ ಹಳಿ ಕಾಮಗಾರಿಯ ಭಾಗವಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಉಣಕಲ್-ಧಾರವಾಡ 16 ಕಿ. ಮೀ. ಮಾರ್ಗದ ಕಾಮಗಾರಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಹುಬ್ಬಳ್ಳಿ-ಉಣಕಲ್ ನಡುವಿನ 3 ಕಿ. ಮೀ. ಮಾರ್ಗ ಜನವರಿಯಲ್ಲಿ ರೈಲು ಸಂಚಾರಕ್ಕೆ ಸಿದ್ಧವಾಗಲಿದೆ.

ಹುಬ್ಬಳ್ಳಿ-ಹೈದರಾಬಾದ್ ಬಸ್ ಸಂಚಾರ ಆರಂಭ; ವೇಳಾಪಟ್ಟಿ

ಧಾರವಾಡ-ಉಣಕಲ್ ನಡುವಿನ ಮಾರ್ಗದ ಕಾಮಗಾರಿಯನ್ನು 62.17 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಬೇರೆ ರೈಲುಗಳ ಕ್ರಾಸಿಂಗ್‌ಗಾಗಿ ಧಾರವಾಡ ಅಥವ ಉಣಕಲ್‌ನಲ್ಲಿ ಕಾಯಬೇಕಾದ ಅಗತ್ಯವಿಲ್ಲ.

ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ

ಹೊಸಪೇಟೆ-ವಾಸ್ಕೋ ನಡುವಿನ ಜೋಡಿ ಹಳಿ ಕಾಮಗಾರಿ ವೆಚ್ಚ ಸುಮಾರು 1,200 ಕೋಟಿ ರೂ.ಗಳು. ಈ ಯೋಜನೆ ಭಾಗವಾಗಿ ಧಾರವಾಡ-ಉಣಕಲ್, ಉಣಕಲ್-ಹುಬ್ಬಳ್ಳಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 2010-11ರಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದರೂ 2015ರಲ್ಲಿ ವೇಗ ಪಡೆದುಕೊಂಡಿತು.

ಬೆಂ-ಮಂಗಳೂರು ರೈಲು ಸಂಚಾರದಲ್ಲಿ ಭಾರಿ ಬದಲಾವಣೆ

ಹೊಸಪೇಟೆ-ಹುಬ್ಬಳ್ಳಿ ನಡುವೆ ಜೋಡಿ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಗೋವಾದ ಕಡೆ ಕೆಲವು ಕಾಮಗಾರಿಗಳು ಬಾಕಿ ಇದೆ. ಈ ಕಾಮಗಾರಿ ಪೂರ್ಣಗೊಂಡರೆ ರೈಲುಗಳ ಸಂಚಾರಕ್ಕೆ ವೇಗ ಸಿಗಲಿದೆ. ಎಲೆಕ್ಟ್ರಿಕ್ ರೈಲುಗಳು ಸಹ ಸಂಚಾರ ನಡೆಸಬಹುದಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚಾರ ನಡೆಸಲು ಈಗ 45 ನಿಮಿಷದಿಂದ 1 ಗಂಟೆ ಬೇಕಾಗುತ್ತಿದೆ. ಬೇರೆ ರೈಲುಗಳು ಬಂದರೆ ಕ್ರಾಸಿಂಗ್‌ಗಾಗಿ ಕಾಯಬೇಕಿದೆ. ಇದರಿಂದ ಪ್ರಯಾಣದ ಅವಧಿ ಹೆಚ್ಚಿದೆ.

ಜೋಡಿ ಹಳಿ ಮಾರ್ಗ ಪೂರ್ಣಗೊಂಡರೆ ಅವಳಿ ನಗರಗಳ ಮಧ್ಯೆ 20 ರಿಂದ 30 ನಿಮಿಷದಲ್ಲಿ ಸಂಚಾರ ನಡೆಸಬಹುದಾಗಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.

English summary
Unkal-Dharwad railway line doubling works will be completed by end of October. This will reduce travel time between Hubballi and Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X