ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿಣಿ ಜೊತೆ ಸಂಬಂಧ ಕಳಚಿಕೊಂಡ ಹು-ಧಾರವಾಡ ಪಾಲಿಕೆ

|
Google Oneindia Kannada News

ಧಾರವಾಡ, ಸೆ. 8: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸ್ವಚ್ಛ ಭಾರತ್ ಅಭಿಯಾನ್ ಯೋಜನೆಯಡಿಯ ಕ್ಲೀನ್ ಸಿಟಿ ಅಭಿಯಾನದ ರಾಯಭಾರಿಯಾಗಿದ್ದ ನಟಿ ರಾಗಿಣಿ ದ್ವಿವೇದಿ ಅವರನ್ನು ರಾಯಭಾರಿ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(HDMC) ಸುರೇಶ್ ಇಟ್ನಾಳ್ ಪ್ರಕಟಣೆ ಹೊರಡಿಸಿದ್ದಾರೆ.

Recommended Video

ಕೊನೆಗೂ ಡ್ರಗ್ ಕೇಸ್ ನಲ್ಲಿ ತಗಲಾಕೊಂಡ Sushant ಪ್ರೇಯಸಿ Rhea | Oneindia Kannada

ನಟಿ ರಾಗಿಣಿ ಅವರು ಅನೇಕ ಜಾಹೀರಾತು, ಸಿನಿಮಾಗಳನ್ನು ಕೂಡಾ ಒಪ್ಪಿಕೊಂಡಿದ್ದಾರೆ. ಆದರೆ, ಇಲ್ಲಿ ತನಕ ಯಾವುದೇ ಸಂಸ್ಥೆಯ ಒಪ್ಪಂದದಿಂದ ರಾಗಿಣಿಯನ್ನು ಹೊರ ಹಾಕಿಲ್ಲ. ಯಾವೊಬ್ಬ ನಿರ್ಮಾಪಕ ಕೂಡಾ ರಾಗಿಣಿ ವಿರುದ್ಧ ದನಿಯೆತ್ತಿಲ್ಲ. ಕರ್ನಾಟಕ ವಾಣಿಜ್ಯ ಮಂಡಳಿ ಕೂಡಾ ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಬಳಿಕ ಈ ರೀತಿ ಕ್ರಮ ನಿರೀಕ್ಷಿತವಾಗಿರುತ್ತದೆ.ಆದರೆ, ಸರ್ಕಾರಿ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ನಿರ್ಧಾರವನ್ನು ಕೈಗೊಂಡಿದೆ.

ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ? ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?

ಡ್ರಗ್ಸ್ ಜಾಲದ ಜೊತೆ ನಟಿ ರಾಗಿಣಿ ದ್ವಿವೇದಿಗೆ ನಂಟು ಇರುವ ಆರೋಪ ಕೇಳಿ ಬಂದಿದೆ. ಸಿಸಿಬಿ ಕಸ್ಟಡಿಯಲ್ಲಿದ್ದಾರೆ. 2019-20ನೇ ಸಾಲಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸ್ವಚ್ಛ ಭಾರತ್ ಅಭಿಯಾನ್ ಯೋಜನೆಯ ಸ್ವಚ್ಛ ನಗರ ಕಾರ್ಯಕ್ರಮದ ಬ್ರ್ಯಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮುಂದಿನ ಅವಧಿಗೂ ಅವರನ್ನೇ ಮುಂದುವರೆಸಲಾಗಿತ್ತು. ಇದೀಗ ಡ್ರಗ್ ಮಾಫಿಯಾದಲ್ಲಿ ಸಿಲುಕಿ, ರಾಗಿಣಿ ಬಂಧನಕ್ಕೆ ಒಳಗಾಗಿದ್ದರಿಂದ ವಜಾ ಮಾಡಲಾಗಿದೆ ಎಂದು ಪಾಲಿಕೆ ಹೇಳಿದೆ.

Ragini Is No Longer Brand Ambassador Of Hdmcs Clean City Campaign

''ನಮ್ಮ ಮನೆಯನ್ನು ಮೊದಲಿಗೆ ಸ್ವಚ್ಛವಾಗಿರಿಸಿಕೊಂಡರೆ ನಗರವನ್ನು ಸ್ವಚ್ಛವಾಗಿರಿಸಲು ಸಾಧ್ಯ, ಪಾಲಿಕೆ ಹೊರ ತಂದಿರುವ ತ್ಯಾಜ್ಯ ವಿಂಗಡಣೆ, ಮನೆ ಮನೆ ತ್ಯಾಜ್ಯ ಸಂಗ್ರಹಕ್ಕೆ ಪ್ರತಿ ನಾಗರೀಕರು ಸಹಕರಿಸಿದರೆ ಈ ಯೋಜನೆ ಸಾಕಾರಗೊಳ್ಳುತ್ತದೆ'' ಎಂದು ರಾಯಭಾರಿಯಾದ ಸಂದರ್ಭದಲ್ಲಿ ರಾಗಿಣಿ ಹೇಳಿದ್ದರು.

English summary
Actor Ragini Dwivedi is no longer brand ambassador of Hubballi Dharwad Municipal Corporation (HDMC)'s clean city campaign. HDMC commissioner Suresh announced this after she has been accused in a drug case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X