ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಕುಟುಂಬ ರಾಜಕಾರಣ ಟೀಕಿಸಲು ಹೋಗಿ ನಗೆಪಾಟಲಿಗೆ ಗುರಿಯಾದ ಪ್ರಹ್ಲಾದ್ ಜೋಶಿ!

By ಧಾರವಾಡ ಪ್ರತಿನಿಧಿ
|
Google Oneindia Kannada News

Recommended Video

ಎಚ್ ಡಿ ದೇವೇಗೌಡ ಕುಟುಂಬ ರಾಜಕಾರಣವನ್ನ ಈ ಬಿಜೆಪಿ ನಾಯಕ ಟಾರ್ಗೆಟ್ ಮಾಡ್ಬೇಕಿತ್ತಾ? | Oneindia Kannada

ಧಾರವಾಡ, ಮಾರ್ಚ್ 18:ರಾಜಕೀಯ ಪ್ರಚಾರ ಭಾಷಣದಲ್ಲಿ ಪ್ರಹ್ಲಾದ್ ಜೋಶಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ-ಎಸ್.ಎಂ.ಕೃಷ್ಣ ಭೇಟಿ: ಸುಮಲತಾಗೆ ಬೆಂಬಲದ ಮಾತುಕತೆಯಡಿಯೂರಪ್ಪ-ಎಸ್.ಎಂ.ಕೃಷ್ಣ ಭೇಟಿ: ಸುಮಲತಾಗೆ ಬೆಂಬಲದ ಮಾತುಕತೆ

ನಗರದ ಹಳೆಯ ಎಸ್ಪಿ ರಸ್ತೆಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ಜೆಡಿಎಸ್ ಕುಟುಂಬ ರಾಜಕೀಯ ಟೀಕಿಸುವ ಅಬ್ಬರದಲ್ಲಿ ದೇವೇಗೌಡರಿಗೆ ಇಬ್ಬರು ಹೆಂಡತಿಯರು ಎನ್ನುವ ಮೂಲಕ ಸಭೆಯಲ್ಲಿದ್ದವರ ನಗೆಪಾಟಲಿಗೆ ಗುರಿಯಾದರು. ಬಳಿಕ ಅದನ್ನು ಸರಿ ಮಾಡಿಕೊಂಡು ದೇವೇಗೌಡರಿಗೆ ಎರಡು ಮಕ್ಕಳು, ಅವರಿಗೆ ಇಬ್ಬರು ಹೆಂಡತಿಯರು. ಅವರೂ ಕೂಡ ರಾಜಕೀಯದಲ್ಲಿದ್ದಾರೆ. ಈಗ ಅವರ ಮಕ್ಕಳು ರಾಜಕೀಯಕ್ಕೆ ಬರುತ್ತಿದ್ದಾರೆ ಎಂದರು.

 ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ! ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ!

ಕಾಂಗ್ರೆಸ್ ತನ್ನಿಂದ ತಾನೇ ಮುಕ್ತಾಯ ಆಗುತ್ತಿದೆ. ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಕಡೆ ಕಾಂಗ್ರೆಸ್ ತಾನಾಗಿಯೇ ಮುಕ್ತಗೊಳ್ಳುತ್ತಿದೆ ಎಂದು ಪ್ರಹ್ಲಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಹೇಳಿದರು.

Prahlad Joshi talked about Deve Gowda family politics

ಇಲ್ಲೆಲ್ಲ ಕಾಂಗ್ರೆಸ್‌ ಗುರುತು ಇಲ್ಲದಂತಾಗಿದೆ. ಇಂತಹ ದುಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಇದಕ್ಕೆ ನೇರ ಹೊಣೆ ರಾಹುಲ್ ಗಾಂಧಿಯೇ ಎಂದು ಆರೋಪಿಸಿದರು. ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನ ನಡೆಸಿದ್ದೇವೆ. ಪ್ರಚಾರ ಕಾರ್ಯ ಭರದಿಂದ ಸಾಗಿದೆ ಎಂದು ಪ್ರಹ್ಲಾದ್ ಜೋಶಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

English summary
Lok Sabha Elections 2019:Prahlad Joshi talked about former Prime Minister Deve Gowda family politics in Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X