• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ; ಕ್ರಷರ್‌ನಲ್ಲಿ ಸಂಗ್ರಹಿಸಿದ್ದ ಅಕ್ರಮ ಸ್ಫೋಟಕ ವಶಕ್ಕೆ

|

ಧಾರವಾಡ, ಮಾರ್ಚ್ 17; ಕ್ರಷರ್ ಮೇಲೆ ದಾಳಿ ನಡೆಸಿದ ಧಾರವಾಡ ಪೊಲೀಸರು 1,650 ಜಿಲೆಟಿನ್ ಕಡ್ಡಿ ಮತ್ತು 700 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ಧಾರವಾಡದ ಎಸ್‍ಪಿ ಕೃಷ್ಣಕಾಂತ .ಪಿ ಈ ಕುರಿತು ಮಾಹಿತಿ ನೀಡಿದರು. ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಹದ್ದೆಯಲ್ಲಿರುವ ಮೇ. ಡಿ. ಬಿ. ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್‌ನಲ್ಲಿ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ; ವಿಮಾನ ನಿಲ್ದಾಣ ಸಮೀಪ ಅಪಾರ ಪ್ರಮಾಣದ ಸ್ಫೋಟಕ ಪತ್ತೆ ಶಿವಮೊಗ್ಗ; ವಿಮಾನ ನಿಲ್ದಾಣ ಸಮೀಪ ಅಪಾರ ಪ್ರಮಾಣದ ಸ್ಫೋಟಕ ಪತ್ತೆ

ಮಾರ್ಚ್ 15ರ ಸಂಜೆ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಿಜಯಕುಮಾರ ಬಿರಾದಾರ ಮತ್ತು ಶ್ರೀಧರ. ವಿ ಸತಾರೇ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ಮಾಡಿದರು.

ಬೆಳಗಾವಿ; ಅಪಾರ ಪ್ರಮಾಣದ ಸ್ಪೋಟಕ ವಶ, ಮೂವರ ಬಂಧನ ಬೆಳಗಾವಿ; ಅಪಾರ ಪ್ರಮಾಣದ ಸ್ಪೋಟಕ ವಶ, ಮೂವರ ಬಂಧನ

ಯಾವುದೇ ದಾಖಲೆಗಳು ಇಲ್ಲದ ಹಾಗೂ ಅನಧಿಕೃತವಾಗಿ ಸಂಗ್ರಹಿಸಿದ್ದ 9 ರಟ್ಟಿನ ಬಾಕ್ಸ್‌ಗಳಲ್ಲಿದ್ದ ರೂ. 16,500 ಮೌಲ್ಯದ 1650 ಜಿಲೆಟಿನ್ ಕಡ್ಡಿ, ಕಟ್ಟಿಗೆ ಬಾಕ್ಸ್‌ನಲ್ಲಿದ್ದ 3,500 ರೂ. ಮೌಲ್ಯದ 700 ಎಲೆಕ್ಟ್ರಾನಿಕ್ ಡಿಟೋನೇಟರ್ ವಶಕ್ಕೆ ಪಡೆಯಲಾಯಿತು.

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟದ ಪ್ರಮುಖ ಆರೋಪಿ ನಾಗರಾಜ್ ಬಂಧನ ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟದ ಪ್ರಮುಖ ಆರೋಪಿ ನಾಗರಾಜ್ ಬಂಧನ

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ ಮಾಲೀಕ ಧಾರವಾಡದ ದಯಾನಂದ ಬಸವರಾಜ ಮಾಸೂರ, ಕ್ರಷರ್‌ನ ಕಾರಕೂನ ಆಗಿರುವ ಕರಡಿಗುಡ್ಡ ಗ್ರಾಮದ ಶಂಕರಗೌಡ ಶಿವನಗೌಡ ಗೌಡ್ರ ಹಾಗೂ ಸ್ಪೋಟಕ ವಸ್ತು ಪೂರೈಸಿದ್ದ ಬಾಗಲಕೋಟೆಯ ನವೀನ ಕುಮಾರ ಎ. ವಾಲಿ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

   ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಬೇಡ... ವಿಡಿಯೋ ಮೂಲಕ ಸಿಡಿ ಪ್ರಕರಣದ ಶಂಕಿತ ವ್ಯಕ್ತಿ ಭವಿತ್ ಮನವಿ | Oneindia Kannada

   ಈ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ಶಂಕರಗೌಡ ಶಿವನಗೌಡ ಗೌಡ್ರ ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

   English summary
   Dharwad police raid on stone crusher Illegal explosives found. 1,650 gelatin sticks and 700 detonator found.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X