ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಪು ನಿಧನ; ಶೋಕಾಚರಣೆ ಘೋಷಿಸದ್ದಕ್ಕೆ ಅಸಮಾಧಾನ

|
Google Oneindia Kannada News

ಧಾರವಾಡ, ಮಾರ್ಚ್ 17 : ಸೋಮವಾರ ನಿಧನರಾದ ನಾಡೋಜ ಡಾ ಪಾಟೀಲ ಪುಟ್ಟಪ್ಪ ಅವರಿಗೆ ರಾಜ್ಯ ಸರ್ಕಾರ ಶೋಕಾಚರಣೆ ಘೋಷಿಸದ್ದಕ್ಕೆ ಅಸಮಾಧಾನ ಕೇಳಿ ಬಂದಿದೆ.

ಕನ್ನಡಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ಅವರಿಗೆ ರಾಜ್ಯ ಸರ್ಕಾರ ಶೋಕಾಚರಣೆ ಘೋಷಣೆ ಮಾಡದಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಪಾಪು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಅರ್ಜೆಂಟಾಗಿ ಮಹಾರಾಷ್ಟ್ರದಲ್ಲಿ ಪಾಟೀಲ ಪುಟ್ಟಪ್ಪನಂತವ ಒಬ್ಬ ಹುಟ್ಟಬೇಕು' ಎಂದಿದ್ರು ಠಾಕ್ರೆ!

ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಅವರ ಆತ್ಮಕ್ಕೆ ಸರ್ಕಾರ ಗೌರವ ಸೂಚಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಆಗ್ರಹಿಸಿದ್ದಾರೆ.

Patil Puttappa Died: Papu Fans Unhappy With The No Mourning Announcement By Government

ನಾಡಿನ ದೊಡ್ಡ ಶಕ್ತಿಯಾಗಿ ಬದುಕಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಒಂದು ದಿನದ ಶೋಕಾಚರಿಸದ ಸರ್ಕಾರದ ಕ್ರಮ ಖಂಡನೀಯ. ಇದಕ್ಕೆ ಸರ್ಕಾರ ಕನ್ನಡಿಗರ ಕ್ಷಮೆ ಕೊರಬೇಕು ಎಂದು ಅಗ್ರಹಿಸದರು.

ಕರ್ನಾಟಕದ ಗಟ್ಟಿದನಿ, ಹೋರಾಟಗಾರ, ಹೆಮ್ಮೆಯ ''ಪಾಪು''ಕರ್ನಾಟಕದ ಗಟ್ಟಿದನಿ, ಹೋರಾಟಗಾರ, ಹೆಮ್ಮೆಯ ''ಪಾಪು''

ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಬಾರದಿರುವುದು ನೋವು ತರಿಸಿದೆ ಎಂದು ಆರೋಪಿಸಿದರು. ಮಂಗಳವಾರ ಸಂಜೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರೆಯಲ್ಲಿ ಪಾಪು ಅವರ ಅಂತ್ಯಕ್ರಿಯೆ ನೆರವೇರಿತು.

English summary
Patil Puttappa Died: Papu Fans Unhappy With The No Mourning Announcement By Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X