ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಮಸಾಲಿ ಮೀಸಲಾತಿ: ಅಗಸ್ಟ್ 22ರವರೆಗೆ ಸತ್ಯಾಗ್ರಹ ಮುಂದೂಡಿದ ಸ್ವಾಮೀಜಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಜು.13: ಸಂವಿಧಾನಬದ್ಧವಾಗಿ ಲಿಂಗಾಯತರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು ಎಂದು ಕೂಡಲ‌ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಈ ಕುರಿತು ಧಾರವಾಡದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸರ್ಕಾರ ಮೀಸಲಾತಿ ಭರವಸೆ ನೀಡಿತ್ತು ಹೀಗಾಗಿ ತಾತ್ಕಾಲಿಕವಾಗಿ ಸತ್ಯಾಗ್ರಹ ಮುಂದೂಡಿದ್ದೇವೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಬೇಡಿಕೆ ಈಡೇರಿಕೆ ಭರವಸೆ ಇತ್ತು. ಅವರು ಗೃಹ ಸಚಿವರಾಗಿದ್ದಾಗ ಹೋರಾಟಕ್ಕೆ ಸಹಕಾರ ನೀಡಿದ್ದರು. ಅವರೇ ಸಿಎಂ ಆದ ಬಳಿಕ ಸಾಕಷ್ಟು ನಿರೀಕ್ಷೆ ಮಾಡಿದ್ದೇವು ಆದರೆ ಅವರು ಕೊಟ್ಟ ಮಾತು ಈಡೇರಿಸಿಲ್ಲ ಬಜೆಟ್ ನಲ್ಲಿಯೂ ನಮಗೆ ನ್ಯಾಯ ಕೊಡಲಿಲ್ಲ ಎಂದರು.

Dharwad: Panchmasali 2A reservation: strike postponed till August 22

 ಧಾರವಾಡ: ಕಸಿ ಮಾಡಿದ ಸಸಿ ಮಾರಾಟ, ಜಿಲ್ಲಾ ಫಲ-ಪುಷ್ಪ ಪ್ರದರ್ಶನ ಮೇಳ ಧಾರವಾಡ: ಕಸಿ ಮಾಡಿದ ಸಸಿ ಮಾರಾಟ, ಜಿಲ್ಲಾ ಫಲ-ಪುಷ್ಪ ಪ್ರದರ್ಶನ ಮೇಳ

ಸತ್ಯಾಗ್ರಹವನ್ನು ಅಗಸ್ಟ್ 22ರವರೆಗೆ ಮುಂದೂಡಿದ ಸ್ವಾಮೀಜಿ

ಹೀಗಾಗಿ ಪುನಃ ನಮ್ಮ ಹೋರಾಟ ಶುರುವಾಗಿತ್ತು. ಜೂನ್ 22ಕ್ಕೆ ಸಿ‌.ಸಿ‌.ಪಾಟೀಲ ಮನೆಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ಆಗಿದೆ. ಈ ಬಳಿಕ ಹಾವೇರಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಆಯೋಗ ಸರ್ವೆ ಶುರು ಆಗಿದೆ. ಇನ್ನೂ 18 ಜಿಲ್ಲೆಗಳ ಸರ್ವೆ ಬಾಕಿ ಇದೆ. ಸರ್ಕಾರ ಈಗ ಎರಡು ತಿಂಗಳ ಅವಕಾಶ ಕೇಳಿದೆ. ಅಗಸ್ಟ್ 22ರೊಳಗೆ ಸಿಹಿ ಸುದ್ದಿ ‌ಕೊಡುವುದಾಗಿ ಸಿಎಂ ಹೇಳಿದ್ದಾರೆ. ಈಗ ನಾಲ್ಕನೇ ಸಲ ಸಿಎಂ ಸಮಯಾವಕಾಶ ಕೇಳಿದ್ದಾರೆ. ಸದ್ಯ ಸತ್ಯಾಗ್ರಹವನ್ನು ಅಗಸ್ಟ್ 22ರವರೆಗೆ ಮುಂದೂಡಿದ್ದೇವೆ ಎಂದರು.

Dharwad: Panchmasali 2A reservation: strike postponed till August 22

ಧಾರವಾಡ ಜಿಲ್ಲೆಯ ಮೂಲಕ ಈಗ ಹೋರಾಟ ಶುರು

ಧಾರವಾಡ ಜಿಲ್ಲೆಯ ಮೂಲಕ ಈಗ ಹೋರಾಟ ಶುರುವಾಗಿದೆ. ಸರ್ಕಾರ ಮೈ ಮರೆಯಬಾರದು ಅಂತಾ ಹೋರಾಟ ನಿರಂತರವಾಗಿ ಇರುತ್ತದೆ. ಜಿಲ್ಲೆಯ ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ಶುರುವಾಗಿದೆ. ಜು. 30ರಂದು ಧಾರವಾಡ ನಗರದಲ್ಲಿ ಬೃಹತ್ ರ್ಯಾಲಿ ಮಾಡಲಾಗುವುದು. ಅಗಸ್ಟ್ 22ಕ್ಕೆ ಸರ್ಕಾರ ಸಿಹಿಸುದ್ದಿ ಕೊಡಬೇಕು. ಇಲ್ಲದೇ ಹೋದಲ್ಲಿ ಅಗಸ್ಟ್ 23ಕ್ಕೆ ಸಿಎಂ ನಿವಾಸದ ಎದುರು ಹೋರಾಟ ಮಾಡುತ್ತೇವೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

English summary
Dharwad: Kudalasangama Panchamasali Peeta sri Basava Jaya Mruthyunjaya Swami and other leaders of the community decided to continue their agitation seeking a 2A reservation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X