India
  • search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡದಲ್ಲಿ ಮಳೆಯಿಂದ 5 ಗಂಟೆ ಶಾಲೆಯಲ್ಲೆ ಸಿಲುಕಿದ್ದ 150 ವಿದ್ಯಾರ್ಥಿಗಳ ರಕ್ಷಣೆ

|
Google Oneindia Kannada News

ಧಾರವಾಡ, ಜೂನ್ 17: ಗುರುವಾರ ಸುರಿದ ಭಾರಿ ಮಳೆಗೆ ಜಿಲ್ಲೆಯ ಅಮರಗೋಳ ಗ್ರಾಮದಲ್ಲಿ ಹಳ್ಳ ತುಂಬಿ ಹರಿದು ಸರಕಾರಿ ಪ್ರೌಢಶಾಲೆ ಆವರಣದಲ್ಲಿ ನೀರು ತುಂಬಿಕೊಂಡಿದ್ದರಿಂದ ಶಾಲೆಗೆ ತೆರಳಿದ್ದ ಮಕ್ಕಳು ಶಾಲೆಯಲ್ಲಿಯೇ ರಾತ್ರಿಯವರೆಗೂ ಕಳೆಯುವಂತಾಗಿತ್ತು. ಕೊನೆಗೆ ಅಧಿಕಾರಿಗಳು ಹಾಗೂ ಸ್ಥಳೀಯರು ಮಕ್ಕಳನ್ನು ರಕ್ಷಿಸಿ 5 ಗಂಟೆಯ ನಂತರ ಮನೆಗೆ ಕಳುಹಿಸಿದ್ದಾರೆ.

ಗುರುವಾರ ಸಂಜೆ ನವಲಗುಂದ ತಾಲೂಕಿನಲ್ಲಿ ಮಳೆಯಿಯಿಂದ ಹಳ್ಳ ತುಂಬಿ ಹರಿದಿದ್ದು, ನೀರು ಶಾಲಾ ಆವರಣವನ್ನೆಲ್ಲಾ ಆಕ್ರಮಿಸಿಕೊಂಡಿತ್ತು. ಇದರಿಂದ 150ಕ್ಕೂ ಹೆಚ್ಚಿನ ಮಕ್ಕಳು ಶಾಲೆಯಲ್ಲಿ ಸಿಲುಕಿಕೊಂಡಿದ್ದರು. ಶಾಲಾ ಕಟ್ಟವನ್ನು ಅವೈಜ್ಞಾಜಿಕವಾಗಿ ನಿರ್ಮಿಸಿದ್ದ ನೀರು ತುಂಬಿ ಮಕ್ಕಳು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು.

ಅಪಾಯದ ಮುನ್ಸೂಚನೆ ಕಂಡುಬಂದಿದ್ದರಿಂದ ಶಾಲಾ ಸಿಬ್ಬಂಧಿ ಮಕ್ಕಳನ್ನು ಹೊರಬರದಂತೆ ತಡೆದಿದ್ದರು. ನೀರಿನ ಹರಿವು ಕಡಿಮೆಯಾದ ನಂತರ ವಿದ್ಯಾರ್ಥಿಗಳನ್ನು ಹೊರ ಮೆನೆಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಬೆಳವಟಗಿ
ಸಂಜೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಹಂಪಿಹೊಳಿ ಹಾಗೂ ಸ್ಥಳೀಯರು ಟ್ರ್ಯಾಕ್ಟರ್‌ ಮೂಲಕ ಮಕ್ಕಳ ರಕ್ಷಣೆ ಮಾಡಿದ್ದಾರೆ.

ಪಂಚಾಯತ್ ಅಧಿಕಾರಿ, ಸದಸ್ಯರು, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನ ರಕ್ಷಿಸಿ ಟ್ರ್ಯಾಕ್ಟರ್ ಮೂಲಕ ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಿದ್ದಾರೆ.

ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಮಳೆ

ರಾಜ್ಯದಲ್ಲಿ ಕೆಲವು ಕಡೆ ಗುರುವಾರ ಮಳೆಯಾಗಿದೆ, ಇಂದೂ ಕೂಡ ನೈಋಉತ್ತು ಮುಂಗಾರು ಮಳೆ ಆರಂಭವಾಗಲಿದ್ದು, ಮುಂದಿನ 4 ದಿನ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಹವಾಮಾನ ಇಲಾಖೆ ಮುನ್ಸುಚನೆ ನೀಡಿದೆ. ಜೂನ್ 20ರವರೆಗೆ ಕರಾವಳಿಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ.

Over 150 Students Stuck in a School Rescued in Navalagunda

ಬೆಂಗಳೂರಿನಲ್ಲೂ ಮಳೆ

ಗುರುವಾರ ರಾತ್ರಿ 9:30ರ ಸುಮಾರಿಗೆ ನಗರದ ವಿವಿದೆಡೆ ಮಳೆ ಸುರಿದ ಕಾರಣ ಕಚೇರಿ ಮುಗಿಸಿ ಮನೆಗೆ ಹೊರಟ ಜನರು ಮಳೆಯಲ್ಲಿ ಸಿಲುಕಿಕೊಂಡಿದ್ದರು. ಜಯನಗರ ಮೆಜೆಸ್ಟಿಕ್, ಬನಶಂಕರಿ ಸೇರಿದಂತೆ ಹಲವು ಕಡೆ ಮಳೆ ಸುರಿದ ಕಾರಣ ಜನರು ಮಳೆಯಿಂದ ಆಶ್ರಯ ಪಡೆಯಲು ಮೆಟ್ರೋ ನಿಲ್ದಾಣ , ಫ್ಲೈ ಓವರ್‌ಗಳಲ್ಲಿ ನಿಂತಿದ್ದು ಕಂಡುಬಂದಿತು.

(ಒನ್ಇಂಡಿಯಾ ಸುದ್ದಿ)

English summary
Dharwad district, amargol village high school students stuck 5 hours in School after heavy rain. PDO, police and locals rescued them in an operation that lasted for 5 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X