ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಜಿಲ್ಲೆ, ಒಂದು ಉತ್ಪನ್ನ; ಧಾರವಾಡಕ್ಕೆ ಮಾವು

|
Google Oneindia Kannada News

ಧಾರವಾಡ, ಜನವರಿ 05: ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ದಗೊಳಿಸುವಿಕೆಗೆ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಕರಣಾ ಘಟಕವನ್ನು ಉನ್ನತೀಕರಿಸಲು ಒಂದು ಜಿಲ್ಲೆ, ಒಂದು ಉತ್ಪನ್ನದ ಆಧಾರದ ಮೇಲೆ ಮಾವಿನ ಬೆಳೆಯ ವರ್ಗೀಕರಣ, ಶ್ರೇಣಿಕರಣ, ಬ್ರ್ಯಾಂಡಿಂಗ್, ಲೆಬಲಿಂಗ್, ಮಾರುಕಟ್ಟೆಯ ಬೆಂಬಲ ರಫ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಉದ್ಯಮದಾರರಾಗಿ ರೂಪಿಸಲು ಯೋಜಿಸಲಾಗಿದೆ.

ಮೇಕ್ ಇನ್ ಇಂಡಿಯಾ ಕರ್ನಾಟಕದ ಒಂದು ಜಿಲ್ಲೆ ಒಂದು ಉತ್ಪನ್ನಗಳುಮೇಕ್ ಇನ್ ಇಂಡಿಯಾ ಕರ್ನಾಟಕದ ಒಂದು ಜಿಲ್ಲೆ ಒಂದು ಉತ್ಪನ್ನಗಳು

ಆಹಾರ ಸಂಸ್ಕರಣಾ ಕೈಗಾರಿಕೆಯ ಅಸ್ತಿತ್ವದಲ್ಲಿರುವ ಅಸಂಘಟಿತ ವಲಯದಲ್ಲಿರುವ ಕಿರು ಉದ್ದಿಮೆಗಳ ಸ್ಫರ್ಧಾತ್ಮಕತೆಯನ್ನು ವೃದ್ಧಿಸಲು ಹಾಗೂ ವಲಯದ ನಿಯಮಬದ್ದಗೊಳಿಸುವಿಕೆಯನ್ನು ಪ್ರೋತ್ಸಾಹಿಸುವುದು, ರೈತ ಉತ್ಪಾದಕರ ಸಂಸ್ಥೆಗಳು (ಎಫ್‍ಪಿಒ ಗಳು), ಸ್ವಸಹಾಯ ಗುಂಪುಗಳು (ಎಸ್‍ಹೆಚ್‍ಜಿಗಳು) ಹಾಗೂ ಉತ್ಪಾದಕರ ಸಹಕಾರಿಗಳಿಗೆ ಅವುಗಳ ಇಡೀ ಕಾರ್ಯಚಟುವಟಿಕೆಗಳ ಉದ್ದಗಲಕ್ಕೂ ಬೆಂಬಲ ಒದಗಿಸುವುದು ಯೋಜನೆಯ ಗುರಿ.

ಉದ್ದೇಶಗಳು: ಕಿರು ಉದ್ದಿಮೆಗಳ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವುದು. ಈ ಯೋಜನೆಯ ಉದ್ದೇಶವಾಗಿದೆ. ಅಸ್ತಿತ್ವದಲ್ಲಿರುವ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು, ಸ್ವಸಹಾಯ ಗುಂಪುಗಳು, ಹಾಗೂ ಸಹಕಾರಿಗಳ ಸಾಲ ಸೌಲಭ್ಯಗಳನ್ನು ಹೆಚ್ಚಿಸುವುದು, ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್‍ನ್ನು ಬಲಪಡಿಸುವ ಮೂಲಕ ಸಂಘಟಿತ ಸರಬರಾಜು ಸರಪಳಿಯೊಂದಿಗೆ ಏಕೀಕರಣಗೊಳಿಸಲಾಗುತ್ತದೆ.

ಮಾವು ಬೆಳೆಗೆ ನೀಡಬೇಕಾದ ಪೋಷಕಾಂಶಗಳ ವಿವರಗಳು ಮಾವು ಬೆಳೆಗೆ ನೀಡಬೇಕಾದ ಪೋಷಕಾಂಶಗಳ ವಿವರಗಳು

 One District One Product Mango For Dharwad

ಈಗಿರುವ ಎರಡು ಲಕ್ಷದಷ್ಟಿರುವ ಉದ್ದಿಮೆಗಳನ್ನು ಔಪಚಾರಿಕ ಚೌಕಟ್ಟಿನೊಳಗೆ ಸೇರಿಸಲು ಬೆಂಬಲ ಒದಗಿಸುವುದು, ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯಗಳು, ದಾಸ್ತಾನು ಶೇಖರಣೆ, ಪ್ಯಾಕೆಜಿಂಗ್, ಮಾರ್ಕೆಟಿಂಗ್ ಹಾಗೂ ಇನ್‍ಕ್ಯೂಬೇಶನ್ ಸೇವೆಗಳಂತಹ ಸಾಮಾನ್ಯ ಸೇವೆಗಳ ದೊರೆಯುವಿಕೆಯನ್ನು ಹೆಚ್ಚಿಸುವುದು, ಸಂಸ್ಥೆಗಳನ್ನು ಬಲಪಡಿಸುವುದು, ಆಹಾರ ಸಂಸ್ಕರಣಾ ವಲಯದಲ್ಲಿ ಸಂಶೋಧನೆ ಹಾಗೂ ತರಬೇತಿಯನ್ನು ಬಲಪಡಿಸುವುದು ಹಾಗೂ ಉದ್ದಿಮೆಗಳಿಗೆ ವೃತ್ತಿಪರ ಹಾಗೂ ತಾಂತ್ರಿಕ ಬೆಂಬಲ ದೊರೆಯುವಿಕೆಯನ್ನು ಹೆಚ್ಚಿಸುವುದು ಯೋಜನೆ ಉದ್ದೇಶ.

ಮಾವು ಬೆಳೆಯುವ ರೈತರಿಗೆ ಇಸ್ರೇಲ್ ತಂತ್ರಜ್ಞಾನದ ಸಲಹೆಗಳುಮಾವು ಬೆಳೆಯುವ ರೈತರಿಗೆ ಇಸ್ರೇಲ್ ತಂತ್ರಜ್ಞಾನದ ಸಲಹೆಗಳು

ಈ ಯೋಜನೆಯಡಿ ಎರಡು ಲಕ್ಷದಷ್ಟಿರುವ ಅತೀ ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ನೇರವಾಗಿ ಸಾಲ ಸಂಪರ್ಕವಿರುವ ಸಹಾಯಧನದೊಂದಿಗೆ ನೆರವನ್ನು ಒದಗಿಸಲಾಗುವುದು. ಈ ವಲಯದ ಬೆಳವಣಿಗೆಯ ವೇಗವನ್ನು ಹೆಚ್ಚಿಸುವ ಸಲುವಾಗಿ ಸಾಕಷ್ಟು ಬೆಂಬಲಾತ್ಮಕ ಸಾಮಾನ್ಯ ಮೂಲಭೂತ ಸೌಕರ್ಯ ಹಾಗೂ ಸಾಂಸ್ಥಿಕ ರಚನೆಗಳನ್ನು ಕಲ್ಪಿಸಲಾಗುವುದು.

ವಲಯದ ಅಗತ್ಯಗಳನ್ನು ಈಡೇರಿಸುವಂತಹ ನಾಲ್ಕು ವಿಸ್ತಾರವಾದ ಭಾಗಗಳನ್ನು ಒಳಗೊಂಡಿದೆ. ಕಿರು ಉದ್ದಿಮೆಗಳ ವ್ಯಕ್ತಿ ಹಾಗೂ ಗುಂಪುಗಳಿಗೆ ಬೆಂಬಲ ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್ ಬೆಂಬಲ, ಸಂಸ್ಥೆಗಳನ್ನು ಬಲಪಡಿಸಲು ಬೆಂಬಲ, ಬಲಿಷ್ಠವಾದ ಯೋಜನಾ ನಿರ್ವಹಣಾ ಚೌಕಟ್ಟನ್ನು ರಚಿಸುವುದು.

ಈ ಯೋಜನೆಯು 2020-21ರಿಂದ ಪ್ರಾರಂಭವಾಗಿ 2024-25 ರ ವರೆಗೆ ಅನುಷ್ಠಾನಗೊಳ್ಳಲಿದೆ. ಅಗತ್ಯ ತಾಂತ್ರಿಕ ಮತ್ತು ಸಂಶೋಧನಾ ಬೆಂಬಲವನ್ನು ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಗಳ ಮೂಲಕ ನೆರವನ್ನು ಫಲಾನುಭವಿಗಳಿಗೆ ನೀಡಲಾಗುವುದು.

ಕಿರು ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಗೆ ಅವಶ್ಯವಾದ ತರಬೇತಿ, ಡಿಪಿಆರ್ ತಯಾರಿಕೆ, ಬ್ಯಾಂಕ್ ಸಾಲ, ಮಾರುಕಟ್ಟೆ ಬೆಂಬಲ, ಕೈ ಆಸರೆ ಬೆಂಬಲ, ಜಿಎಸ್‍ಟಿ, ಉದ್ಯೋಗ ಆಧಾರ್, ಎಫ್‍ಎಸ್‍ಎಸ್‍ಐ ಪ್ರಮಾಣ ಪತ್ರಗಳನ್ನು ದೊರಕಿಸಿಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪನ್ಮೂಲ ವ್ಯಕಿಗಳಾದ ಗೋಪಾಲ ನಾಯ್ಕ್ 9448358676 ಇವರನ್ನು ಸಂಪರ್ಕಿಸಬಹುದು.

Recommended Video

ಮಂಗಳೂರು: ಅಮಾಯಕರಿಗೆ ದೇಶದ್ರೋಹ ಪಟ್ಟ ಕಟ್ಟಲು ಮುಂದಾಗ್ತಿದ್ಯಾ SDPI..? | Oneinda Kannada

ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್

English summary
Karnataka is all set to go with One District, One Product. Dharwad district get the Mango crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X