ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಪ್ರಭಾತ ಅಭಿಯಾನ ವಿರುದ್ಧ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಬಂದಿಲ್ಲ: ಮುತಾಲಿಕ್

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ.10: ಆಝಾನ್ ವಿರುದ್ಧ ರಾಜ್ಯದಲ್ಲಿ ಹಿಂದೂ ಪರ ಸಂಘಟನೆಗಳು ಕರೆ ನೀಡಿರುವ ಸುಪ್ರಭಾತ ಅಭಿಯಾನ ಕುರಿತು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನ ಮುಂದುವರೆಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಹೇಳಿದ್ದಾರೆ.

ಧಾರವಾಡ ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ ಹೀಗಾಗಿ ಸುಫ್ರಬಾತ ಅಭಿಯಾನ ಮುಂದುವರೆಸುವುದಾಗಿ ತಿಳಿಸಿದರು.

ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ರಾಜ್ಯದ ಬೇರೆ ಬೇರೆ ಜಿಲ್ಲೆಯ ದೇವಸ್ಥಾನಗಳಲ್ಲಿ ನಿನ್ನೆ ಸುಪ್ರಭಾತ ಅಭಿಯಾನ ಮಾಡಲು ಆಗಿಲ್ಲ. ಯಾವ್ಯಾವ ಜಿಲ್ಲೆಗಳಲ್ಲಿ ಆಗಿಲ್ಲ ಅಲ್ಲೆಲ್ಲಾ ಅಭಿಯಾನ ಮುಂದುವರೆಸುತ್ತೇವೆ. ರಾಜ್ಯ ಸರ್ಕಾರದ ಮೇಲೆ ಆಝಾನ್ ಸಂಬಂಧಪಟ್ಟಂತೆ ನ್ಯಾಯಾಂಗ ನಿಂದನೆ ಕೇಸ್ ಸಹ ಹಾಕುತ್ತೇವೆ. ಕರ್ನಾಟಕದಲ್ಲಿ ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತಿದೆ. ಸಿಎಂ, ಗೃಹ ಮಂತ್ರಿ, ರಾಜ್ಯ ಸರ್ಕಾರದ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲಾಗಿದ್ದು, ಸರ್ಕಾರ ಕೂಡಲೇ ಕ್ರಮ‌ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು.

No official notification has been issued by the state government against Suprabhata campaign

ಆಝಾನ್ ವಿರುದ್ಧ ಉತ್ತರ ಪ್ರದೇಶ ಮಾದರಿ ಕ್ರಮ ಕೈಗೊಳ್ಳಿ..!

ಉತ್ತರಪ್ರದೇಶದಲ್ಲಿ ಆಝಾನ್ ವಿರುದ್ಧ ತೀರ್ಪಿನ ಮರುದಿನವೇ ಮಸೀದಿಗಳಲ್ಲಿ ಅಳವಡಿಸಲಾಗಿದ್ದ 40 ಸಾವಿರ ಮೈಕ್ ಇಳಿಸಿದ್ದಾರೆ. ತೀರ್ಪು ಬಂದು 15 ವರ್ಷ ಆದರೂ ರಾಜ್ಯದಲ್ಲಿ ಯೋಜನೆ, ಯೋಚನೆ ಅಂತಿದ್ದಾರೆ. ಕೂಡಲೇ ನಮ್ಮ ರಾಜ್ಯದಲ್ಲೂ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ್ ಸರ್ಕಾರದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಅದನ್ನ ಬಿಟ್ಟು ಮೀನಮೇಷ ಎಣಿಸುವ ಅವಶ್ಯಕತೆ ಇಲ್ಲ. ಇನ್ನುಮುಂದೆ ಮುಸ್ಲಿಮರಿಗೆ ಹೆದರಬೇಕಾಗಿಲ್ಲ. ನಾವೂ ಸರ್ಕಾರದ ಜೊತೆ ಇದ್ದೇವೆ. ಕೋರ್ಟ್ ಆದೇಶ ಪಾಲನೆ ಸರ್ಕಾರದ ಕರ್ತವ್ಯ. ಅದನ್ನು ವಿರೋಧಿಸುವವರ ಮೇಲೆ ಕ್ರಮಕೈಗೊಳ್ಳಲಿ. ಮುಸ್ಲಿಂ ಅಂದ್ರೆ ಹೆದರೋದು. ಓಲೈಕೆ ಮಾಡುವುದು ಎಲ್ಲಾ ಪಕ್ಷದಲ್ಲಿ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಈ ಮಾನಸಿಕತೆ ಬಹಳ ಡೇಂಜರ್ ಎಂದರು.

No official notification has been issued by the state government against Suprabhata campaign

ಬಿಜೆಪಿ ಹಿಂದೂಗಳ ವೋಟ್ ಗೆ ಬದ್ಧವಾಗಿರಬೇಕಷ್ಟೇ..!

ಮುಸ್ಲಿಮರಿಗೆ ಹೆದರುವುದು, ಓಲೈಕೆ ಮಾಡುವ ಬಿಜೆಪಿಯ ಮಾನಸಿಕತೆ ಸರಿಯಲ್ಲ. ಸುಪ್ರಿಂಕೋರ್ಟ್ ಆದೇಶ ಹಿಡಿದುಕೊಂಡು ನಂಜನಗೂಡು ದೇವಸ್ಥಾನ ಒಡೆದು ಹಾಕಿದ್ರಿ. ಅದೇ ನಿಲುವು ಮೈಕ್ ವಿಷಯದಲ್ಲಿ ಯಾಕಿಲ್ಲ...? ಹಿಂದೂಗಳ ದೇವಸ್ಥಾನ ಬೇಕಾದ್ದು ಮಾಡಬಹುದಾ..? ಹಿಂದೂಗಳ ವೋಟ್ ಗೆ ಬಿಜೆಪಿ ಬದ್ದರಾಗಿರಬೇಕು. ಹಿಂದೂತ್ವಕ್ಕಾಗಿಯೇ ಬಿಜೆಪಿ ಗೆಲ್ಲಿಸಿದ್ದು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

Recommended Video

ಅಂಪೈರ್ ವಿರುದ್ದ ಹರಿಹಾಯ್ದ ಅಭಿಮಾನಿಗಳು ! | Oneindia Kannada

English summary
state government has not issued an official notice on the Suprabhata campaign: Ssrirama Sena Chief Pramod Muthalik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X