ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸುಡುತ್ತಿರುವ ಪಶ್ಚಿಮ ಘಟ್ಟ ಮೊದಲು ಉಳಿಸಿಕೊಳ್ಳಿ'

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್, 27: ಪಶ್ಚಿಮ ಘಟ್ಟದಲ್ಲಿ ಕಂಡುಬರುತ್ತಿರುವ ಕಾಡ್ಗಿಚ್ಚು ತಡೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ನದಿ ಕಣಿವೆಗಳು ನೀರಿಲ್ಲದೇ ಒಣಗುವ ಹೊತ್ತಿನಲ್ಲಿ ಇಲ್ಲಿನ ಕಾಡುಗಳಿಗೆ ಬೆಂಕಿ ಬಿದ್ದು ಸಾವಿರಾರು ಎಕರೆ ಅರಣ್ಯ ಭಸ್ಮ ಆಗುತ್ತಿದೆ. ಇದರ ಬಗ್ಗೆ ಅರಣ್ಯ ಇಲಾಖೆ ಗಂಭೀರವಾದ ಕ್ರಮಕ್ಕೆ ಮುಂದಾಗಿಲ್ಲ. ಬಿಸಿಲು-ಬರಗಾಲದ ಜೊತೆ ಈ ಬೆಂಕಿ ಜೀವ ಸಂಕುಲವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ, ಅರಣ್ಯ ಇಲಾಖೆ ತಳಮಟ್ಟದಲ್ಲಿ ಸಮರೋಪಾದಿಯಲ್ಲಿ ಕಾಡಿನ ಬೆಂಕಿ ತಡೆಗೆ ಮುಂದಾಗಬೇಕು ಎಂದು ವೃಕ್ಷಲಕ್ಷ ಆಂದೋಲನ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.[ಶಿವಮೊಗ್ಗದಲ್ಲಿ ಪಶ್ಚಿಮ ಘಟ್ಟ ಅಭಿವೃದ್ಧಿ ಸಂಸ್ಥೆ ಸ್ಥಾಪನೆ]

Western Ghats

ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಿ ಸಮಿತಿ ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು ಮುಂತಾದ ಘಟ್ಟದ ಜಿಲ್ಲೆಗಳ ಮುಖ್ಯ ಅರಣ್ಯ-ಸಂರಕ್ಷಣಾಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಲಾಗಿದೆ.

ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪೊ. ಬಿ. ಎಂ. ಕುಮಾರಸ್ವಾಮಿ, ಬಿ. ಹೆಚ್. ರಾಘವೇಂದ್ರ, ಡಾ. ಟಿ. ವಿ. ರಾಮಚಂದ್ರ, ಡಾ. ಕೇಶವ, ಶಾಂತಾರಾಂ ಸಿದ್ಧಿ, ಬಾಲಚಂದ್ರ ಸಾಯಿಮನೆ ಕಾಡ್ಗಿಚ್ಚು ತಡೆಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.[ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

Western Ghats

ಸರ್ಕಾರಕ್ಕೆ ಬರೆದ ಪತ್ರ
ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿರುವ ಕಾಡಿನ ಬೆಂಕಿ ಕುರಿತು ತಮ್ಮ ಗಮನ ಸೆಳೆಯುತ್ತಿದ್ದೇವೆ. ನೇರಕ್ರಮಕ್ಕೆ ಕೋರುತ್ತೇವೆ.
ಉ.ಕ ಜಿಲ್ಲೆ, ದ.ಕ, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಕಾಡಿನ ಬೆಂಕಿಗೆ ಸಾವಿರಾರು ಎಕರೆ ಅರಣ್ಯ ಆಹುತಿ ಆಗಿದೆ. ಬರಗಾಲದಲ್ಲಿ ಬೆಂಕಿ ಸೇರಿ ನದಿ ಕಣಿವೆಗಳನ್ನು ಇನ್ನಷ್ಟು ಬೆಂಗಾಡು ಮಾಡುತ್ತಿವೆ. ದಾಂಡೇಲಿ ಅಭಯಾರಣ್ಯದಿಂದ ಶರಾವತಿ ಅಭಯಾರಣ್ಯದವರೆಗೆ, ಬನವಾಸಿಯಿಂದ ಸೊರಬದವರೆಗೆ, ತೀರ್ಥಹಳ್ಳಿಯಿಂದ ಶೃಂಗೇರಿವರೆಗೆ ಎಲ್ಲೆಡೆ ಕಾಡಿಗೆ ಬೆಂಕಿ ಬಿದ್ದು ಕರಕಲಾಗಿದೆ.

ಪ್ರಾಣಿ ಪಕ್ಷಿಗಳ ಸ್ಥಿತಿ ಅತಂತ್ರವಾಗಿದೆ. ಬೆಂಕಿ ಜ್ವಾಲೆಗೆ ವನ್ಯಜೀವಿಗಳು ನಲುಗಿಹೋಗಿವೆ. ಅಮೂಲ್ಯ ಔಷಧೀ ಸಸ್ಯಗಳು ಬೆಂದು ಹೋಗಿವೆ. ಕುರುಚಲು ಕಾಡುಗಳು ಬಹುಬೇಗ ಬೆಂಕಿಗೆ ಬಲಿ ಆಗುತ್ತಿವೆ. ಪಶ್ಚಿಮಘಟ್ಟದ ಜೀವವೈವಿಧ್ಯತೆಗೆ ಭಾರಿ ಪೆಟ್ಟು ಬಿದ್ದಿದೆ. ಅಭಯಾರಣ್ಯ, ಸಂರಕ್ಷಿತ ಪ್ರದೇಶಗಳು, ಸೇರಿದಂತೆ ಕಾನು, ಬೆಟ್ಟ, ಕಣಿವೆಗಳಲ್ಲಿ ಬೆಂಕಿ ಬಿದ್ದಿದೆ.

ನಾಸಾ ನೀಡಿರುವ ಮಾಹಿತಿಯಂತೆ ಏಪ್ರಿಲ್ 24 ರಂದು ಪಶ್ಚಿಮ ಘಟ್ಟದ 9 ಜಿಲ್ಲೆಗಳಲ್ಲಿ 490 ಸ್ಥಳಗಳಲ್ಲಿ ಬೆಂಕಿ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ 82 ಅರಣ್ಯ ಸ್ಥಳಗಳಲ್ಲಿ ಬೆಂಕಿ ಬಿದ್ದಿದೆ !

ಕಳೆದ 3-4 ವರ್ಷಗಳಲ್ಲಿ ಕಾಡಿನ ಬೆಂಕಿ ಇಷ್ಟು ವ್ಯಾಪಕವಾಗಿ ಇರಲಿಲ್ಲ. ಕಾಡಿನ ಬೆಂಕಿ ತಡೆಗೆ ಗಮನ ಕಡಿಮೆ ಆಗಿದೆ. ಅರಣ್ಯ ಅಂಚಿನ ಹಳ್ಳಿಗಳ ಜನರ ಸಹಕಾರ ಪಡೆಯಲು ಅರಣ್ಯ ಇಲಾಖೆ ಮುಂದಾಗಬೇಕು. ಸಮರೋಪಾದಿಯಲ್ಲಿ ಕೆಳ ಹಂತದ ಅರಣ್ಯ ಸಿಬ್ಬಂದಿಯನ್ನು ತೊಡಗಿಸಬೇಕಾದ ಜವಾಬ್ದಾರಿ ಐ.ಎಫ್.ಎಸ್. ಅಧಿಕಾರಿಗಳದ್ದಾಗಿದೆ.

ಮಲೆನಾಡಿನಲ್ಲಿ 1500 ಹಳ್ಳಿಗಳಲ್ಲಿ ಗ್ರಾಮ ಅರಣ್ಯ ಸಮೀತಿಗಳಿವೆ. ವನವಾಸಿಗಳ, ರೈತರ ಸಹಕಾರ ಪಡೆದು ಕಾಡಿನ ರೈತರ ಸಹಕಾರ ಪಡೆದು ಕಾಡಿನ ಬೆಂಕಿ ತಡೆಗೆ ಪ್ರಯತ್ನಗಳು ನಡೆಯಬೇಕು. ಅವರಿಗೆ ಪ್ರೋತ್ಸಾಹಿಸಬೇಕು. ಮಲೆನಾಡಿನ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಬೆಂಕಿ ಹಾಕುವ ಬೇಟೆಗಾರರು, ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ರಾಜ್ಯದೆಲ್ಲೆಡೆ ಕಾಡಿನಲ್ಲಿ ಬೆಂಕಿ, ಹೊಗೆ ಕಂಡರೂ ಅರಣ್ಯ ಭವನಕ್ಕೆ ತಕ್ಷಣ ಗೊತ್ತಾಗುವಂತೆ ಆಧುನಿಕ ಸಂಪರ್ಕ ಸಾಧನ ಅಳವಡಿಸಿದ್ದೇವೆ ಎಂದು ಅರಣ್ಯ ಇಲಾಖೆ ಹೇಳಿತ್ತು. ಅರಣ್ಯಭವನ ಏನು ಮಾಡುತ್ತಿದೆ?

ಅರಣ್ಯ ಇಲಾಖೆ ಕಾಡಿನ ಬೆಂಕಿ ತಡೆಗೆ ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿ ತೆರೆಯಬೇಕು. ಆಕಾಶವಾಣಿ, ದೂರದರ್ಶನ, ಪತ್ರಿಕೆಗಳಲ್ಲಿ ಬೆಂಕಿ ತಡೆಗೆ ಬನ್ನಿ ಎಂಬ ಕರೆ ನೀಡಬೇಕು. ಬರಗಾಲ ಸಂದರ್ಭದಲ್ಲಿ ಜಿಲ್ಲಾ ತಾಲೂಕು ಕಂದಾಯ ಅಧಿಕಾರಿಗಳಿಗೆ ಆದೇಶ ನೀಡಿದಂತೆ ಅರಣ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗೆ ಕಾಡಿನ ಬೆಂಕಿ ತಡೆಕಾರ್ಯಕ್ಕೆ ಸದಾ ಹಾಜರಿ, ಕ್ರಮಕ್ಕೆ ಅರಣ್ಯ ಸಚಿವರು ಆದೇಶ ನೀಡಬೇಕು.

ಹೊಳೆ, ಹಳ್ಳ, ಕೆರೆಗಳ ಉಳಿದಿರುವ ನೀರಿನ ಪಸೆ, ಹರಿವು ಕಾಡಿನ ಬೆಂಕಿಯಿಂದ ಮತ್ತಷ್ಟು ಒಣಗಿಹೋಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಲು ಸಚಿವರು ಕ್ರಮ ಕೈಗೊಳ್ಳಬೇಕು. ಕೊನೆಯಲ್ಲಿ ಆದರೆ, ಮುಖ್ಯವಾದ ಸಂಗತಿಯನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಪಶ್ಚಿಮ ಘಟ್ಟ ಕಾರ್ಯಪಡೆ ಮೂಲಕ ಬೆಂಕಿ ನಂದಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದು ಸಮಿತಿ ಸರ್ಕಾರವನ್ನು ಒತ್ತಾಯ ಮಾಡಿದೆ.

English summary
Sirsi-based Vruksha Laksha Andolan, an environmental organisation, has written a letter to Karnataka State Government and urging them to save forest valleys in the Western Ghats from wildfires. Organization Chief Ananth Hegde Ashishar has said that a large number of tree species were being destroyed because of the wildfires. He demanded setting up of a Forest Fire Control Cell in the Malnad districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X