ಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆ
ಧಾರವಾಡ, ಡಿಸೆಂಬರ್ 01: ಮೈಸೂರು-ಧಾರವಾಡ ನಡುವೆ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಉಭಯ ನಗರಗಳ ನಡುವೆ ಪ್ರತಿದಿನ ರೈಲು ಸಂಚಾರ ನಡೆಸಲಿದೆ.
ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಧಾರವಾಡ-ಮೈಸೂರು ಮತ್ತು ಮೈಸೂರು-ಧಾರವಾಡ ನಡುವೆ ಸಂಚಾರ ನಡೆಸುವ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಪಟ್ಟಿ
ರೈಲು ಸಂಖ್ಯೆ 07302/ 07301 ಧಾರವಾಡ-ಮೈಸೂರು-ಧಾರವಾಡ ಹಬ್ಬದ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆಯನ್ನು ಧಾರವಾಡದಿಂದ 10/12/2020 ರವರೆಗೆ ಮತ್ತು ಮೈಸೂರಿನಿಂದ 11/12/2020 ರವರೆಗೆ ವಿಸ್ತರಿಸಲಾಗಿದೆ.
ಮೈಸೂರು ರೈಲ್ವೆಯಿಂದ ವ್ಯಾಪಾರ ಅಭಿವೃದ್ಧಿ ಘಟಕ ಸ್ಥಾಪನೆ
ಕೋವಿಡ್ ಲಾಕ್ ಡೌನ್ ಘೋಷಣೆಗೆ ಮೊದಲು ಪ್ರತಿದಿನ ಧಾರವಾಡ-ಮೈಸೂರು ನಡುವೆ ರೈಲು ಸಂಚಾರ ನಡೆಸುತ್ತಿತ್ತು. ಆದರೆ, ಸಾಮಾನ್ಯ ರೈಲಗಳು ರದ್ದಾಗಿರುವ ಹಿನ್ನಲೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ರೈಲು ಬಿಡಲಾಗಿತ್ತು.
ಹಬ್ಬದ ವಿಶೇಷ ರೈಲುಗಳ ಅವಧಿ ವಿಸ್ತರಣೆ; ರೈಲುಗಳ ಪಟ್ಟಿ
Recommended Video
ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಮೈಸೂರು-ಧಾರವಾಡ ನಡುವಿನ ಹಬ್ಬದ ವಿಶೇಷ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಬೇಡಿಕೆ ಹೆಚ್ಚಿದ್ದರೆ ಪುನಃ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಸಾಮಾನ್ಯ ರೈಲುಗಳ ಸಂಚಾರದ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ರೈಲು ಸೇವೆಯ ವಿಸ್ತರಣೆ: ರೈಲು ಸಂಖ್ಯೆ 07302/07301 ಧಾರವಾಡ-ಮೈಸೂರು-ಧಾರವಾಡ ಹಬ್ಬದ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆಯನ್ನು ಧಾರವಾಡದಿಂದ 10.12.2020 ರವರೆಗೆ ಮತ್ತು ಮೈಸೂರಿನಿಂದ 11.12.2020 ರವರೆಗೆ ವಿಸ್ತರಿಸಲಾಗಿದೆ.#Dharwad #Hubballi #Mysuru #FestivalSpecialTrain pic.twitter.com/DbTMYUd7vQ
— DRM Hubballi (@drmubl) December 1, 2020