ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

15 ಸಾವಿರ ಮೃತದೇಹಗಳ ವಿಧಿ ವಿಧಾನ ನಡೆಸಿದ್ದ ಮುಸ್ತಾಕ್ ನಿಧನ

|
Google Oneindia Kannada News

ಧಾರವಾಡ, ಮೇ 22: ಕಳೆದ 21 ವರ್ಷಗಳಲ್ಲಿ ಸುಮಾರು 15 ಸಾವಿರ ಮೃತದೇಹಗಳನ್ನು ಸಾಗಿಸಿ ವಿಧಿ ವಿಧಾನ ನಡೆಸಿದ್ದ ಮುಸ್ತಾಕ್ ಅಹ್ಮದ್ ಖಾತ್ರಿ ಇತ್ತೀಚೆಗೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಧಾರವಾಡ ತಾಲೂಕು ಬ್ರಾಹ್ಮಣ ಸಭಾವು ಮುಸ್ತಾಕ್ ಅಹ್ಮದ್ ಖಾತ್ರಿಗೆ 'ಮರಳಿ ಮಣ್ಣಿಗೆ' ಎಂಬ ಆಂಬುಲೆನ್ಸ್‌ ಒಂದನ್ನು ಕೊಡುಗೆಯಾಗಿ ನೀಡಿದ್ದು ಈ ಆಂಬುಲೆನ್ಸ್‌ ಮೂಲಕ ಮುಸ್ತಾಕ್‌ ಅಹ್ಮದ್‌ ಅಲಿ ಅವರು ಸುಮಾರು 21 ವರ್ಷಗಳಲ್ಲಿ 15 ಸಾವಿರ ಮೃತ ದೇಹಗಳನ್ನು ಸಾಗಿಸಿ ಅಂತ್ಯ ಸಂಸ್ಕಾರ ನಡೆಸಿದ್ದರು.

ಈ ಕೊರೊನಾ ಕಾಲಘಟ್ಟದಲ್ಲಿ ಅದೆಷ್ಟೋ ಮೃತದೇಹಗಳ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರೇ ಹಿಂದೆ ಮುಂದೆ ನೋಡುತ್ತಾರೆ. ಅಂತಹ ಸಂದರ್ಭದಲ್ಲಿ ಮುಸ್ತಾಕ್‌ ದಿನಕ್ಕೆ 4-5 ಕೊರೊನಾ ಸೋಂಕಿತರ ಮೃತದೇಹವನ್ನು ಆಯಾ ಧರ್ಮದ ವಿಧಿ, ವಿಧಾನ ಪಾಲಿಸಿ, ಕೊರೊನಾ ಮಾರ್ಗಸೂಚಿಗನುಸಾರವಾಗಿ ಮಾಡಿದ್ದಾರೆ ಎಂದು ವರದಿಯಾಗಿದೆ. ಮುಸ್ತಾಕ್‌ರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

Dharwad: Musthaq Ahmed who performed funeral rituals of 15 thousand dead bodies passes away

ಕಳೆದ 21 ವರ್ಷಗಳಿಂದ ಮುಸ್ತಾಕ್‌ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮುಸ್ತಾಕ್ ಯಾವುದೇ ಧರ್ಮ ಭೇದವಿಲ್ಲದೆ ಎಲ್ಲ ಧರ್ಮದ ಜನರ ಮೃತ ದೇಹಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಹಲವಾರು ವರ್ಷಗಳಿಂದ ಅಂತಿಮ ಸಂಸ್ಕಾರ ಮಾಡಿಕೊಂಡು ಬಂದಿದ್ದ ಮುಸ್ತಾಕ್‌ಗೆ ಎಲ್ಲ ಧರ್ಮಗಳ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ತಿಳಿದಿದ್ದು, ಮೃತರ ಧರ್ಮಕ್ಕೆ ಅನುಸಾರವಾಗಿ ವಿಧಿ, ವಿಧಾನದ ಮೂಲಕ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದರು.

(ಒನ್ಇಂಡಿಯಾ ಸುದ್ದಿ)

Recommended Video

ಕೊರೊನಾ ಸೋಂಕನ್ನು ನಾಯಿಗಳಿಂದ ಪತ್ತೆಮಾಡಬಹುದು!! | Oneindia Kannada

English summary
Dharwad: Musthaq Ahmed, man who helped transportation, funeral of over 15000 dead bodies passes away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X