ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ರಾಜ್ ಜೊತೆ ಕುಸ್ತಿ ಆಡಿದ್ದನ್ನು ನೆನಪಿಸಿಕೊಂಡ ಪೈಲ್ವಾನ್

|
Google Oneindia Kannada News

ಧಾರವಾಡ, ಫೆಬ್ರವರಿ 19 : ಧಾರವಾಡ ನಗರದಿಂದ ಕೂಗಳತೆ ದೂರದಲ್ಲಿದೆ ತಡಸಿನಕೊಪ್ಪ. ಈ ಗ್ರಾಮ ಒಂದು ಅರ್ಥದಲ್ಲಿ ಪೈಲ್ವಾನರ ಊರು. ಇಲ್ಲಿನ ಪ್ರತಿ ಮನೆಗಳಲ್ಲಿಯೂ ಕುಸ್ತಿಪಟುಗಳಿದ್ದಾರೆ.

ತಡಸಿನಕೊಪ್ಪ ಗ್ರಾಮದಲ್ಲಿ ಕುಸ್ತಿಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡಿರುವ ಹಿರಿಯ ಪೈಲ್ವಾನ್‍ ಒಬ್ಬರಿದ್ದಾರೆ. ಕನ್ನಡ ಚಿತ್ರದಲ್ಲಿ ನಟಿಸಿರುವ ಈ ಪೈಲಾನ್ ವರನಟ ಡಾ. ರಾಜ್ ಕುಮಾರ್ ಜೊತೆ ಕುಸ್ತಿಯಾಡಿದ್ದಾರೆ.

ಫೆಬ್ರವರಿ 22 ರಿಂದ ರೋಚಕ 'ಕರ್ನಾಟಕ ಕುಸ್ತಿ ಹಬ್ಬ'ಫೆಬ್ರವರಿ 22 ರಿಂದ ರೋಚಕ 'ಕರ್ನಾಟಕ ಕುಸ್ತಿ ಹಬ್ಬ'

ಗ್ರಾಮದ ಗರಡಿ ಮನೆ ಹತ್ತಿರದಲ್ಲಿಯೇ ಮನೆ ಹೊಂದಿರುವ ಗೌಡಪ್ಪ ಪರಪ್ಪ ಮುದಿಗೌಡ್ರಗೆ ವಂಶಪಾರಂಪರ್ಯವಾಗಿಯೇ ಕುಸ್ತಿ ಒಲಿದು ಬಂದಿದೆ. 1979ರಲ್ಲಿ ತೆರೆಕಂಡ 'ಹುಲಿಯ ಹಾಲಿನ ಮೇವು' ಚಿತ್ರದಲ್ಲಿ ವರನಟ ಡಾ. ರಾಜ್ ಕುಮಾರ್ ಜೊತೆ ಗೌಡಪ್ಪ ಕುಸ್ತಿ ಆಡಿದ್ದಾರೆ.

 ದಸರಾ ಕುಸ್ತಿ ಪಂದ್ಯಾವಳಿ ವೇಳೆ ಗಲಾಟೆ: ಮುಂದೆ ಏನಾಯ್ತು...? ದಸರಾ ಕುಸ್ತಿ ಪಂದ್ಯಾವಳಿ ವೇಳೆ ಗಲಾಟೆ: ಮುಂದೆ ಏನಾಯ್ತು...?

ಡಾ. ರಾಜ್ ಜೊತೆ ಕುಸ್ತಿ ಆಡುವ ಸನ್ನಿವೇಶದಲ್ಲಿ ಕಾಣಿಸಿಕೊಂಡ ಸವಿನೆನಪಿನೊಂದಿಗೆ ಬದುಕು ಸವೆಸುತ್ತಿರುವ ಪೈಲ್ವಾನ್ ಗೌಡಪ್ಪರ ಜೀವನ ಪ್ರೀತಿ ಕಡಿಮೆ ಆಗಿಲ್ಲ. ಧಾರವಾಡದಲ್ಲಿ ಫೆಬ್ರವರಿ 22 ರಿಂದ 25ರ ತನಕ 'ಕರ್ನಾಟಕ ಕುಸ್ತಿ ಹಬ್ಬ' ನಡೆಯುತ್ತಿರುವುದು ಅವರಿಗೆ ಸಂತಸ ಮೂಡಿದೆ.

ಶಿವಮೊಗ್ಗದಲ್ಲಿ ಪೈಲ್ವಾನ್ ಚಿತ್ರ ನೋಡಲು ಬಂದವರಿಗೆ ಅನ್ನ ಸಂತರ್ಪಣೆ!ಶಿವಮೊಗ್ಗದಲ್ಲಿ ಪೈಲ್ವಾನ್ ಚಿತ್ರ ನೋಡಲು ಬಂದವರಿಗೆ ಅನ್ನ ಸಂತರ್ಪಣೆ!

ಪೈಲ್ವಾನ್ ಗೌಡಪ್ಪ

ಪೈಲ್ವಾನ್ ಗೌಡಪ್ಪ

ಪೈಲ್ವಾನ್ ಗೌಡಪ್ಪಗೆ ವಂಶಪಾರಂಪರ್ಯವಾಗಿಯೇ ಕುಸ್ತಿ ಒಲಿದು ಬಂದಿದೆ. ಪ್ರಾರಂಭದಲ್ಲಿ ಹುಟ್ಟೂರಿನ ಪರಪ್ಪ ಅವರಲ್ಲಿ ಕುಸ್ತಿಯ ಪ್ರಾಥಮಿಕ ಜ್ಞಾನ ಪಡೆದರು. ನಂತರ ಹೆಚ್ಚಿನ ಕಲಿಕೆಗಾಗಿ ಬೆಳಗಾವಿಯ ದರ್ಗಾದ ಖಾದರ್ ಪೈಲ್ವಾನ್, ಕೊಲ್ಹಾಪುರದ ಬಾಬು ಬಿರಾದಾರ್, ಧಾರವಾಡ ಕರ್ನಾಟಕ ವ್ಯಾಯಾಮ ಶಾಲೆಯ ಮಾರುತಿ ಪೈಲ್ವಾನ್, ಮೈಸೂರು ಅಕ್ಬರ್ ರಸ್ತೆಯ ಗೌಡಯ್ಯನ ಗರಡಿಯಲ್ಲಿ ತರಬೇತಿಯನ್ನು ಪಡೆದರು.

ತಾಲೀಮು ಮುಂದುವರೆಸಿದರು

ತಾಲೀಮು ಮುಂದುವರೆಸಿದರು

ತರಬೇತಿ ಬಳಿಕ ತಡಸಿನಕೊಪ್ಪಕ್ಕೆ ಮರಳಿದ ಅವರು ವಿವಾಹವಾದರು. ಗ್ರಾಮದಲ್ಲಿ ಕುಸ್ತಿ ಗೆದ್ದು ಮೆರವಣಿಗೆ ಮಾಡಿಕೊಂಡು ಬರುತ್ತಿದ್ದ ಗುಂಪನ್ನು ನೋಡಿ ಮತ್ತೆ ಕುಸ್ತಿಯತ್ತ ಆಕರ್ಷಿತರಾದರು. ಬೆಂಗಳೂರು ಬಳಿಯ ದೊಡ್ಡಬಳ್ಳಾಪುರಕ್ಕೆ ತೆರಳಿ ಅಲ್ಲಿ ದೊಡ್ಡಣ್ಣ ಎಂಬ ಕುಸ್ತಿ ಅಭಿಮಾನಿಯೊಬ್ಬರ ನೆರವಿನಿಂದ ಕುಸ್ತಿ ತಾಲೀಮು ಮುಂದುವರೆಸಿದರು.

ಡಾ. ರಾಜ್ ಜೊತೆ ನಟನೆ

ಡಾ. ರಾಜ್ ಜೊತೆ ನಟನೆ

ದೊಡ್ಡಬಳ್ಳಾಪುರದ ಕೆರೆ ಬಳಿ 'ಹುಲಿಯ ಹಾಲಿನ ಮೇವು' ಚಲನಚಿತ್ರದ ಕುಸ್ತಿ ಅಖಾಡದ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಯೇ ಇದ್ದ ಗೌಡಪ್ಪರನ್ನು ಗುರುತಿಸಿದ ಡಾ.ರಾಜ್ ಕುಮಾರ್ ಅವರೊಂದಿಗೆ ಸೆಣಸಾಡುವ ಅವಕಾಶ ನೀಡಿದರು.

ಎಂದೂ ಚಿತ್ ಆಗಲಿಲ್ಲ

ಎಂದೂ ಚಿತ್ ಆಗಲಿಲ್ಲ

ಪಂಜಾಬಿನ ಮಿಲ್ಟ್ರಿ ಶರ್ಮಾ ಅವರಿಂದಲೂ ತರಬೇತಿ ಪಡೆರಿರುವ ಗೌಡಪ್ಪ ಆ ದಿನಗಳಲ್ಲಿ ಆಡಿದ ಯಾವೊಂದು ಕುಸ್ತಿಯಲ್ಲಿಯೂ ಚಿತ್ ಆಗಲಿಲ್ಲ. ಚಲನಚಿತ್ರದಲ್ಲಿ ರಾಜ್ ಅವರಿಂದ ಚಿತ್ ಆಗುವ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ಅವಕಾಶ ಆಕಸ್ಮಿಕವಾಗಿ ಪಡೆದುಕೊಂಡರು. ಆ ನೆನಪನ್ನೂ ಇಂದಿಗೂ ಹಸಿರಾಗಿಸಿಕೊಂಡಿರುವ ಗೌಡಪ್ಪನವರು ತಮ್ಮ ಮೈಕಟ್ಟು, ಕುಸ್ತಿ ಪ್ರೀತಿ ಎಲ್ಲವನ್ನೂ ಡಾ.ರಾಜ್ ಮೆಚ್ಚಿಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಪಿಂಚಣಿ ಬರುತ್ತಿದೆ

ಪಿಂಚಣಿ ಬರುತ್ತಿದೆ

ಇಬ್ಬರು ಪತ್ನಿಯರು, 9 ಮಕ್ಕಳ ತುಂಬು ಕುಟುಂಬದೊಂದಿಗೆ ಜೀವನ ನಿರ್ವಹಿಸುತ್ತಿರುವ ಗೌಡಪ್ಪನವರಿಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾಜಿ ಪೈಲ್ವಾನರಿಗೆ ನೀಡುವ ಮಾಸಿಕ 2,500 ರೂ.ಪಿಂಚಣಿ ನೀಡುತ್ತಿದೆ.

English summary
Met pailwan Gowdrappa Parappa Mudi Gowda resident of Dharwad. Gowdrappa acted in Huliya Haalina Mevu Kannada film with doctor Rajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X