• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ: ಇಲಾಖೆಯಿಂದ ವಜಾಗೊಂಡಿದ್ದ ಪೊಲೀಸ್ ಕಾನ್‍ಸ್ಟೆಬಲ್ ಮನೆಯಲ್ಲಿ ಗಾಂಜಾ ಪತ್ತೆ

By ಧಾರವಾಡ ಪ್ರತಿನಿಧಿ
|

ಧಾರವಾಡ, ಸೆಪ್ಟೆಂಬರ್ 15: ಪೊಲೀಸ್ ಇಲಾಖೆಯಿಂದ ವಜಾಗೊಂಡಿರುವ ಪೊಲೀಸ್ ಕಾನ್‍ಸ್ಟೆಬಲ್ ಮನೆಯಲ್ಲಿ ಗಾಂಜಾ ಪತ್ತೆಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಪೊಲೀಸ್ ಕಾನ್‍ಸ್ಟೆಬಲ್ ಸಂಜು ಪಾಟೀಲ್ ವಜಾಗೊಂಡಿದ್ದಾನೆ. ಧಾರವಾಡ ನಗರದ ಮುರಘಾ ಮಠದ ಹತ್ತಿರ ಮನೆ ಮಾಡಿಕೊಂಡಿದ್ದ ಕಾನ್‍ಸ್ಟೆಬಲ್ ಸಂಜು ಪಾಟೀಲ್ ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕನದಾಳ ಗ್ರಾಮದವನು.

ಚಿತ್ರದುರ್ಗ: 4 ಕೋಟಿ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿ ಅಂದರ್

ಈ ಹಿಂದೆ ಈತ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದನು. ದೀರ್ಘಾವಧಿ ರಜೆ ಪಡೆಯುತ್ತಿದ್ದ ಈತನನ್ನು ಪೊಲೀಸ್ ಇಲಾಖೆ ಸೇವೆಯಿಂದ ವಜಾ ಮಾಡಿತ್ತು. ಬಳಿಕ ಈತ ಧಾರವಾಡದಲ್ಲಿ ಬಂದು ನೆಲೆಸಿದ್ದ. ಗಾಂಜಾ ಇರುವ ಖಚಿತ ಮಾಹಿತಿ ಮೇರೆಗೆ ಈತನ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಧಾರವಾಡ ಉಪನಗರ ಪೊಲೀಸರು ಈತನಿಂದ 283 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆದು, ಬಂಧಿಸಿ ವಜಾಗೊಂಡ ಪೊಲೀಸ್ ಪೇದೆ ಸಂಜು ಪಾಟೀಲ್ ನನ್ನು ಜೈಲಿಗೆ ಕಳುಹಿಸಿದ್ದಾರೆ.

ಇಂದು ಚಿತ್ರದುರ್ಗದಲ್ಲಿ ಕೂಡಾ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ರಾಂಪುರ ಪೊಲೀಸರು ಬಂಧಿಸಿದ್ದಾರೆ.

ರಾಂಪುರದ ಡಿ.ಬಿ ಮಂಜುನಾಥ್, ವೈ.ಜಂಬುನಾಥ್, ಡಿ.ವೈ ಮಂಜುನಾಥ್ ಎಂಬುವರಿಗೆ ಸೇರಿದ 04 ಎಕರೆ 20 ಗುಂಟೆ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದಿದ್ದು, ಮಧ್ಯವರ್ತಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಮಹದೇವಪುರ ನಿವಾಸಿ ಸಮಂತಗೌಡ ಜಮೀನನ್ನು ಗುತ್ತಿಗೆ ಕೊಡಿಸಿದ್ದನು.

   Corona ಸಂದರ್ಭದಲ್ಲಿ ಮುಷ್ಕರ ವಾಪಸ್ ಪಡೆಯದ ವೈದ್ಯರು | Oneindia Kannada

   ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ರಾಂಪುರ ಠಾಣೆ ಪಿಎಸ್ಐ ಗುಡ್ಡಪ್ಪ ನೇತೃತ್ವದ ತಂಡ, ಜಮೀನು ಮಾಲೀಕರು, ಮಧ್ಯವರ್ತಿ ಸೇರಿದಂತೆ ಪ್ರಮುಖ ಆರೋಪಿ ರುದ್ರೇಶ್ ನನ್ನು ಬಂಧಿಸಿದ್ದಾರೆ. ಬಂಧಿತ ಐವರ ವಿರುದ್ಧ NDPS ಆ್ಯಕ್ಟ್ ಕಲಂ 8 ಹಾಗಾ 20(a)(b) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   English summary
   283gm Marijuana Founded In Suspended Police Constable House In Dharwad City.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X