ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: 62 ಗಂಟೆ ಅವಶೇಷಗಳಡಿ ಇದ್ದು ಪವಾಡದಂತೆ ಬದುಕಿ ಬಂದ ಯುವಕ

|
Google Oneindia Kannada News

Recommended Video

Dharwad : ಧಾರವಾಡದಲ್ಲಿ ನಡೆದ ಘಟನೆ ನಡೆದು ನಾಲ್ಕು ದಿನಗಳ ನಂತರ ಸಜೀವವಾಗಿ ಒಬ್ಬನ ರಕ್ಷಣೆ

ಬೆಂಗಳೂರು, ಮಾರ್ಚ್ 22: ಸತತ 62 ಗಂಟೆಗಳ ಕಾಲ ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದ ಯುವಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಯುವಕನನ್ನು ಸಂಗನಗೌಡ ರಾಮನಗೌಡ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅವಶೇಷಗಳನ್ನು ಹೊರತೆಗೆಯುತ್ತಲೇ ಯುವಕ ನಡೆದು ಹೊರಬಂದಿದ್ದಾನೆ.

ಮೃತ ಮಗಳಿಗೆ ಧೈರ್ಯ ಹೇಳುತ್ತಾ 34 ಗಂಟೆ ಶವದ ಜೊತೆ ಕಳೆದ ತಾಯಿ ಮೃತ ಮಗಳಿಗೆ ಧೈರ್ಯ ಹೇಳುತ್ತಾ 34 ಗಂಟೆ ಶವದ ಜೊತೆ ಕಳೆದ ತಾಯಿ

ನನ್ನ ಮೇಲೆ ಒಂದು ಗೇಣು ಎತ್ತರದಲ್ಲಿ ಗೋಡೆ ಇತ್ತು. ಅದು ಕುಸಿದಿದ್ದರೆ ನಾನು ಸಾಯುತ್ತಿದ್ದೆ. ಅತ್ತಿತ್ತ ಸರಿದಾಡಲೂ ಜಾಗ ಇರಲಿಲ್ಲ. ನಾನು ಬದುಕಿ ಬರುವ ಆಸೆಯನ್ನೇ ಕಳೆದುಕೊಂಡಿದ್ದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಸ್ವಲ್ಪವೇ ದೂರದಲ್ಲಿ ಒಬ್ಬ ವೃದ್ಧರು ಇದ್ದರು ಅವರು 2 ದಿನ ಮಾತನಾಡಿದ್ದರು ಬಳಿಕ ಅವರ ಮಾತೂ ನಿಂತು ಹೋಗಿತ್ತು. ಆ ನಂತರ ನಾನೊಬ್ಬನೇ ಆ ಸ್ಥಳದಲ್ಲಿ ಇದ್ದೆ ಎಂದು ನಾಲ್ಕು ದಿನಗಳ ಕಾಲ ಜೀವ ಉಳಿಸಿಕೊಂಡು ಹೊರ ಬಂದ ಯುವಕ ತಿಳಿಸಿದ್ದಾನೆ.

ಹೀಗೆ ಎಷ್ಟೋ ಮಂದಿ ಬದುಕುವ ಆಸೆ ಇದ್ದರೂ ಮೃತಪಟ್ಟಿದ್ದಾರೆ, ಕುಟುಂಬದವರು ಬದುಕಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಾ ಕುಟುಂಬ ಸದಸ್ಯರು ನಾಲ್ಕು ದಿನದಿಂದ ಅದೇ ಸ್ಥಳದಲ್ಲಿ ಕಾಯುತ್ತಿದ್ದಾರೆ.

Man Pulled Out From Debris 62 Hours After Building Collapse

ಧಾರವಾಡ ತಾಲೂಕು ಉಳಿಗೇರಿ ಗ್ರಾಮದ ನಿವಾಸಿಯಾದ ಈತ ಕಟ್ಟಡದಲ್ಲಿದ್ದ ಜೆಡಿಎಸ್​ನ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್​ ಜಮನಾಳ ಅವರ ಕಚೇರಿಯಲ್ಲಿ ಸಹಾಯಕನಾಗಿದ್ದ. ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ ಆತ ಕಚೇರಿಯಲ್ಲೇ ಇದ್ದ ಎಂದು ತಿಳಿದು ಬಂದಿದೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಮಾರ್ಚ್ 19ರಂದು 2 ಗಂಟೆಯ ವೇಳೆಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದಿತ್ತು, ಇಲ್ಲಿಯವರೆಗೆ 15 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ.

English summary
Over 62 hours after an under-construction building collapsed in Dharwad, north Karnataka, a man was pulled out from under the building debris on Friday, 22 March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X