ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನ ಪರಿಷತ್ ಚುನಾವಣೆ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಗಟ್ಟೆಗಳ ಮಾಹಿತಿ ಇಲ್ಲಿದೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಜೂನ್ 12: ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ-2022 ಜೂನ್ 13ರಂದು ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಜರುಗಲಿದ್ದು, ಸದರಿ ಮತದಾನಕ್ಕೆ ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ್ದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಧಾರವಾಡ ಜಿಲ್ಲೆಯಲ್ಲಿ 3450 ಪುರುಷ ಮತ್ತು 2995 ಮಹಿಳಾ ಮತದಾರರು ಸೇರಿ ಒಟ್ಟು 6445 ಮತದಾರರಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 21 ಮತಗಟ್ಟೆಗಳಿದ್ದು, ಈ ಎಲ್ಲಾ ಮತಗಟ್ಟೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೋವಿಡ್-19 ಹಿನ್ನಲೆಯಲ್ಲಿ ಎಲ್ಲ ಮತಗಟ್ಟೆಗಳಿಗೆ ಕೋವಿಡ್ ಮಾರ್ಗಸೂಚಿಯಂತೆ ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್‌ಗಳನ್ನು ಆರೋಗ್ಯ ಇಲಾಖೆಯಿಂದ ಒದಗಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಸಿಬ್ಬಂದಿಗಳೊಂದಿಗೆ ಮೈಕ್ರೋ ಆಬ್ಸರ್ವರ್, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಬಿಎಲ್‌ಓ ಅವರನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ಹೆಗಡೆ ತಿಳಿಸಿದ್ದಾರೆ.

Legislative Council Election 2022: Information on Western Teachers Constituency Vote

ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸ್ಥಾಪಿಸಲಾಗಿರುವ ಒಟ್ಟು 21 ಮತಗಟ್ಟೆಗಳ ಪೈಕಿ 10 ಸೂಕ್ಷ್ಮ ಮತಗಟ್ಟೆಗಳು ಹಾಗೂ 3 ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಒಟ್ಟು 21 ಮತಗಟ್ಟೆಗಳ ಪೈಕಿ 11 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್, 02 ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 13 ಜನ ವಿಶೇಷಚೇತನ ಮತದಾರರಿದ್ದು, ಅಂಗವಿಕಲ ಮತದಾರರಿರುವ ಮತಗಟ್ಟೆಗಳಲ್ಲಿ ಮತದಾನ ಮಾಡಲು ಅವರಿಗೆ ಅನುಕೂಲವಾಗುವಂತೆ ವೀಲ್‌ಚೇರ್ ಪೂರೈಸಲು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಮತದಾನಕ್ಕೆ ಗುರುತಿನ ಚೀಟಿ; ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಮತದಾನ ದಿನದಂದು ಅರ್ಹ ಮತದಾರರು ತಮ್ಮ ಮತವನ್ನು ಚಲಾಯಿಸಲು ಚುನಾವಣಾ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳನ್ನು ಸಹ ಬಳಸಿ ಮತ ಚಲಾಯಿಸಬಹುದು.

ಆಧಾರ್ ಗುರುತಿನ ಚೀಟಿ, ವಾಹನ ಚಾಲನಾಪತ್ರ, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್‌ಪೊರ್ಟ್‌, ಸೇವಾ ಗುರುತಿನ ಪತ್ರ, ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ ಕಚೇರಿ ಗುರುತಿನ ಪತ್ರ, ಕಚೇರಿ ಗುರುತಿನ ಪತ್ರ, ಅರ್ಹ ಮತದಾರರಾಗಿರುವ ಶಿಕ್ಷಕರಿಗೆ ಅವರ ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನಪತ್ರ, ವಿಶ್ವವಿದ್ಯಾಲಯಗಳು ನೀಡಿರುವ ಪದವಿ, ಡಿಪ್ಲೊಮಾ ಪ್ರಮಾಣಪತ್ರಗಳ ಮೂಲಪ್ರತಿ ಹಾಗೂ ಸಕ್ಷಮ ಪ್ರಾಧಿಕಾರ ನೀಡಿರುವ ದೈಹಿಕ ಅಂಗವಿಕಲ ಪ್ರಮಾಣಪತ್ರವನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ, ಮತ ಚಲಾಯಿಸಬಹುದು. ಭಾರತ ಚುನಾವಾಣಾ ಆಯೋಗ ನೀಡಿರುವ ನಿರ್ದೇಶನದಂತೆ ಜಿಲ್ಲೆಯಲ್ಲಿ ಚುನಾವಣಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಅರ್ಹ ಶಿಕ್ಷಕ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಜೂ.13 ರಂದು ವಿಶೇಷ ಸಾಂದರ್ಭಿಕ ರಜೆ ನೀಡಲು ಆದೇಶಿಸಲಾಗಿದೆ.

ಜಿಲ್ಲೆಯ 21 ಮತಗಟ್ಟೆಗಳ ಮಾಹಿತಿ; 16 ಅಳ್ನಾವರ ಪಟ್ಟಣ ಪಂಚಾಯತ ಕಚೇರಿ, 17 ಗರಗದ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆ, 18 -ತಹಶೀಲ್ದಾರ ಕಚೇರಿ, 19 ಕರ್ನಾಟಕ ಕಾಲೇಜು ಬಿಬಿಎ ಕಟ್ಟಡ, 20 ಸಪ್ತಾಪೂರ ರಸ್ತೆಯ ಶಾರದಾ ಹೆಣ್ಣು ಮಕ್ಕಳ ಶಾಲೆ, 21 ಆಝಾದ್ ಪಾರ್ಕ್ ಹತ್ತಿರ ಟಿಸಿಡಬ್ಲ್ಯೂ ಆವರಣದ ಸರ್ಕಾರಿ ಪ್ರಾಥಮಿಕ ಶಾಲೆ, 22 ವಿದ್ಯಾಗಿರಿಯ ಜೆಎಸ್‍ಎಸ್ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ರೂಮ್ ನಂಬರ್ 3ಜಿ.

ಹುಬ್ಬಳ್ಳಿ ಶಹರ 23 ಭೈರಿದೇವರಕೊಪ್ಪದ ಸನಾ ಶಾಹೀನ ಪಿಯು ಸೈನ್ಸ್ ಕಾಲೇಜು, 24 ದೇಶಪಾಂಡೆ ನಗರದ ಎನ್. ಆರ್. ದೇಸಾಯಿ ರೋಟರಿ ಕನ್ನಡ ಮಾಧ್ಯಮ ಶಾಲೆ, 25 ಗೋಕುಲ ರಸ್ತೆ, ಬಸವೇಶ್ವರ ನಗರದ ಚನ್ನಬಸಮ್ಮ ಲಿಂಗನಗೌಡ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 26 ಪಿಬಿ ರಸ್ತೆಯ ಬಾಸೆಲ್ ಮಿಷನ್ ಗಂಡು ಮಕ್ಕಳ ಹೈಸ್ಕೂಲ್, 27 ತಹಶೀಲ್ದಾರ ಕಚೇರಿಯ ಕೋರ್ಟ್ ಹಾಲ್, ಮಿನಿ ವಿಧಾನ ಸೌಧ

28 ಹೆಬಸೂರು ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆ, 29 ವರೂರು ಕನ್ನಡ ಹಿರಿಯ ಪ್ರಾಥಮಿಕ ಶಾಲೆ, 30 ಕುಂದಗೋಳ ತಾಲೂಕು ಪಂಚಾಯಿತಿ, 31 ಗುಡಗೇರಿ ಎಫ್. ಸಿ. ಮುತ್ತೂರ ಹೈಸ್ಕೂಲು ಹೊಸ ಕಟ್ಟಡ ಪಿಯುಸಿ ವಿಭಾಗ, 32 ಯಲಿವಾಳ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ.

33 ಕಲಘಟಗಿ ತಹಶೀಲ್ದಾರ ಕಚೇರಿ, 34 ಗಳಗಿ ಹುಲಕೊಪ್ಪ ಮಾಡೆಲ್ ಸೆಂಟ್ರಲ್ ಸ್ಕೂಲ್, 35 ನವಲಗುಂದ ತಹಶೀಲ್ದಾರ ಕಚೇರಿ ಮಿನಿ ವಿಧಾನ ಸೌಧ, 36 ಅಣ್ಣಿಗೇರಿ ತಾಲೂಕಾ ಶಾಸಕರ ಸರಕಾರಿ ಮಾದರಿ ಶಾಲೆ ನಂ.1 ಈ ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ.

English summary
Karnataka Legislative Council Election 2022 to held on June 13. Here Information on west teachers constituency polling booths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X