ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಸುಮಾವತಿ ಶಿವಳ್ಳಿ ಗೆಲವು ನಿಶ್ಚಿತ: ಎಚ್.ಕೆ.ಪಾಟೀಲ್

|
Google Oneindia Kannada News

ಕುಂದಗೋಳ, ಏಪ್ರಿಲ್ 29: ದಿವಂಗತ ಸಿ ಎಸ್ ಶಿವಳ್ಳಿ ಅವರು ಕುಂದಗೋಳ ವಿಧಾನಸಭಾ ಕ್ಷೇತ್ರದ ಲಕ್ಷಾಂತರ ಜನರ ಹೃದಯದಲ್ಲಿ ನೆಲಸಿರುವುದು ಇಲ್ಲಿ ನೆರದಿರುವ ಅಪಾರ ಜನಸಾಗರವೇ ಸಾಕ್ಷಿ.

ಮೇ 19 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಅವರ ಪತ್ನಿ ಶ್ರೀಮತಿ ಕುಸುಮಾವತಿ ಸಿ ಶಿವಳ್ಳಿ ಅವರ ಹೆಚ್ಚಿನ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಚ್ ಕೆ ಪಾಟೀಲ್ ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ.

25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ : ಎಚ್ಕೆಪಿ25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ : ಎಚ್ಕೆಪಿ

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿ ದಿವಂಗತ ಸಚಿವರಾದ ಸಿ ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಸಿ ಶಿವಳ್ಳಿ ಅವರ ನಾಮಪತ್ರ ಸಲ್ಲಿಕೆಯ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚಿಂಚೋಳಿ ಟಿಕೆಟ್ ರಾಜಕೀಯ,ಬಿಜೆಪಿ ಕಿಚಾಯಿಸಿದ ಖರ್ಗೆ ಪುತ್ರ ಚಿಂಚೋಳಿ ಟಿಕೆಟ್ ರಾಜಕೀಯ,ಬಿಜೆಪಿ ಕಿಚಾಯಿಸಿದ ಖರ್ಗೆ ಪುತ್ರ

ದಿವಂಗತ ಸಿ ಎಸ್ ಶಿವಳ್ಳಿ ಅವರು ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಲ್ಲಿ ನೆರೆದಿರುವ ಸಾವಿರಾರು ಜನರೇ ಅವರ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಾಕ್ಷಿ. ಇಲ್ಲಿ ನೆರೆದಿರುವ ಜನ ಸಮೂಹವನ್ನು ನೋಡಿದರೆ, ಶಿವಳ್ಳಿ ಅವರು ತಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವುದು ಕಂಡುಬರುತ್ತದೆ. ಅಂತಹ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಮಗೆಲ್ಲಾ ಬಹಳ ದುಖಃಕರ ಸಂಗತಿ. ಅವರ ಪತ್ನಿ ಶ್ರೀಮತಿ ಕುಸುಮಾವತಿ ಶಿವಳ್ಳಿ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಕಣಕ್ಕೆ ಇಳಿಸಿದೆ.

 ಮೇ 19ರಂದು ಉಪ ಚುನಾವಣೆ

ಮೇ 19ರಂದು ಉಪ ಚುನಾವಣೆ

ಮೇ 19 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಕ್ಷೇತ್ರದ ಜನರು ಮೈತ್ರಿ ಅಭ್ಯರ್ಥಿಯ ಕೈ ಹಿಡಿಯಲಿದ್ದು ಹೆಚ್ಚಿನ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದರು. ರೋಡ್ ಶೋ ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ರೋಡ್ ಶೋ ನಂತರ ನಾಮಪತ್ರವನ್ನು ಸಲ್ಲಿಸಲಾಯಿತು.

 ಪೌರಾಡಳಿತ ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ

2018ರ ವಿಧಾನಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸಿ.ಎಸ್.ಶಿವಳ್ಳಿ ಅವರು ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಮಾರ್ಚ್ 22ರಂದು ಹೃದಯಾಘಾತದಿಂದಾಗಿ ನಿಧನಹೊಂದಿದರು. ಕುರುಬ ಸಮುದಾಯದ ಪ್ರಭಾವಿ ನಾಯಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ.

ಕುಂದಗೋಳ ಉಪ ಚುನಾವಣೆ : ಕುಸುಮಾ ಶಿವಳ್ಳಿ ನಾಮಪತ್ರ ಸಲ್ಲಿಕೆಕುಂದಗೋಳ ಉಪ ಚುನಾವಣೆ : ಕುಸುಮಾ ಶಿವಳ್ಳಿ ನಾಮಪತ್ರ ಸಲ್ಲಿಕೆ

 ಅನುಕಂಪದ ಅಲೆ ಇಲ್ಲಿ ವರ್ಕ್ ಔಟ್ ಆಗುವುದೇ?

ಅನುಕಂಪದ ಅಲೆ ಇಲ್ಲಿ ವರ್ಕ್ ಔಟ್ ಆಗುವುದೇ?

ಸಿ.ಎಸ್.ಶಿವಳ್ಳಿ ಅವರು ಮೂರು ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 2013ರಲ್ಲಿ ಕಾಂಗ್ರೆಸ್‌ನಿಂದ, 2018ರಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. ಅವರ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

 ಕುಂದಗೋಳದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್

ಕುಂದಗೋಳದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್

ಎಸ್‌.ಐ.ಚಿಕ್ಕನಗೌಡರ್ ಅವರು ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ಕೆಜೆಪಿಯಿಂದ ಮತ್ತು 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಎಸ್‌.ಐ.ಚಿಕ್ಕನಗೌಡರ್ ಸತತ ಮೂರು ಚುನಾವಣೆ ಸೋತಿದ್ದಾರೆ. 2018ರ ಚುನಾವಣೆಯಲ್ಲಿ ಎಸ್‌.ಐ.ಚಿಕ್ಕನಗೌಡರ್ ಅವರು ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಕೇವಲ 634 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಕರಾದ ಎಂಬಿ ಚಿಕ್ಕನಗೌಡರ್ ಅವರು ಕುಂದಗೋಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

English summary
Kusumavathih Shivalli wife of late C.S Shivalli will win Kundagol by election by huge margin said KPCC campaign committee president HK Patil today after the rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X