ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಗೋಳ ಉಪಚುನಾವಣೆ: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

|
Google Oneindia Kannada News

Recommended Video

ಕುಂದಗೋಳ, ಚಿಂಚೋಳಿ ಉಪಚುನಾವಣೆ ಹಿನ್ನೆಲೆ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ | Oneindia Kannada

ಧಾರವಾಡ, ಏಪ್ರಿಲ್ 27: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಈಗ ವಿಧಾನಸಭೆ ಉಪಚುನಾವಣೆ ಕಾವು ಏರಿದೆ. ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಟಿಕೆಟ್ ಫೈಟ್ ಜೋರಾಗಿ ನಡೆಯುತ್ತಿದೆ.

ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದ್ದು ವಿಶೇಷವಾಗಿ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರ ಎರಡು ಬಣಗಳ ಮಧ್ಯೆ ಅಸಮಾಧಾನ ಹೆಚ್ಚು ಮಾಡಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಕುಂದಗೋಳದ ಬಿಜೆಪಿ ಟಿಕೆಟ್‌ ಯಡಿಯೂರಪ್ಪ ಅವರ ಸಂಬಂಧಿ ಚಿಕ್ಕನಗೌಡ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಅವರು ಈಗಾಗಲೇ ಒಂದು ನಾಮಪತ್ರವನ್ನು ಸಲ್ಲಿಸಿಯೂ ಆಗಿದೆ, ಅಧಿಕೃತ ನಾಮಪತ್ರ ಸಲ್ಲಿಕೆ ಇನ್ನೂ ಬಾಕಿ ಇದೆ. ಆದರೆ ಇದು ಅವರ ವಿರೋಧಿ ಬಣದ ಅಸಮಾಧಾನಕ್ಕೆ ಕಾರಣವಾಗಿದೆ.

ಚಿಂಚೋಳಿ, ಕುಂದಗೋಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮ ಚಿಂಚೋಳಿ, ಕುಂದಗೋಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮ

ಬಿಜೆಪಿಯ ಮುಖಂಡ ಎಂ.ಆರ್.ಪಾಟೀಲ್ ಅವರೂ ಸಹ ಕುಂದಗೋಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು, ಆದರೆ ಚಿಕ್ಕನಗೌಡ ಅವರಿಗೆ ಟಿಕೆಟ್ ದೊರೆತಿರುವುದು ಅವರಿಗೆ ಮತ್ತು ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದ್ದು, ಬಂಡಾಯದ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಚಿಕ್ಕನಗೌಡ ಕಳೆದ ಬಾರಿಯೂ ಅಭ್ಯರ್ಥಿ ಆಗಿದ್ದರು

ಚಿಕ್ಕನಗೌಡ ಕಳೆದ ಬಾರಿಯೂ ಅಭ್ಯರ್ಥಿ ಆಗಿದ್ದರು

ಚಿಕ್ಕನಗೌಡ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಯಾಗಿದ್ದರು, ದಿವಂಗತ ಸಿ.ಎಸ್.ಶಿವಳ್ಳಿ ಅವರ ಎದುರು ಕೇವಲ 634 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಹಾಗಾಗಿ ಅದೇ ಕಾರಣದಿಂದಾಗಿ ಚಿಕ್ಕನಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.

ಚಿಂಚೋಳಿ, ಕುಂದಗೋಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮ ಚಿಂಚೋಳಿ, ಕುಂದಗೋಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮ

ಎಂ.ಆರ್.ಪಾಟೀಲ್ ಬಿಜೆಪಿ ಟಿಕೆಟ್ ಆಕಾಂಕ್ಷಿ

ಎಂ.ಆರ್.ಪಾಟೀಲ್ ಬಿಜೆಪಿ ಟಿಕೆಟ್ ಆಕಾಂಕ್ಷಿ

ಕಳೆದ ವಿಧಾನಸಭೆ ಚುನಾವಣೆಯಲ್ಲೂ ಸಹ ಎಂ.ಆರ್.ಪಾಟೀಲ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಆಗ ತಪ್ಪಿದ್ದ ಟಿಕೆಟ್ ಈ ಬಾರಿ ದೊರಕುವುದೆಂಬ ವಿಶ್ವಾಸದಲ್ಲಿ ಅವರಿದ್ದರು ಆದರೆ ಈ ಬಾರಿಯೂ ಸಹ ಬಿಜೆಪಿ ಟಿಕೆಟ್ ಯಡಿಯೂರಪ್ಪ ಅವರ ಸಂಬಂಧಿ ಪಾಲಾಗಿದೆ.

ಚಿಂಚೋಳಿ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ದಿಢೀರ್ ಬದಲಾವಣೆ!ಚಿಂಚೋಳಿ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ದಿಢೀರ್ ಬದಲಾವಣೆ!

ಚಿಂಚೋಳಿಯಲ್ಲೂ ಟಿಕೆಟ್ ಗೊಂದಲ

ಚಿಂಚೋಳಿಯಲ್ಲೂ ಟಿಕೆಟ್ ಗೊಂದಲ

ಚಿಂಚೋಳಿಯಲ್ಲಿ ಸಹ ಬಿಜೆಪಿ ಟಿಕೆಟ್ ಗೊಂದಲ ಎಬ್ಬಿಸಿದೆ. ಮೊದಲಿಗೆ ಚಿಂಚೋಳಿ ಬಿಜೆಪಿ ಟಿಕೆಟ್‌ಗಾಗಿ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಅವರು ಆಕಾಂಕ್ಷಿ ಆಗಿದ್ದರು, ಅವರು ಕಳೆದ ಬಾರಿ ಉಮೇಶ್ ಜಾಧವ್ ವಿರುದ್ಧ ಸೋಲನುಭವಿಸಿದ್ದರು, ನಂತರ ನಡೆದ ಬೆಳವಣಿಗೆಗಳಲ್ಲಿ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು ಚಿಂಚೋಳಿ ಕ್ಷೇತ್ರದ ವಿಧಾನಸಭೆ ಟಿಕೆಟ್ ತಮ್ಮ ಕುಟುಂಬಕ್ಕೇ ಬೇಕೆಂದು ಪಟ್ಟು ಹಿಡಿದರು.

2 ಕ್ಷೇತ್ರದ ಉಪ ಚುನಾವಣೆ : ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ2 ಕ್ಷೇತ್ರದ ಉಪ ಚುನಾವಣೆ : ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

ಉಮೇಶ್ ಪುತ್ರ ಅವಿನಾಶ್ ಜಾಧವ್ ಅಭ್ಯರ್ಥಿ

ಉಮೇಶ್ ಪುತ್ರ ಅವಿನಾಶ್ ಜಾಧವ್ ಅಭ್ಯರ್ಥಿ

ಜಾಧವ್ ಅವರ ಒತ್ತಡಕ್ಕೆ ಮಣಿದ ಬಿಜೆಪಿ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಟಿಕೆಟ್ ನೀಡುವುದಾಗಿ ನಿಶ್ಚಿಯಿಸಲಾಯಿತು. ಆದರೆ ಮತ್ತೆ ಜಾಧವ್ ಅವರ ಕುಟುಂಬದಲ್ಲೇ ಗೊಂದಲ ಎದ್ದ ಕಾರಣ ಅಭ್ಯರ್ಥಿಯನ್ನು ಬದಲಾಯಿಸಿ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಲಾಗಿದೆ.

ಮೇ 19 ಚುನಾವಣೆ, 23 ಫಲಿತಾಂಶ

ಮೇ 19 ಚುನಾವಣೆ, 23 ಫಲಿತಾಂಶ

ಮೇ 19 ರಂದು ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರಕ್ಕೆ ಉಪಚುನಾವಣೆಗಳು ನಡೆಯಲಿವೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ. ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು ಹಾಗೂ ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಉಮೇಶ್ ಜಾಧವ್ ರಾಜೀನಾಮೆ ನೀಡಿದ ಕಾರಣ ಈ ಉಪಚುನಾವಣೆ ನಡೆಯುತ್ತಿದೆ.

English summary
Kundgol BJP ticket almost confirm to Chikkana Gowda who contested in 2018 assembly election and loose just by 632 votes. But BJP leader MR Patil unhappy with this he also aspirant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X