• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು-ಧಾರವಾಡ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ

|

ಧಾರವಾಡ, ಮೇ 04; ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರೈಲಿನ ಮೂಲಕ ಸಂಚಾರ ನಡೆಸುವ ಜನರು ಟಿಕೆಟ್ ತೋರಿಸಿ ರೈಲು ನಿಲ್ದಾಣಕ್ಕೆ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.

ನೈಋತ್ಯ ರೈಲ್ವೆ ಪ್ರಯಾಣಿಕರ ಕೊರತೆಯ ಕಾರಣ ಮೇ 4ರಿಂದ ಮುಂದಿನ ಆದೇಶದ ತನಕ ಧಾರವಾಡ- ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದ್ದ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ರಾಜಧಾನಿಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ತೊಂದರೆಯಾಗಲಿದೆ.

ಕೊರೊನಾ ಏರಿಕೆ; ರೈಲು ಸಂಚಾರದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆಕೊರೊನಾ ಏರಿಕೆ; ರೈಲು ಸಂಚಾರದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆ

ರೈಲು ಸಂಖ್ಯೆ 02725/02726 ಕೆ.ಎಸ್.ಆರ್. ಬೆಂಗಳೂರು-ಧಾರವಾಡ- ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆಯನ್ನು ಬೆಂಗಳೂರಿನಿಂದ ಮೇ 4 ಮತ್ತು ಧಾರವಾಡದಿಂದ ಮೇ 5 ರಿಂದ ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು-ಮಂಗಳೂರು-ಕಾರವಾರ ರೈಲು; ವೇಳಾಪಟ್ಟಿ ಬೆಂಗಳೂರು-ಮಂಗಳೂರು-ಕಾರವಾರ ರೈಲು; ವೇಳಾಪಟ್ಟಿ

ಒಂದು ಟ್ರಿಪ್ ಸಂಚಾರ; ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 07313 ವಾಸ್ಕೋ ಡ ಗಾಮಾ-ದಾನಾಪುರ ಎಕ್ಸ್ ಪ್ರೆಸ್ ವಿಶೇಷ ರೈಲನ್ನು 6.5.2021ರಂದು ಒಂದು ಟ್ರಿಪ್ ಮಾತ್ರ ಓಡಿಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಎಚ್ಚರಿಕೆ ಗಂಟೆ: ಬೆಂಗಳೂರಿನ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಖಾಲಿ ಖಾಲಿ!ಎಚ್ಚರಿಕೆ ಗಂಟೆ: ಬೆಂಗಳೂರಿನ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಖಾಲಿ ಖಾಲಿ!

ಆಕ್ಸಿಜನ್ ಪೂರೈಕೆ; ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ರೈಲಿನ ಮೂಲಕ ಆಕ್ಸಿಜನ್ ಸಾಗಾಣೆ ಮಾಡುತ್ತಿದೆ. ಕರ್ನಾಟಕದಲ್ಲಿ ಸಹ ಆಕ್ಸಿಜನ್ ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

   ಪಶ್ಚಿಮ‌ ಬಂಗಾಳ ಮತ್ತು ದೀದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಸ್ಪೆಂಡ್ ಮಾಡಿದ ಟ್ವಿಟ್ಟರ್ | Oneindia Kannada

   ಕರ್ನಾಟಕ ಸರ್ಕಾರದ ಮನವಿಯಂತೆ 24 ಗಂಟೆಗಳಲ್ಲಿ ವೈಟ್ ಫೀಲ್ಡ್ ಗೂಡ್ಸ್ ಟರ್ಮಿನಲ್ ನಲ್ಲಿ ಲಾರಿಯನ್ನು ಏರಿಸಿ/ ಇಳಿಸಲು ಸಹಾಯಕವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ರೋ-ರೋ ಸೇವೆ ಮೂಲಕ ಆಕ್ಸಿಜನ್ ಸಾಗಾಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

   English summary
   South western railway cancelled KSR Bengaluru-Dharwad-KSR Bengaluru express special train. Train will not run from Dharwad on May 5 and From Bengaluru May 4.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X