ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ: ಕೋಡಿಮಠಶ್ರೀ ಭವಿಷ್ಯದಲ್ಲಿ ಬದಲಾವಣೆ

By Srinath
|
Google Oneindia Kannada News

ಧಾರವಾಡ, ಏ.5: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಡಿಮಠ ಶ್ರೀ ಮತ್ತೊಂದು ಭವಿಷ್ಯ ಹೇಳಿದ್ದಾರೆ. ಈ ಹಿಂದೆ ಯಾವುದೇ ಪಕ್ಷದ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲವಾದರೂ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಇತರೆ ಪಕ್ಷಗಳ ನೆರವಿನೊಂದಿಗೆ ಕೇಂದ್ರದಲ್ಲಿ ನೂತನ ಸರಕಾರ ಸ್ಥಾಪಿಸಲಿದೆ ಎಂದು ಹೇಳಿದ್ದಕ್ಕೆ ಈ ಬಾರಿ ತುಸು ಮಾರ್ಪಾಡು ತಂದಿದ್ದಾರೆ.

ಮಾಧ್ಯಮ ಸಂಸ್ಥೆಗಳು ಆಗಾಗ ಚುನಾವಣಾ ಸಮೀಕ್ಷೆಗಳನ್ನು ಪ್ರಕಟಿಸುವಂತೆ ಹಾಸನದ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರೂ ಸಹ ಕಾಲಕಾಲಕ್ಕೆ ಚುನಾವಣಾ ಭವಿಷ್ಯ ನುಡಿಯುತ್ತಿದ್ದಾರೆ. (ಕೋಡಿಮಠ ಶ್ರೀ ಈ ಹಿಂದೆ ನುಡಿದಿರುವ ಭವಿಷ್ಯಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ)

ಈ ಬಾರಿ ಅವರು 'ನಡೆಯುವ ಹಾದಿ ಮೂರು ಕವಲಾಯಿತು. ಮುತ್ತಿನ ಗಿಣಿ ಮುಪ್ಪಾಗಿ ಮುತ್ತಾಯಿತೋ, ಮುದುಕನ ಕಾಲ ಮೇಲೆ ಕಾಗಿ ಕುಳಿತಿತೋ' ಎಂದು ನಿಗೂಢವಾಗಿ/ಮಾರ್ಮಿಕವಾಗಿ ಭವಿಷ್ಯ ಹೇಳಿದ್ದಾರೆ. ಇದರರ್ಥ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲವಂತೆ.

kodimath-seer-predicts-no-party-gets-majority-in-lok-sabha-polls-2014
ಧಾರವಾಡದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠ ಸ್ವಾಮೀಜಿ ಇಂದಿನ ದಿನಗಳಲ್ಲಿ ನಡೆಯುತ್ತಿರುವ ವಿಷಯುಕ್ತ ಚುನಾವಣೆಯನ್ನು ಗಮನಿಸಿದರೆ ನೈತಿಕ ಮೌಕ್ಯ ಅನ್ನುವುದು ಅಂಧಃಪತನವಾಗುತ್ತಿದೆ. ಈ ಬಾರಿ ಚುನಾವಣೆ ಮುಗಿಯುತ್ತಿದ್ದಂತೆ ಅಚ್ಚರಿಯ ಘಟನೆಯೊಂದು ಸಂಭವಿಸಲಿದೆ. ಅಲ್ಲದೇ ಜೀವ ಜಂತುಗಳಿಂದ ಮಾನವರಿಗೆ ಅಪಾಯವಿದೆ ಎಂದು ಸ್ವಾಮೀಜಿಗಳು ಆತಂಕ ಮಿಶ್ರಿತ ಎಚ್ಚರಿಕೆಯ ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ದೊಡ್ಡ ಘಟನೆಯೊಂದು ಸಂಭವಿಸಲಿದ್ದು ಶ್ರೀಮಂತರು ಮತ್ತು ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಲಿದ್ದಾರೆ. ಅಲ್ಲದೇ ಬೆಂಕಿಯ ಅವಘಡಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿವೆ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿದ್ದು, ರೈತರಿಗೆ ಸುಖ ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

English summary
Kodimath Seer Sri Shivananda Rajendra Swamiji has predicted that no party gets majority in Lok Sabha polls 2014. He was speaking to reporters in Dharwad yesterday (April 4).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X