ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂರು ವರ್ಷದ ಹಿಂದಿನ ಅಂಬೇವಾಡಿ-ಅಳ್ನಾವರ ಮಾರ್ಗದ ವಿಶೇಷತೆಗಳು

|
Google Oneindia Kannada News

ಧಾರವಾಡ, ನವೆಂಬರ್ 04 : 100 ವರ್ಷಗಳಷ್ಟು ಹಳೆಯದಾದ ಅಂಬೇವಾಡಿ-ಅಳ್ನಾವರ ರೈಲು ಮಾರ್ಗ ಲೋಕಾರ್ಪಣೆಗೊಂಡಿದೆ. ಅಂಬೇವಾಡಿ-ಧಾರವಾಡ ನಡುವೆ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.

25 ಕಿ. ಮೀ. ಮಾರ್ಗವನ್ನು 12.35 ಕೋಟಿ ರೂ. ವೆಚ್ಚದಲ್ಲಿ ಬ್ರಾಡ್‌ ಗೇಜ್‌ಗೆ ಪರಿವರ್ತನೆ ಮಾಡಲಾಗಿತ್ತು. ಬಳಿಕ ಸರಕು ಸಾಗಣೆ ರೈಲು ಮಾತ್ರ ಸಂಚಾರ ನಡೆಸುತ್ತಿತ್ತು. ನವೆಂಬರ್ 4ರಂದು ಈ ಮಾರ್ಗದಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ಆರಂಭಿಸಲಾಗಿದೆ.

ಅಂಬೇವಾಡಿ-ಧಾರವಾಡ ಪ್ರಯಾಣಿಕ ರೈಲು ವೇಳಾಪಟ್ಟಿಅಂಬೇವಾಡಿ-ಧಾರವಾಡ ಪ್ರಯಾಣಿಕ ರೈಲು ವೇಳಾಪಟ್ಟಿ

ಅಳ್ನಾವರ-ಅಂಬೇವಾಡಿ ವಿಭಾಗ ಪ್ರವಾಸಿ ತಾಣ ದಾಂಡೇಲಿಗೆ ಸಮೀಪದಲ್ಲಿದೆ. ಕಾಳಿ ನದಿಯ ತಟದಲ್ಲಿರುವ ದಾಂಡೇಲಿ ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿದ್ದು, ಹಲವು ಪ್ರಾಣಿಗಳಿಗೆ ಅವಾಸ ಸ್ಥಾನವಾಗಿದೆ. ರೈಲು ಮಾರ್ಗದಿಂದ ದಾಂಡೇಲಿಗೆ ನೀಡಲು ಸಹಾಯಕವಾಗಿದೆ.

ಅಳ್ನಾವರ-ಅಂಬೇವಾಡಿ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಅಳ್ನಾವರ-ಅಂಬೇವಾಡಿ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ

ಅಂಬೇವಾಡಿ- ಧಾರವಾಡ ನಡುವೆ ಪ್ರಯಾಣಿಕ ರೈಲು ಸಂಚಾರಕ್ಕೆ ಭಾನುವಾರ ಹಸಿರು ನಿಶಾನೆ ತೋರಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯೊಂದಿಗೆ ರೈಲು ಮಾರ್ಗ ಸಂಪರ್ಕಿಸಲಿದ್ದು, ಪ್ರವಾಸಿ ಚಟುವಟಿಕೆಗಳ ವಿಸ್ತರಣೆಗೆ ಇದು ಅನುಕೂಲ ಕಲ್ಪಿಸಲಿದೆ.

ವಿಜಯಪುರ-ಮಂಗಳೂರು ನಡುವೆ ಹೊಸ ರೈಲು ಸೇವೆವಿಜಯಪುರ-ಮಂಗಳೂರು ನಡುವೆ ಹೊಸ ರೈಲು ಸೇವೆ

100 ವರ್ಷಗಳಷ್ಟು ಹಳೆಯ ಮಾರ್ಗ

100 ವರ್ಷಗಳಷ್ಟು ಹಳೆಯ ಮಾರ್ಗ

ಅಂಬೇವಾಡಿ-ಅಳ್ನಾವರ ವಿಭಾಗವು ನೂರು ವರ್ಷಗಳಷ್ಟು ಹಳೆಯದಾದ ಚರಿತ್ರಾರ್ಹ ಮಾರ್ಗ. ಬ್ರಾಡ್‌ ಗೇಜ್‌ಗೆ ಪರಿವರ್ತನೆ ಆದ ಬಳಿಕ ಮೊದಲ ಬಾರಿಗೆ ಪ್ರಯಾಣಿಕ ರೈಲುಗಳ ಸಂಚಾರ ಆರಂಭಿಸಲಾಗಿದೆ. 1918ರಲ್ಲಿ ಮದ್ರಾಸ್ ಮತ್ತು ಸದರ್ನ ಮರಾಠಾ ರೈಲ್ವೆಯಿಂದ ಹಳಿಗಳನ್ನು ಹಾಕಲಾಗಿತ್ತು. ಈ ಮಾರ್ಗ ಅರಣ್ಯ ಉತ್ಪನ್ನಗಳನ್ನು ವಿಶೇಷ ವಾಗಿ ಮೊದಲ ಮಹಾಯುದ್ಧದಲ್ಲಿ ಮರಗಳನ್ನು ಸಾಗಿಸಲು ಬಳಕೆಯಾಗುತ್ತಿತ್ತು.

ನಾಲ್ಕು ನಿಲ್ದಾಣಗಳಿವೆ

ನಾಲ್ಕು ನಿಲ್ದಾಣಗಳಿವೆ

ಈ ಮಾರ್ಗ ಬೆಳಗಾವಿ ಮತ್ತು ಹುಬ್ಬಳ್ಳಿ ಮುಖ್ಯ ಮಾರ್ಗವನ್ನು ಸಂಪರ್ಕಿಸುತ್ತಿದ್ದು, ಮಾರ್ಗದಲ್ಲಿ ಗೋಗಟೆವಾಡಿ, ಶಿಂಗಟಗೇರಿ, ಅಂಬೇವಾಡಿ ಮತ್ತು ದಾಂಡೇಲಿ ಸೇರಿ ನಾಲ್ಕು ನಿಲ್ದಾಣಗಳನ್ನು ಹೊಂದಿದೆ. ಮೊದಲು ಈ ಮಾರ್ಗದಲ್ಲಿ ಸರಕು ಸಾಗಣೆ ರೈಲು ಸಂಚಾರ ನಡೆಸುತ್ತಿತ್ತು. ಬಳಿಕ ಪ್ರಯಾಣಿಕ ರೈಲು ಆರಂಭವಾಯಿತು. ದಾಂಡೇಲಿಯ ಪೇಪರ್ ಮಿಲ್ಲಿನಿಂದ ಹಾಗೂ ಮಿಲ್ಲಿಗೆ ಸರಕುಗಳನ್ನು ಸಾಗಿಸಲು ಮಾರ್ಗವನ್ನು ಬಳಸಲಾಗುತ್ತಿತ್ತು.

ಬ್ರಾಡ್‌ ಗೇಜ್‌ಗೆ ಪರಿವರ್ತನೆ

ಬ್ರಾಡ್‌ ಗೇಜ್‌ಗೆ ಪರಿವರ್ತನೆ

1994ರಲ್ಲಿ ಮಾರ್ಗವನ್ನು ಮೀಟರ್‌ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತನೆ ಮಾಡಲು ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಅಳ್ನಾವರದಿಂದ ಅಂಬೇವಾಡಿ ವರೆಗಿನ ಏಕ ಮಾರ್ಗದಲ್ಲಿ 7/7/1995ರಲ್ಲಿ ರೈಲು ಸಂಚಾರ ಆರಂಭಿಸಲಾಯಿತು. ಈಗ ಅಳ್ನಾವರ-ಅಂಬೇವಾಡಿ ವಿಭಾಗವು ಸಂಪೂರ್ಣವಾಗಿ ಪ್ರಯಾಣಿಕರಿಗೆ ಮುಕ್ತವಾಗಿದೆ.

ಪ್ರಯಾಣಿಕ ರೈಲು ಸಂಚಾರ

ಪ್ರಯಾಣಿಕ ರೈಲು ಸಂಚಾರ

ರೈಲು ಸಂಖ್ಯೆ 56923/56924 ಧಾರವಾಡ-ಅಂಬೇವಾಡಿ-ಧಾರವಾಡ ಪ್ಯಾಸೆಂಜರ್ ವಯಾ ಅಳ್ನಾವರ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಧಾರವಾಡ-ಅಂಬೇವಾಡಿಯ ನಡುವೆ ಎರಡೂ ಕಡೆಗಳಿಂದ ರೈಲು ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ ಧಾರವಾಡ, ಕ್ಯಾರಕೊಪ್ಪ, ಮುಗದ, ಕಂಬಾರಗಣವಿ, ಅಳ್ನಾವರ, ಅಂಬೇವಾಡಿ ನಿಲ್ದಾಣಗಳಿವೆ.

English summary
Passenger train service between Dharwad and Ambewadi stations began. Know about Ambewadi-Alnavar train route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X