ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂನಲ್ಲಿ ಹಣ ಮಾತ್ರ ಅಲ್ಲ, ಇನ್ಮುಂದೆ ಹಾಲು ಸಹ ಬರುತ್ತೆ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಡಿಸೆಂಬರ್ 6: ಎಟಿಎಂನಲ್ಲಿ ಹಣ ಮಾತ್ರವಲ್ಲ, ಇನ್ನು ಮುಂದೆ ಹಾಲನ್ನು ಕೂಡ ಪಡೆಯಬಹುದು. ಎಟಿಎಂ ಮಾದರಿಯಲ್ಲೇ ನಂದಿನಿ ಹಾಲನ್ನು ದೊರಕಿಸಿಕೊಡುವ ಸೌಲಭ್ಯವೊಂದು ಪರಿಚಿತವಾಗುತ್ತಿದೆ. ಎಟಿಎಂ ರೀತಿಯಂತೆ ಹಾಲು ನೀಡುವ ಮಷಿನ್ ಹಾಗೂ ಸಂಚಾರಿ ಎಟಿಎಂ ಹಾಗೆ ಮನೆ ಮನೆ ಬಾಗಿಲಿಗೆ ಹಾಲು ನೀಡುವ ಮಷಿನ್ ಬರುವ ಕಾಲ ಸನ್ನಿಹಿತವಾಗಿದೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಪ್ರಾಯೋಗಿಕವಾಗಿ ಎಟಿಎಂ ಮಾದರಿಯಲ್ಲಿ ಹಾಲು ದೊರೆಯಲಿದೆ.

 ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಯೋಗ

ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಯೋಗ

ಧಾರವಾಡದ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಪ್ರಾಯೋಗಿಕವಾಗಿ, ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಎರಡು ಎಟಿಎಂ ಮಾದರಿಯಲ್ಲಿ ಮಷಿನ್ ಅಳವಡಿಸಲು ಚಿಂತನೆ ನಡೆಸಿದೆ ಹಾಗೂ ಮನೆ ಮನೆಗೆ ಮಷಿನ್ ಮೂಲಕ ನಂದಿನಿ ಹಾಲು ಪೂರೈಕೆ ಮಾಡಲು ಮುಂದಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರಾಯೋಗಿಕವಾಗಿ ತಲಾ ಒಂದೊಂದು ಇಂತಹ ಮಷಿನ್ ಅಳವಡಿಕೆಗೆ ಕೆಎಂಎಫ್ ಮುಂದಾಗಿದೆ.

ಇಬ್ಬರ ನಡುವಿನ ತಿಕ್ಕಾಟದಲ್ಲಿ ಮಣ್ಣು ಪಾಲಾಯ್ತು 1500 ಲೀಟರ್ ಹಾಲುಇಬ್ಬರ ನಡುವಿನ ತಿಕ್ಕಾಟದಲ್ಲಿ ಮಣ್ಣು ಪಾಲಾಯ್ತು 1500 ಲೀಟರ್ ಹಾಲು

 ಪ್ಲಾಸ್ಟಿಕ್ ಕಡಿವಾಣ ಹಾಕುವ ಉದ್ದೇಶ

ಪ್ಲಾಸ್ಟಿಕ್ ಕಡಿವಾಣ ಹಾಕುವ ಉದ್ದೇಶ

ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎನ್ನುವ ಕೂಗು ಹೆಚ್ಚಾಗಿದ್ದು, ಪರಿಸರಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಧಾರವಾಡ ಕೆಎಂಎಫ್ ಮುಂದಾಗಿದೆ. ಪ್ಲಾಸ್ಟಿಕ್ ಮುಕ್ತಿ ನೀಡಿ, ಹಾಲು ಹಾಗೂ ಹಾಲಿನ ಉತ್ಪನ್ನಗಳಿರುವ ಮಿಲ್ಕ್ ಪಾರ್ಲರ್ ‌ಗಳಲ್ಲೂ ಮಿಲ್ಕ್ ವೆಂಡಿಂಗ್ ಮೆಷಿನ್ ಇಡಲು ಉದ್ದೇಶಿಸಲಾಗಿದೆ.

 ಹಾಲು ಪಡೆಯಲು ಕಾರ್ಡ್ ಮಾದರಿ

ಹಾಲು ಪಡೆಯಲು ಕಾರ್ಡ್ ಮಾದರಿ

ಹಾಲನ್ನು ಪಡೆಯಲು ಕಾರ್ಡ್‌ ಮಾದರಿ, ಸಬ್‌ಸ್ಕ್ರಿಪ್ಶನ್ ಮಾದರಿ ಬಗ್ಗೆ ಪರಿಚಯಿಸಲು ಚಿಂತನೆ ನಡೆದಿದೆ. ಮಷಿನ್ ಕಾರ್ಯನಿರ್ವಹಣೆ, ಕಾರ್ಡ್ ಮಾದರಿ ಹಾಗೂ ವಹಿವಾಟಿನ ಕುರಿತು ಕೆಎಂಎಫ್ ನಿರ್ಣಯ ಇನ್ನು ಅಂತಿಮ ರೂಪವನ್ನು ಪಡೆದುಕೊಂಡಿಲ್ಲ. ಹಾಲನ್ನು ಮನೆ ಬಳಕೆಗೆ ಪಡೆಯಬಹುದು ಇಲ್ಲವೇ ಪಡೆದು ಮಾರಾಟ ಮಾಡಬಹುದು.

81 ಮಕ್ಕಳಿಗೆ ಒಂದು ಲೀಟರ್ ಹಾಲು: ಯೋಗಿ ಸರ್ಕಾರದ ವಿರುದ್ಧ ಆಕ್ರೋಶ81 ಮಕ್ಕಳಿಗೆ ಒಂದು ಲೀಟರ್ ಹಾಲು: ಯೋಗಿ ಸರ್ಕಾರದ ವಿರುದ್ಧ ಆಕ್ರೋಶ

 ಹೈನುಗಾರಿಕೆ ನಡೆಸುವವರಿಗೂ ಅವಕಾಶ

ಹೈನುಗಾರಿಕೆ ನಡೆಸುವವರಿಗೂ ಅವಕಾಶ

ಗ್ರಾಹಕರು ತಮಗೆ ಬೇಕಾದಷ್ಟು ಹಣ ನೀಡಿ ಹಾಲನ್ನು ಪಡೆಯಬಹುದು, ಹಾಗೇ ಹೈನುಗಾರಿಕೆ ಮಾಡುವವರು ಸಹ ಮೆಷಿನ್ ಮೂಲಕ ಹಾಲನ್ನು ಮಾರಾಟ ಮಾಡಲು ಅವಕಾಶವಿದೆ. ಪ್ಲಾಸ್ಟಿಕ್ ಗೆ ಮುಕ್ತಿ ಹಾಡಿ ಮೆಷಿನ್ ಮೂಲಕ ಹಾಲು ಪಡೆಯಲು ಕಾಲ ಸನ್ನಿಹಿತವಾಗುತ್ತಿದೆ.

English summary
KMF is experimenting by introducing an ATM-like milk wending machine in Hubballi and Dharwad city
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X