ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.28 ರಂದು ವಿಧಾನ ಪರಿಷತ್ ಚುನಾವಣೆ: 2.34 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ

By Lekhaka
|
Google Oneindia Kannada News

ಧಾರವಾಡ, ಅಕ್ಟೋಬರ್ 28: ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ಅ.28ರ ಬುಧವಾರ ಚುನಾವಣೆ ನಡೆಯಲಿದೆ. ಒಟ್ಟು 2.34 ಲಕ್ಷ ಮತದಾರರು ಮತದಾನದ ಮಾಡುವ ಹಕ್ಕು ಹೊಂದಿದ್ದಾರೆ.

ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಚುನಾವಣೆ ನಡೆಯಲಿದೆ. ಮತದಾರರು ನಿರಾತಂಕವಾಗಿ ಮತದಾನ ಮಾಡಲು ಪೂರಕ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಮಾಸ್ಕ್, ಫೇಸ್​ಶೀಲ್ಡ್, ಸ್ಯಾನಿಟೈಸರ್ ಬಳಕೆ ಮಾಡಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಿದ್ದಾರೆ.

ಮತದಾನಕ್ಕೆ ಅ. 28 ರಂದು ರಜೆ ಕೊಡಲು ರಾಜ್ಯ ಸರ್ಕಾರದ ಆದೇಶ!ಮತದಾನಕ್ಕೆ ಅ. 28 ರಂದು ರಜೆ ಕೊಡಲು ರಾಜ್ಯ ಸರ್ಕಾರದ ಆದೇಶ!

ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಒಟ್ಟು 549 ಮತಗಟ್ಟೆ ಸ್ಥಾಪಿಸಲಾಗಿದ್ದು, ಬುಧವಾರ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

Karnataka Legislative Council Polls On Oct 28: 2.34 Lakh Voters Will Cast Their Votes

ಮತಗಟ್ಟೆ ಸಿಬ್ಬಂದಿ ಮಂಗಳವಾರ ಮಧ್ಯಾಹ್ನದಿಂದಲೇ ಚುನಾವಣಾ ಪರಿಕರಗಳನ್ನು ಪಡೆದುಕೊಂಡು ನಿರ್ದಿಷ್ಟ ಮತಗಟ್ಟೆಗೆ ಬಂದಿದ್ದರು. ಆಯಾ ಜಿಲ್ಲಾ ಕೇಂದ್ರಗಳಿಂದ ಮತಗಟ್ಟೆಗೆ ಬೇಕಾದ ಪರಿಕರಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಬಗ್ಗೆ ಯಾವುದೇ ಆತಂಕ, ಭಯ-ಭೀತಿ ಇಲ್ಲದೆ ಮತದಾನ ಮಾಡುವಂತೆ ಅರಿವನ್ನು ಈಗಾಗಲೇ ಮೂಡಿಸಲಾಗಿದೆ.

ಒಟ್ಟು 2,34,718 ಮತದಾರರ ಪೈಕಿ 1,42,889 ಪುರುಷ, 91,809 ಮಹಿಳಾ ಹಾಗೂ 20 ಇತರೆ ಇದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 47,584 ಪುರುಷ, 26,673 ಮಹಿಳೆಯರಿದ್ದರೆ, 11 ಇತರೆ ಇದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 68,411 ಪುರುಷ, 40,712 ಮಹಿಳೆ ಮತ್ತು 4 ಇತರೆ ಸೇರಿ 1,09,127 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 18,948 ಪುರುಷ, 10,284 ಮಹಿಳಾ ಮತ್ತು 2 ಇತರೆ ಸೇರಿ 29,234 ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 7,946 ಪುರುಷ, 14,140 ಮಹಿಳಾ ಹಾಗೂ 3 ಇತರೆ ಸೇರಿ 22,089 ಮತದಾರರನ್ನು ಒಳಗೊಂಡಿದೆ.

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಮಯ ಎಣಿಕೆ ನಡೆಯಲಿದ್ದರೆ, ಕಲಬುರಗಿ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ನವೆಂಬರ್ 2 ರಂದು ನಡೆಯಲಿದೆ.

English summary
Karnataka Legislative Council Elections for the Two Teachers' And Two Graduate Constuencies be held on Wednesday. A total of 2.34 lakh voters have the right to vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X