ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಆಶೀರ್ವಾದ ಇರುವ ತನಕ ಸರ್ಕಾರ ಸುಭದ್ರ : ಕುಮಾರಸ್ವಾಮಿ

|
Google Oneindia Kannada News

Recommended Video

ಸಿದ್ದರಾಮಯ್ಯ ಬಗ್ಗೆ ಹೇಳಿಕೆ ನೀಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಧಾರವಾಡ, ಮೇ 13 : 'ಸಿದ್ದರಾಮಯ್ಯ ನನಗೆ ಅಣ್ಣನ ಸಮಾನ. ಅವರ ಆಶೀರ್ವಾದ ಇರೋವರೆಗೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮೈತ್ರಿ ಸರ್ಕಾರದ ಬೃಹತ್ ಸಮಾವೇಶ ಸೋಮವಾರ ಸಂಜೆ ನಡೆಯಿತು. ವಿಧಾನಸಭೆ ಉಪ ಚುನಾವಣೆ ಪ್ರಚಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡರು.

ಸಿದ್ದರಾಮಯ್ಯ, ವಿಶ್ವನಾಥ್ ವಾಕ್ಸಮರ : ಯಾರು, ಏನು ಹೇಳಿದರು?ಸಿದ್ದರಾಮಯ್ಯ, ವಿಶ್ವನಾಥ್ ವಾಕ್ಸಮರ : ಯಾರು, ಏನು ಹೇಳಿದರು?

ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು. 'ನಾಡಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದೇವೆ. ಇಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಅಡಗಿಲ್ಲ' ಎಂದು ಸ್ಪಷ್ಟಪಡಿಸಿದರು.

ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?

ಮೇ 19ರಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕುಸುಮಾ ಶಿವಳ್ಳಿ ಅವರು ಕಣದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಜೆಡಿಎಸ್-ಕಾಂಗ್ರೆಸ್ ನಾಯಕರು ಒಟ್ಟಾಗಿ ಸಮಾವೇಶ ನಡೆಸುವ ಮೂಲಕ ಪ್ರಚಾರ ನಡೆಸಿದರು.

ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!?ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!?

ಬಿಜೆಪಿಯಿಂದ ಎಸ್‌.ಐ.ಚಿಕ್ಕನಗೌಡರ್ ಅವರು ಕುದಂಗೋಳ ಚುನಾವಣಾ ಕಣದಲ್ಲಿದ್ದಾರೆ. ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ಎದುರಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

ಧಾರವಾಹಿ ಪ್ರಸಾರ ಮಾಡ್ತಿದೆ

ಧಾರವಾಹಿ ಪ್ರಸಾರ ಮಾಡ್ತಿದೆ

'ಬಿಜೆಪಿ ನಾಯಕರ ಮಾತು ಕೇಳಿ ಗಡುವಿನ ಧಾರವಾಹಿಯನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಸಾಲ ಮನ್ನಾ ಮಾಡುವ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಧಾರವಾಡ ಜಿಲ್ಲೆಗೆ 290 ಕೋಟಿ ಅನುದಾನ ನೀಡಿದ್ದೇವೆ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಿಜೆಪಿಯವರ ಅಡೆ-ತಡೆ

ಬಿಜೆಪಿಯವರ ಅಡೆ-ತಡೆ

'ನಮ್ಮ ಸರ್ಕಾರಕ್ಕೆ ಬಿಜೆಪಿಯವರು ಕೊಡುತ್ತಿರುವ ಗಡುವುಗಳ ಅಡೆ-ತಡೆ ನಡುವೆಯೇ ಅನೇ ಜನಪರ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹಾಕಿಕೊಂಡಿದ್ದ ಅನೇಕ ಯೋಜನೆಗಳನ್ನು ಮುಂದುವರೆಸಿದ್ದೇವೆ. ರೈತರು ಕಟಾವು ಮಾಡಿದ ಬೆಳೆಯನ್ನ ಸಾಗಾಟ ಮಾಡುವುದಕ್ಕೆ ಹಣ ನೀಡುವ ಯೋಜನೆ ಈ ವರ್ಷದಿಂದ ಆರಂಭವಾಗಲಿದೆ' ಎಂದು ಕುಮಾರಸ್ವಾಮಿ ಹೇಳಿದರು.

ಕೇಂದ್ರ ಸರ್ಕಾರ ದೋಖಾ ಮಾಡಿದೆ

ಕೇಂದ್ರ ಸರ್ಕಾರ ದೋಖಾ ಮಾಡಿದೆ

'ಮಾಧ್ಯಮ ವರದಿಯಿಂದ ನಾನು ಹೆದರೋದಿಲ್ಲ. ಬಡ್ಡಿ ಮನ್ನಾ ಬಗ್ಗೆ ಕೇಂದ್ರ ಸರ್ಕಾರ ದೋಖಾ ಮಾಡ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ರೌಡಿಸಂ ಮಾಡಲು ಕರೆತಂದಿಲ್ಲ. ಕುಸುಮಕ್ಕ ಅವರನ್ನು ಗೆಲ್ಲಿಸಲು ಅವರು ಬಂದಿದ್ದಾರೆ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಡವರನ್ನು ನೋಡಿದರೆ ಕಣ್ಣೀರು ಬರುತ್ತದೆ

ಬಡವರನ್ನು ನೋಡಿದರೆ ಕಣ್ಣೀರು ಬರುತ್ತದೆ

'ಬಡವರನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಡಿ.ಕೆ.ಶಿವಕುಮಾರ್ ಅವರು ಐಟಿ ಇಲಾಖೆ ಕಿರುಕುಳ ಕೊಟ್ಟಾಗ ಅತ್ತಿಲ್ಲ. ತಾಯಿಯನ್ನು ಮೂರು ಗಂಟೆ ಐಟಿ ಅಧಿಕಾರಿಗಳ ಮುಂದೆ ನಿಲ್ಲಿಸಿದಾಗ ಅತ್ತಿಲ್ಲ. ಜನರ ಕಷ್ಟ ನೋಡಿದಾಗ ಸಹಜವಾಗಿ ಕಣ್ಣೀರು ಬರುತ್ತದೆ' ಎಂದು ಕುಮಾರಸ್ವಾಮಿ ಹೇಳಿದರು.

English summary
Karnataka Congress and JD(S) coalition govt safe said Chief Minister Siddaramaiah. On Monday, May 13, 2019 in Kundgol he said that Govt will continue with Siddaramaiah blessings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X