ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲಿ ಭಯದ ವಾತಾವರಣವಿದೆ: ಗಿರೀಶ್ ಕಾರ್ನಾಡ್ ಕಳವಳ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಜನವರಿ 20: ಪಾಕಿಸ್ತಾನದಲ್ಲಿ ನನಗೆ ಆತ್ಮೀಯ ಸ್ನೇಹಿತರು ಇದ್ದಾರೆ. ನಾನು ಆಗಾಗ ಹೋಗಿಬರುತ್ತೇನೆ. ಅಲ್ಲಿ ಶಿಯಾ ಹಾಗೂ ಸುನ್ನಿ ಮುಸ್ಲಿಮರ ನಡುವೆ ಜಗಳ ನಡೆಯುತ್ತಿರುತ್ತದೆ. ನಮ್ಮ ದೇಶದಲ್ಲಿ ಶಿಯಾ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೂ ನಮ್ಮ ದೇಶದಲ್ಲಿ ಭಯದ ವಾತಾವರಣವಿದೆ ಎಂದು ಜ್ಞಾನಪೀಠ ಪುಸರಸ್ಕೃತ ಡಾ. ಗಿರೀಶ್ ಕಾರ್ನಾಡ್ ಹೇಳಿದರು.

ಧಾರವಾಡದಲ್ಲಿ ಶನಿವಾರ ನಡೆದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ವಯಕ್ತಿಕ ವಿಚಾರ ಹೇಳಲು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಹೀಗಾಗಿ ನನಗೆ 6 ಮಂದಿ ಪೊಲೀಸರಿಂದ ಭದ್ರತೆಗೆ ಕೊಟ್ಟಿದ್ದಾರೆ. ಪ್ರಕಾಶ್ ರೈ ಹಾಗೂ ಇರ್ಫಾನ್ ಖಾನ್ ಉತ್ತಮ ನಟರು. ಇವರ ಬಗ್ಗೆ ದೇಶದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಸಂವಿಧಾನ ಬದಲಿಸುವ ಹೇಳಿಕೆ ಸರಿಯಲ್ಲ. ನಿಜವಾದ ಚುನಾವಣೆ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ ಎಂದರು.

ಯಾವುದೋ ಒಂದು ಪಂಡಿತ ಧರ್ಮ, ಜಾತಿಯನ್ನು ಇಟ್ಟುಕೊಂಡು ಬಂದಿರುತ್ತವೆ. ಅದಕ್ಕೆ ಕವಿಗಳು ಹೊರತಾಗಿಲ್ಲ. ಇದಕ್ಕೆ ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಭೀಮಸೇನ ಜೋಶಿ ಉದಾಹರಣೆ. ನಮ್ಮ ಪರಿಸರದಲ್ಲಿ ಶ್ರೀಮಂತ ಸಾಹಿತ್ಯ ಇದ್ದರೂ ಕೂಡ ಅದನ್ನ ಯಾರು ಬರೆಯುವುದಿಲ್ಲ. ಜಾತಿ ಧರ್ಮ ಬಿಟ್ಟು ಹೊರ ಹೋಗುವುದಿಲ್ಲ ಎಂದರು.

Karnad opines that Scary Situation in the country

ಇತಿಹಾಸ ತಜ್ಞರ ಪ್ರಕಾರ ವಿಜಯಪುರ ಜಿಲ್ಲೆ ವಿದ್ಯಪೂರ ಇತ್ತು. ಸಾಂಸ್ಕೃತೀಕರಣ ಮಾಡಲು ಎಲ್ಲಿಂದ ಎಲ್ಲಿಗೋ ಹೊಗಿದೆ. ವಿಜಯಪುರದ ಸೂಫಿ ಸಂತರ ಬಗ್ಗೆ ಅಮೆರಿಕನ್ನರು ಚೆನ್ನಾಗಿ ಬರೆದಿದ್ದಾರೆ. ಈ ಬಗ್ಗೆ ಪೂಣೆ ಇತಿಹಾಸ ಸಂಶೋಧನಾ ಮಂಡಳಿ ಪುಸ್ತಕ ಪ್ರಕಟಿಸಿದ್ದು. ಹಂಪಿ ಕಾಳಗದ ದೃಶ್ಯ ಕಾಮಿಕ್ ಬುಕ್ ರೀತಿ ಇದ್ದು ಸುಂದರವಾಗಿದೆ. ಇದರಲ್ಲಿ ಅಹ್ಮದನಗರದ ರಾಜ ಹುಸೇನ್ ಶಾ ಹಂಪಿಯ ಅಳಿಯದೆವರಾಯನ ತಲೆ ಕಡೆದ ಬಗ್ಗೆ ಉಲ್ಲೇಖ ಇದೆ. ಇದು ಆ ಕಾಲದಲ್ಲಿನ ವಿಜಯನಗರ ಸಾಮ್ರಾಜ್ಯ ಹಾಗೂ ಸುಲ್ತಾನರ ಕಾಳಗವನ್ನ ಸಾರಿ ಹೇಳುವಂತೆ ಇದೆ.

ನನಗೆ ಪುಪ್ಪಸದಲ್ಲಿ ತೊಂದರೆ ಇರುವ ಕಾರಣಕ್ಕೆ ಕೃತಕ ಆಕ್ಸಿಜನ್ ಕಿಟ್ ಹೊತ್ತುಕೊಂಡು ಓಡಾಡುತ್ತಿದ್ದೇನೆ ಇದೇನು ಇದರಲ್ಲೇನೂ ಹಿಂಜರಿಕೆ ಬೇಕಾಗಿಲ್ಲ ನಾವೇನು ರೇಪ್ ಮಾಡಿಲ್ಲವಲ್ಲ, ನಮ್ಮ ಆರೋಗ್ಯಕ್ಕೆ ನಾನು ಕಿಟ್ ಹೊತ್ತಕೊಂಡು ಓಡಾಡೋದೇನು ತೊಂದರೆ ಇಲ್ಲ ಈ ‌ಕಿಟ್ ಜೊತೆಗಿದ್ದ ಕಾರಣಕ್ಕೆ ನಾನು ಧಾರವಾಡಕ್ಕೆ ಬರುವಂತಾಗಿದೆ ಎಂದು ಹೇಳಿದರು.

English summary
Jnanapeet awardee Girish Karnad opined that Scary situation in the country, I have very close friends in Pakistan. Hera Shiya Muslims are safe but still some fear looms around. U can't express everything in this country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X