ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣರಾಜ್ಯೋತ್ಸವಕ್ಕೆ ಕೆಲಗೇರಿ ಕಲಾವಿದರು ಅಯ್ಕೆ

ಜನವರಿ 26 ರಂದು ನವದೆಹಲಿಯಲ್ಲಿ ರಾಜಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧಾರವಾಡದ ಕೆಲಗೇರಿಯ ಶ್ರೀ ದುರ್ಗಾದೇವಿ ಜಗ್ಗಲಿಗೆ ಮೇಳದ ಇಬ್ಬರು ಕಲಾವಿದರಿಗೆ ಭಾಗವಹಿಸುವ ಅವಕಾಶ ದೊರೆತಿದೆ.

By Mahesh
|
Google Oneindia Kannada News

ಧಾರವಾಡ, ಜನವರಿ 17: ಗಣತಂತ್ರ ದಿನ(ಜನವರಿ 26) ದಂದು ನವದೆಹಲಿಯಲ್ಲಿ ರಾಜಪಥ್ ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧಾರವಾಡದ ಕೆಲಗೇರಿಯ ಶ್ರೀ ದುರ್ಗಾದೇವಿ ಜಗ್ಗಲಿಗೆ ಮೇಳದ ಇಬ್ಬರು ಕಲಾವಿದರಿಗೆ ಭಾಗವಹಿಸುವ ಅವಕಾಶ ದೊರೆತಿದೆ.

ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕದ ಜನಪದ ಕಲೆಗಳನ್ನು ಬಿಂಬಿಸುವ ಸ್ತಭ್ಧಚಿತ್ರವನ್ನು ಈ ಬಾರಿ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದೆ.ದೇಶದ ಏಳು ರಾಜ್ಯಗಳಿಗೆ ಗಣರಾಜ್ಯೋತ್ಸವದಲ್ಲಿ ಸ್ತಬ್ಧಚಿತ್ರ ಪ್ರದರ್ಶಿಸುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದೆ. ಕರ್ನಾಟಕವು ಸತತ ಏಳನೇ ಬಾರಿಗೆ ಗಣರಾಜ್ಯೋತ್ಸವದಲ್ಲಿ ಸ್ತಬ್ಧಚಿತ್ರ ಪ್ರದರ್ಶನ ಮಾಡುತ್ತಿದೆ.

Kalageri Jaggalige Folk artist to perform on Rajpath on Republic Day celebration in New Delhi.

ಗೊರವರ ಕುಣಿತ,ಪೂಜಾ ಕುಣಿತ,ಯಕ್ಷಗಾನ,ನಂದಿಕೋಲು,ಕಿನ್ನರಿ,ಜಗ್ಗಲಿಗೆ ಮುಂತಾದ 12 ಕನ್ನಡದ ಜನಪದ ಕಲೆಗಳನ್ನು ದೇಶಕ್ಕೆ ಪರಿಚಯಿಸುವ ಈ ಸ್ತಭ್ಧಚಿತ್ರದಲ್ಲಿ ಧಾರವಾಡದ ಕೆಲಗೇರಿಯ ಜಗ್ಗಲಿಗೆ ಕಲಾವಿದರಾದ ಬಸಪ್ಪ ಹಂಚಿನಮನಿ ಹಾಗೂ ದೇವೇಂದ್ರ ಬೇವಿನಮರದ ಅವರು ಭಾಗವಹಿಸುತ್ತಿದ್ದಾರೆ.

ಈಗಾಗಲೇ ನವದೆಹಲಿಯ ರಕ್ಷಣಾ ಸಚಿವಾಲಯದ ಶಿಬಿರದಲ್ಲಿ ಸ್ತಬ್ಧಚಿತ್ರ ಪ್ರದರ್ಶನದ ತಾಲೀಮಿನಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಸಿದ್ಧ ಮೈಸೂರು ದಸರಾ,ಹಂಪಿ ಉತ್ಸವಗಳಲ್ಲಿ ಜಗ್ಗಲಿಗೆ ಪ್ರದರ್ಶನ ನೀಡಿರುವ ಇವರು. ಫಕೀರಪ್ಪ ಹಂಚಿನಮನಿ,ಶಿವಪ್ಪ ಮಾಳಗಿ ,ಭೀಮಪ್ಪ ಮಾಳಗಿ ಸೇರಿದಂತೆ ಕೆಲಗೇರಿಯ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.

English summary
Dharwad: Kalageri Jaggalige Folk artist team has been chosen to perform on Rajpath on Republic Day celebration in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X