• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ ಪ್ರಕರಣದಲ್ಲಿ ಹೊರಬಂದಿರುವುದು ಕೆಲವೇ ಹೆಸರು ಮಾತ್ರ: ಭಾಸ್ಕರ್ ರಾವ್

By ಧಾರವಾಡ ಪ್ರತಿನಿಧಿ
|

ಧಾರವಾಡ, ಅಕ್ಟೋಬರ್ 6: ಡ್ರಗ್ ಪ್ರಕರಣದಲ್ಲಿ ಈಗ ಹೊರ ಬಂದಿರುವುದು ಕೆಲವೇ ಹೆಸರು ಅಷ್ಟೇ ಎಂದು ಆಂತರಿಕ ಭದ್ರತಾ ದಳ ಮುಖ್ಯಸ್ಥ ಭಾಸ್ಕರ್ ರಾವ್ ಹೇಳಿದ್ದಾರೆ.

ಇಂದು ಧಾರವಾಡದಲ್ಲಿ ಮಾತನಾಡಿದ ಅವರು, ಡ್ರಗ್ ಪ್ರಕರಣದಲ್ಲಿ ಪೆಡ್ಲರ್ ಮತ್ತು ಗ್ರಾಹಕರವರೆಗೆ ಹೋಗಿದ್ದೇವೆ. ಇದು ಎಲ್ಲಿಂದ ಬರುತ್ತಿದೆ ಅದು ಪತ್ತೆ ಮಾಡಬೇಕಿದೆ ಎಂದು ಹೇಳಿದರು. ಕೆಮಿಕಲ್ ಡ್ರಗ್ ಮತ್ತು ಆರ್ಟಿಫಿಷಿಯಲ್ ಡ್ರಗ್ ಹೊರ ದೇಶಗಳಿಂದ ಬರುತ್ತಿದೆ ಎಂದರು.

ಮಾದಕ ದ್ರವ್ಯವು ಸಮುದ್ರ ಮತ್ತು ವಿಮಾನ ನಿಲ್ದಾಣದಿಂದ ಬರುತ್ತಿದೆಯಾ ಅಂತ ನೋಡಿ ಭದ್ರತೆಯನ್ನು ಬಿಗಿಗೊಳಿಸಬೇಕಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಶಾಮೀಲಾಗಿದ್ದಾರಾ? ಅವರ ಪಾತ್ರ ಏನು ಎಂದು ಶೋಧಿಸುವ ಕಾರ್ಯವನ್ನು ಐ.ಎಸ್.ಡಿ ಮಾಡುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಕಸ್ಟಮ್ ಅಧಿಕಾರಿಗಳು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ನನ್ನ ಆರೋಪ ಇದ್ದು, ಇದರಲ್ಲಿ ಕೊರಿಯರ್ ನವರು ಕೆಲವು ಕಡೆ ಶಾಮೀಲು ಆಗಿದ್ದಾರೆ ಎಂದು ಭಾಸ್ಕರ್ ರಾವ್ ಹೇಳಿದರು.

   ಶಾಲಾ ಕಾಲೇಜುಗಳು ಪುನರಾರಂಬದ ಬಗ್ಗೆ Sriramulu ಹೇಳಿದ್ದೇನು | Oneindia Kannada

   ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಾನು ಬೆಂಗಳೂರು ಪೊಲೀಸ್ ಆಯುಕ್ತನಾಗಿದ್ದಾಗ, ನನ್ನ ಕೈಯಿಂದ ಆದಷ್ಟು ಸಿಬ್ಬಂದಿಗೆ ಸಹಾಯ ಮಾಡಿದ್ದೇನೆ. ಪ್ರತಿ ಪೊಲೀಸ್ ಠಾಣೆಯ 55 ವರ್ಷ ಮೇಲ್ಪಟ್ಟ ಪೇದೆಗಳು ಹಾಗೂ ಅಧಿಕಾರಿಗಳಿಗೆ ಮನೆಯಲ್ಲೇ ಇರಲು ಹೇಳಿದ್ದೆ ಎಂದು ಭಾಸ್ಕರ್ ರಾವ್ ಅವರು ಈ ವೇಳೆ ನೆನಪಿಸಿಕೊಂಡರು.

   English summary
   Dharawad: ADGP Bhaskar Rao Says only few people names came out in Karnataka drugs case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X