• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2 ತಿಂಗಳಿನಲ್ಲಿ ಧಾರವಾಡ ಐಐಐಟಿ ನೂತನ ಕಟ್ಟಡ ಪೂರ್ಣ

|

ಧಾರವಾಡ, ಮಾರ್ಚ್ 03: ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ನೂತನ ಕಟ್ಟಡದ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 117 ಕೋಟಿ ರೂ. ವೆಚ್ಚದಲ್ಲಿ ಐಐಐಟಿ ಕ್ಯಾಂಪಸ್ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ.

ಬುಧವಾರ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ನೂತನ ಕಟ್ಟಡದ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು. ತಡಸಿನಕೊಪ್ಪದ ಬಳಿ 61 ಎಕರೆ ಪ್ರದೇಶದಲ್ಲಿ ಐಐಐಟಿಯ ನೂತನ ಭವ್ಯವಾದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಧಾರವಾಡ; ಮಾಸ್ಕ್ ಹಾಕದಿದ್ದರೆ ಮತ್ತೆ ದಂಡ ಕಟ್ಟಲು ಸಿದ್ಧರಾಗಿ ಧಾರವಾಡ; ಮಾಸ್ಕ್ ಹಾಕದಿದ್ದರೆ ಮತ್ತೆ ದಂಡ ಕಟ್ಟಲು ಸಿದ್ಧರಾಗಿ

ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕರು ವಿವಿಧೋದ್ದೇಶ ಸಭಾಂಗಣ, ತರಗತಿ ಕೋಣೆಗಳು, ಆಡಳಿತ ಭವನ, ವಿದ್ಯಾರ್ಥಿ ನಿಲಯದ ಕಟ್ಟಡಗಳನ್ನು ಪರಿಶೀಲಿಸಿದರು. ಐಐಐಟಿ ನಿರ್ದೇಶಕ ಡಾ. ಕವಿ ಮಹೇಶ, ರಿಜಿಸ್ಟ್ರಾರ್ ಚನ್ನಪ್ಪ ಅಕ್ಕಿ ಮುಂತಾದವರು ಜೊತೆಗಿದ್ದರು.

 ಐಐಟಿ ಸಿಬ್ಬಂದಿ ನೇಮಕಾತಿ; ಕೋಟಾ ರದ್ದುಗೊಳಿಸಲು ಸಮಿತಿ ಸೂಚನೆ ಐಐಟಿ ಸಿಬ್ಬಂದಿ ನೇಮಕಾತಿ; ಕೋಟಾ ರದ್ದುಗೊಳಿಸಲು ಸಮಿತಿ ಸೂಚನೆ

ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ವಿದ್ಯಾಕೇಂದ್ರ ಎನಿಸಿರುವ ಧಾರವಾಡಕ್ಕೆ ಐಐಐಟಿ ಬರಲು ಆಗ ಉನ್ನತ ಶಿಕ್ಷಣವನ್ನು ಸಚಿವರಾಗಿದ್ದ ಆರ್. ವಿ. ದೇಶಪಾಂಡೆ, ಈಗ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿಗಳಾಗಿದ್ದ ಡಾ. ರಜನೀಶ್ ಗೋಯೆಲ್ ಅವರು ನೀಡಿದ ಸಹಕಾರ ನೆನಪು ಮಾಡಿಕೊಂಡರು.

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ

"ಐಐಐಟಿಯ ಹೊಸ ಕಟ್ಟಡ ನಿರ್ಮಿಸಲು ಈ ಮುಂಚೆ ಸಿದ್ಧಪಡಿಸಿದ್ದ ವಿನ್ಯಾಸ ನಿರೀಕ್ಷೆಗೆ ಅನುಗುಣವಾಗಿರಲಿಲ್ಲ. ಧಾರವಾಡದ ಕರ್ನಾಟಕ ವಿವಿ, ಕೃಷಿ ವಿ.ವಿ., ಕೆಸಿಡಿಯಂತೆ ನಗರದ ಹೆಗ್ಗುರುತಾಗಿ ಗುರುತಿಸಲ್ಪಡುವ ಮಾದರಿಯಲ್ಲಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲು ಸೂಚಿಸಿ ಪುನರ್ ರಚಿಸಲಾಯಿತು" ಎಂದರು.

"ಅತ್ಯಂತ ಸುಂದರ ಹಾಗೂ ಭವ್ಯವಾಗಿ ಈ ಕಟ್ಟಡ ತಲೆ ಎತ್ತಿದೆ. ಇಲ್ಲಿ ಐಐಐಟಿ ಸ್ಥಾಪನೆಯಾಗಲು ತಡಸಿನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೀಡಿದ ಸಹಕಾರ ಕೂಡ ಮಹತ್ವದ್ದಾಗಿದೆ. ಐಐಐಟಿಯು ಸರ್ಕಾರ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತವೆ, ಮುಂದೆ ಯಾವುದೇ ಅನುದಾನವಿಲ್ಲದೇ, ವಿದ್ಯಾರ್ಥಿಗಳ ಶುಲ್ಕ, ಸಂಶೋಧನೆ ಚಟುವಟಿಕಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಸ್ವಾಯತ್ತವಾಗಿ ನಿರ್ವಹಿಸಲ್ಪಡುತ್ತದೆ" ಎಂದು ಹೇಳಿದರು.

   ಅನಾಮಿಕ ಕರೆಗೆ ಹೆದುರಿದ ಪೊಲೀಸ್ ತಂಡ!! | TAJ MAHAL in TROUBLE | Oneindia Kannada

   2015ರಲ್ಲಿ ಧಾರವಾಡದಲ್ಲಿ ಐಐಐಟಿಯನ್ನು ಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ತರಗತಿಗಳು ನಡೆಯುತ್ತಿವೆ. ಶಾಶ್ವತ ಕ್ಯಾಂಪಸ್ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ.

   English summary
   Hubli-Dharwad west constituency BJP MLA Arvind Bellad said that new campus of Indian Institute of Information and Technology (IIIT) Dharwad will complete in two months.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X