ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಐಐಐಟಿಯಿಂದ ಆದಿವಾಸಿಗಳ ಭಾಷೆಗಳಿಗೆ ಧ್ವನಿ ಭಾಷಾನುವಾದ ರೋಬೋಟ್ ಸಂಶೋಧನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 23: ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗೆ ರಾಷ್ಟ್ರಪತಿಗಳು ಆಗಮಿಸುವ ಸಂಭ್ರಮ ಒಂದೆಡೆಯಾದರೆ ಇದೇ ಸಂಸ್ಥೆಯಿಂದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್ ಯಂತ್ರವನ್ನು ಸಿದ್ಧಪಡಿಸುತ್ತಿರುವುದು ನಾಡಿನ ಹೆಮ್ಮೆಯ ಸಂಗತಿಯಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 26 ರಂದು ಮಧ್ಯಾಹ್ನ ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿಯೇ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹುಮನೊಯ್ಡ ರೋಬೋಟ್ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ. ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿಭಾಷಾನುವಾದದ ಉಪಕರಣವನ್ನು ತಯಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಸೆ. 26ಕ್ಕೆ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ; ಹೇಗಿದೆ ತಯಾರಿ? ಇಲ್ಲಿದೆ ವಿವರಸೆ. 26ಕ್ಕೆ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ; ಹೇಗಿದೆ ತಯಾರಿ? ಇಲ್ಲಿದೆ ವಿವರ

ಈ ರೋಬೋಟ್ ತಂತ್ರಜ್ಞಾನದಲ್ಲಿ ಬುಡಕಟ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯ ಬುಡಕಟ್ಟಿನ ಭಾಷೆಯಲ್ಲಿ ನೀಡಲಿದೆ. ಈ ಯೋಜನೆಯಲ್ಲಿ ಓರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆಗಳನ್ನು ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇಂಗ್ಲೀಷ್ ಭಾಷೆಯಿಂದ ಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲೀಷ್ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದಂತಹ ತಂತ್ರಲಿಪಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

IIIT Dharwad Develops a Voice Translation Robot for Tribal languages

ಸಾವಿರಾರು ವರ್ಷಗಳ ಇತಿಹಾಸವಿರುವ ಲಿಪಿಯಲ್ಲಿನ ಭಾಷೆ ಸಾಕಾಷ್ಟು ಜ್ಞಾನವಿರುವ ಈ ಬುಡಕಟ್ಟು ಜನಾಂಗದಲ್ಲಿ ಈ ತಂತ್ರಜ್ಞಾನ ಉಪಯೋಗವಾದರೆ ಜೀವವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿ ಡಿಜಿಟಲ್ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ತಿಳಿಸಬಹುದಾಗಿದೆ. ಸರಕಾರಿ ಯೋಜನೆಗಳ ಬಗ್ಗೆ ಅರಿವು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆಯೂ ಇದರಿಂದ ತಿಳಿದುಕೊಳ್ಳಬಹುದಾಗಿದೆ.

ಐಐಐಟಿ ಹೊಸ ಕ್ಯಾಂಪಸ್‌ ಲೋಕಾರ್ಪಣೆ

ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ 'ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)' ಸತ್ತೂರಿನ ಉದಯಗಿರಿ ಬಳಿ ತಲೆ ಎತ್ತಿದೆ. ಅತ್ಯಾಧುನಿಕ ಸೌಕರ್ಯಗಳ ಕ್ಯಾಂಪಸ್‌ ಮತ್ತು ಕಟ್ಟಡಗಳನ್ನು ಹೊಂದಿರುವ ಸಂಸ್ಥೆ ಲೋಕಾರ್ಪಣೆಗೆ ಸಿದ್ಧವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 26ರಂದು ಮಧ್ಯಾಹ್ನ ನೂತನ ಕ್ಯಾಂಪಸ್‌ ಉದ್ಘಾಟಿಸಲಿದ್ದಾರೆ.

ಐಐಐಟಿ 2015ರಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಆಧಾರದ ಮೇಲೆ ಸ್ಥಾಪನೆಗೊಂಡಿದೆ. ಇದರಲ್ಲಿ ಕೇಂದ್ರ ಸರಕಾರದ ಶಿಕ್ಷಣ ಮಂತ್ರಿ ಶಾಖೆ, ಕರ್ನಾಟಕ ಸರ್ಕಾರ ಮತ್ತು ಕೈಗಾರಿಕಾ ಪಾಲುದಾರರಾದ ಕಿಯೋನಿಕ್ಸ್‌ ಸಹಭಾಗಿತ್ವ ಹೊಂದಿವೆ. ಕ್ರಮವಾಗಿ 50:35:15 ಆಧಾರದ ಮೇಲೆ ಒಟ್ಟು 128 ಕೋಟಿ ವೆಚ್ಚದಲ್ಲಿ ನೂತನ ಕ್ಯಾಂಪಸ್‌ ತಲೆ ಎತ್ತಿದೆ. ಒಟ್ಟು 1200 ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಸಕಲ ಸೌಕರ್ಯವನ್ನು ಈ ಸಂಸ್ಥೆ ಹೊಂದಿದೆ. ವಿಶೇಷ ಎಂದರೆ, ಈ ಐಐಐಟಿ ಧಾರವಾಡದ ಆಡಳಿತ ಮಂಡಳಿಗೆ ಇಸ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥರಾದ ಸುಧಾಮೂರ್ತಿ ಕಾರ್ಯಾಧ್ಯಕ್ಷರಾಗಿದ್ದಾರೆ.

ಜಿಮಖಾನಾ ಕ್ಲಬ್‌ನಲ್ಲಿ ಸಿದ್ಧತೆ

ಸೆಪ್ಟೆಂಬರ್‌ 26ರಂದು ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಕ್ಲಬ್‌ ಶೃಂಗಾರಗೊಳ್ಳುತ್ತಿದೆ. ರಾಜ್ಯ-ದೇಶ, ವಿದೇಶಗಳ ಅತ್ಯುನ್ನತ ಸ್ಥಾನದಲ್ಲಿದ್ದವರು, ಮೇರು ಕಲಾವಿದರು, ಯೋಧರು, ಸಾಧಕರಿಗೆ ಮಹಾನಗರ ಪಾಲಿಕೆ ಪೌರಸನ್ಮಾನ ಕೈಗೊಳ್ಳುತ್ತದೆ. ಪಾಲಿಕೆ ಅಸ್ತಿತ್ವಕ್ಕೆ ಬಂದು 60 ವರ್ಷಗಳಾಗಿದ್ದು, ಹಲವು ಗಣ್ಯರು, ಕಲಾವಿದರು, ಸಾಧಕರಿಗೆ ಪೌರಸನ್ಮಾನ ಸಲ್ಲಿಸುತ್ತಾ ಬಂದಿದೆ. ಇದೀಗ ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಲು ಪಾಲಿಕೆ ಸಜ್ಜಾಗಿದೆ.

English summary
IIIT Dharwad has developed a voice translation robot for tribal languages, the Indian Institute of Information Technology(IIIT) will introduce the robot to President of India Draupadi Murmu on September 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X