ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ ಎನ್ನಲು ಜಮೀರ್ ಯಾರು?: ಮುತಾಲಿಕ್ ಪ್ರಶ್ನೆ

|
Google Oneindia Kannada News

ಧಾರವಾಡ, ಆಗಸ್ಟ್ 9: ಶಾಸಕ ಜಮೀರ್ ಅಹ್ಮದ್ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನಕ್ಕೆ ಅವಕಾಶ ಇಲ್ಲ ಎಂದು ಹೇಳಿರುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದು, ಜಮೀರ್‌ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, "ಜಮೀರ್ ಅಹ್ಮದ್ ಅವರೇ ಚಾಮರಾಜಪೇಟೆಯ ಈದ್ಗಾ ಮೈದಾನ ನಿಮ್ಮ ಅಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ, ಜೊತೆಗೆ ವಕ್ಫ್ ಬೋರ್ಡ್‌ದು ಅಲ್ಲ, ಮುಸ್ಲಿಂರದ್ದು ಅಲ್ಲ, ಅದು ಹಿಂದೂಗಳದ್ದು ಅಲ್ಲ. ಇದೊಂದು ಸರಕಾರದ ಜಾಗ ಅದು.‌ ಆದ್ದರಿಂದ ಈ ಬಗ್ಗೆ ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆಗೆ ಅವಕಾಶ ಇಲ್ಲ ಎಂದು ಹೇಳುವುದಕ್ಕೆ ನೀವು ಯಾರು ? ಎಂದು ಪ್ರಶ್ನೆ ಮಾಡಿರುವ ಪ್ರಮೋದ್ ಮುತಾಲಿಕ್, ಸರಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ. ಇದರ ಜೊತೆಗೆ ವಿಧಿವಿಧಾನದ ಮೂಲಕ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ . ಹಾಗಾದ್ರೆ ಈಗ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ?," ಎಂದು ನೇರವಾಗಿ ಜಮೀರ್ ಅಹ್ಮದ್ ಅವರಿಗೆ ಪ್ರಶ್ನೆ ಮಾಡಿದರು.

ಗಣೇಶೋತ್ಸವ ಆಚರಣೆಗೆ ನಿರ್ಬಂಧವಿಲ್ಲ; ಆರ್. ಅಶೋಕಗಣೇಶೋತ್ಸವ ಆಚರಣೆಗೆ ನಿರ್ಬಂಧವಿಲ್ಲ; ಆರ್. ಅಶೋಕ

"ನೀವು ಕೇವಲ ಮುಸ್ಲಿಂ ಮತಗಳಿಂದ ಮೇಲೆ ಗೆದ್ದಿಲ್ಲ. ನೀವು, ಮುಸ್ಲಿಂ ಶಾಸಕ ಅಲ್ಲ, ನೀವು ಚಾಮರಾಜಪೇಟೆ ಶಾಸಕ ಎಂಬುದನ್ನು ನೆನಪು ಇಟ್ಟುಕೊಳ್ಳಿ. ನಿಮಗೆ ಹಿಂದೂಗಳು ಓಟು ಹಾಕಿದ್ದಾರೆ. ನೀವು ಈ ಹೇಳಿಕೆ ಮೂಲಕ ಗಲಬೆಗೆ ಕಾರಣರಾಗುತ್ತಿದ್ದೀರಾ, ಅಶಾಂತಿಗೆ ಕಾರಣರಾಗುತ್ತಿದ್ದೀರಾ. ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದು. ಯಾವುದೇ ಕಾರಣಕ್ಕೋ ಇಂತಹ ಹೇಳಿಕೆ ಬೇಡ ಎಂದ ಅವರು, ಈ ಹೇಳಿಕೆ ವಾಪಾಸ್ ಪಡೆಯಬೇಕು, ಹಿಂದೂಗಳಿಗೆ ಕ್ಷಮೆ ಕೇಳಬೇಕು," ಎಂದು ಆಗ್ರಹಿಸಿದರು.

Idgah Maidan row:Pramod Muthalik Lashes Out against Zameer Ahmed Khan

ಇನ್ನು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಆಚರಣೆ ಮಾಡೇ ಮಾಡುತ್ತೀವಿ, ತಾಕತ್ತಿದ್ದರೆ ಅದನ್ನ ವಿರೋಧ ಮಾಡಿ ಎಂದು ಸವಾಲು ಹಾಕಿದ ಮುತಾಲಿಕ್, ಹಿಂದೂಗಳು ಮುಂದಿನ ದಿನಗಳಲ್ಲಿ ಜಮೀರ್‌ ಅಹ್ಮದ್‌ಗೆ ಮತ ಹಾಕಿದರೆ ಗಣೇಶನ ವಿರುದ್ಧವಾಗಿ ನಡೆದುಕೊಂಡ ಹಾಗೆ ಆಗುತ್ತದೆ. ಜಮೀರ್‌ರನ್ನು ಉದ್ಧಟತನದಿಂದಲೇ ಈ ರೀತಿ ಮೆರೆಯಲಾಗುತ್ತಿದೆ. ಅವರನ್ನು ಸೋಲಿಸುವ ಮೂಲಕ ಸೊಕ್ಕನ್ನು ಮುರಿಯಬೇಕು. ಅವರನ್ನು ಬರುವ ಚುನಾವಣೆಯಲ್ಲಿ ಸೋಲಿಸಿ ಎಂದು ಹಿಂದೂಗಳಿಗೆ ಕರೆ ನೀಡಿದರು.

ರಾಷ್ಟ್ರ ಧ್ವಜ ಹಾರಿಸುವ ಮಾತಿಗೆ ಪ್ರತಿಕ್ರಿಯಿಸಿ " ರಾಷ್ಟ್ರ ಧ್ವಜ ಹಾರಿಸಲಿಕ್ಕೆ ನಾವು ಬರುತ್ತೇವೆ, ಎಲ್ಲಾ ಕ್ಷೇತ್ರದ ಜನರು ಬರುತ್ತಾರೆ, ಎಲ್ಲಾ ಹಿಂದೂಗಳು ಬರುತ್ತಾರೆ. ಎಲ್ಲರ ಸಮ್ಮುಖದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಅದು ಕೇವಲ 75 ಸಂಭ್ರಮಾಚರಣೆಗೆ ಮಾತ್ರ ಅಲ್ಲ ಎಂದ ಅವರು ಪ್ರತಿ ಜನವರಿ 26 ಹಾಗೂ ಆಗಸ್ಟ್ 15 ರಂದು ಧ್ವಜ ಹಾರಿಸಬೇಕು. ಸರಕಾರಿ ಜಾಗದಲ್ಲಿ ಗೌರವದಿಂದ ಎಲ್ಲಿ ಬೇಕಾದರೂ ಹಾರಿಸಬಬಹುದು, ನಾವು ನಿಯಮಬದ್ಧವಾಹಿ ಹಾರಿಸುತ್ತೇವೆ. ಧ್ಜಜ ಹಾರಿಸುವ ವಿಚಾರದಲ್ಲಿ ತಾನು ಹೋರಾಟಗಾರರ ಜೊತೆ ಇರುತ್ತೇನೆಂದು" ತಿಳಿಸಿದ್ದಾರೆ.

Recommended Video

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada

English summary
Sri Ram Sene Chief Pramod Muthalik lashes out against chamarajpet MLA Zameer Ahmad Khan, and said Idgah Maidan is not the property of Zameer's ancestors, muthalik said in Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X