ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಧನೆ ಪುಸ್ತಕದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದುರಪಯೋಗ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಜೂ11: ಸಾಧನೆ ಪುಸ್ತಕದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದುರಪಯೋಗ ವಿಚಾರ ಕುರಿತು ನನಗೆ ಯಾವುದು ನೋಟಿಸ್ ಬಂದಿಲ್ಲ ಎಂದು ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು, ಸಾಧನೆ ಪುಸ್ತಕದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದುರಪಯೋಗ ವಿಚಾರ ಮಾಡಿದ್ದಾರೆ ಮತ್ತು ಅದನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ನನ್ನ ಮೇಲೆ ಕೇಳಿ ಬಂದಿತು. ಈ ಕುರಿತು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ನನಗೆ ಯಾವುದು ನೋಟಿಸ್ ಬಂದಿಲ್ಲ ಈ ಕುರಿತು ನಾನು ಸ್ಪಷ್ಟಪಡಿಸುತ್ತೇನೆ ಎಂದ ಬಸವರಾಜ ಹೊರಟ್ಟಿ ಅವರು, ಕಾನೂನು ಪ್ರಕಾರ ಏನಾಗುತ್ತೆ ನೋಡೋಣ ಈ ಬಗ್ಗೆ ಹೆಚ್ಚು ಮಾತನಾಡಲಾರೆ ನೋಟಿಸ್ ಕೊಟ್ಟಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಬಸವರಾಜ ಹೊರಟ್ಟಿ ಅವರು ಅಕ್ರೋಶ ವ್ಯಕ್ತಪಡಿಸಿದರು.

86ನೇ ಕನ್ನಡ ಸಾಹಿತ್ಯ ಸಮ್ಮೇಳನ, ನೀವು ಲಾಂಛನ ಕಳಿಸಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ, ನೀವು ಲಾಂಛನ ಕಳಿಸಿ

ಒಂದು ನಯಾ ಪೈಸೆಯೂ ಪಡೆದಿಲ್ಲ: ಹೊರಟ್ಟಿ!

"42 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ನಾನು ಮಾಡಿದ ಸೇವೆ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಾನು ಮಾಡಿದ ಹೋರಾಟಗಳ ಕುರಿತು ನನ್ನ ಪ್ರತಿಸ್ಪರ್ಧಿಗಳು ಇಚ್ಚಿಸಿದರೇ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ," ಎಂದು ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಬಹಿರಂಗ ಸವಾಲು ಹಾಕಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊರಟ್ಟಿ, ಬಹಿರಂಗ ಚರ್ಚೆಗೆ ಪ್ರತಿಸ್ಪರ್ಧಿಗಳು ದಿನಾಂಕ ನಿಗದಿಪಡಿಸಲಿ ಎಂದು ಸವಾಲು ಹಾಕಿದರು.

I have not received any notice: Basavaraj Horatti

ಮಗಳ ಶಿಕ್ಷಣದ ಸಲುವಾಗಿ ನಾನು ಅಮೇರಿಕಾಕ್ಕೆ ಹೋಗಿದ್ದೆ : ಬೆಲ್ಲದ

ನಾನು ನನ್ನ ಮಗಳ ಶಿಕ್ಷಣದ ಸಲುವಾಗಿ ಅಮೇರಿಕಾಕ್ಕೆ ಹೋಗಿದ್ದೆ . ಈಗ ವಾಪಸ್ ಬಂದಿದ್ದು , ಕ್ಷೇತ್ರದ ಅಭಿವೃದ್ಧಿ ಕೆಲಸದತ್ತ ಗಮನಹರಿಸುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

I have not received any notice: Basavaraj Horatti

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಲ್ಲದ್ , "ನಾನು ನನ್ನ ಮಗಳ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದೆ . ಐದು ವರ್ಷದಿಂದ ನನ್ನ ಮಗಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಅವಳ ಕಾಲೇಜು ಪ್ರವೇಶದ ಸಂದರ್ಭದಲ್ಲೂ ನಾನು ಹೋಗಿರಲಿಲ್ಲ. ಅವಳ ಕಾಲೇಜ್ ಕೂಡ ನೋಡಿರಲಿಲ್ಲ. ಹೀಗಾಗಿ ಆರು ದಿನ ನಮ್ಮ ನಾಯಕರ ಗಮನಕ್ಕೆ ತಂದು ನಾನು ಅಮೇರಿಕಾಕ್ಕೆ ಹೋಗಿದ್ದೆ . ಇನ್ನು ಮುಂದೆ ನನ್ನ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸುತ್ತೇನೆ ಎಂದರು. ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಪಕ್ಷ ಅವರ ಮೇಲೆ ಕ್ರಮ ಕೈಗೊಂಡಿದೆ," ಎಂದರು.

English summary
I have not received any notice on the National and State Emblem Issues in the achievement book," said BJP Candidate Basavaraj Horatti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X