ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ರಂಗಕಲೆ ಡಿಪ್ಲೋಮಾ ಕೋರ್ಸ್ ಆರಂಭ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂನ್ ,10: ನಗರದ ಸತ್ವರೂಪ ಫೌಂಡೇಶನ್ ನ ಸಂಸ್ಕೃತಿ ಕಾಲೇಜಿನಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ರಂಗಕಲೆ ಡಿಪ್ಲೋಮಾ ಕೋರ್ಸ್ ಪ್ರಸಕ್ತ ಸಾಲಿನಿಂದ ಆರಂಭಿಸಲಾಗುತ್ತಿದೆ ಎಂದು ಫೌಂಡೇಶ್ ನ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಡ್ಯಾನಿಯಲ್ ಹೊಸಕೇರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ.90 ಕ್ಕಿಂತ ಹೆಚ್ಚು ಅಂಕ ಮತ್ತು ಬಡ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರಸಕ್ತ ಸಾಲಿನಿಂದ ಪಿಯುಸಿ ವಾಣಿಜ್ಯ ವಿಭಾಗವನ್ನು ಆರಂಭಿಸಲಾಗುತ್ತಿದ್ದು, ರಂಗಕಲೆಯಲ್ಲಿ ಡಿಪ್ಲೋಮಾ ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.[ಹುಬ್ಬಳ್ಳಿ ಹುತಾತ್ಮ ಸೈನಿಕನಿಗೆ ಅಂತಿಮ ನಮನ]

hubballi

ವಿದ್ಯಾರ್ಥಿಗಳಿಗೆ ನುರಿತ ಆಧ್ಯಾಪಕರಿಂದ ಬೋಧನೆ, ಚರ್ಚೆಯನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ. ಶಿಷ್ಯವೇತನ ವಿತರಣೆಯನ್ನು ಮಾಡಲಾಗುತ್ತಿದ್ದು, ಸಿಎ,ಸಿಎಸ್, ವಕೀಲರು ಮತ್ತು ಉದ್ಯಮಿಗಳಿಂದ ವಿವಿಧ ವಿಷಯಗಳ ಕುರಿತು ಸಂವಾದ ಏರ್ಪಡಿಸಲಾಗುವುದು ಎಂದರು.[ಮೈಸೂರಿನ 'ಜ್ಯೋತಿ'ಗೆ ಕರಕುಶಲ ಕಲೆಯೇ ಬಾಳಿನ ಬೆಳಕು]

ಕಾಲೇಜಿನಲ್ಲಿ ಸುಸಜ್ಜಿತ ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ ಮುಂತಾದ ಆಧುನಿಕ ಸೌಲಭ್ಯಗಳಿದ್ದು ಸದ್ಬಳಕೆಯಾಗಬೇಕಿದೆ ಎಂದು ತಿಳಿಸಿದರು. ಫೌಂಡೇಶನ್ ನ ಡಾ.ವೀಣಾ ಡ್ಯಾನಿಯಲ್, ಉಷಾ ಶೆಟ್ಟರ್, ಪ್ರಾಂಶುಪಾಲೆ ಪ್ರೊ.ಸ್ನೇಹಲ್ ವಿ ಬುಳ್ಳನವರ ಉಪಸ್ಥಿತರಿದ್ದರು.

English summary
Hubballi: First time in North Karnataka Satvaroopa foundation will starts diploma in Theatre Arts in this year. Foundation administration informed in a press meet at Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X