ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಚಾಣಾಕ್ಷ ಕಳ್ಳ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಜುಲೈ, 18: ಈತ ಚಾಣಾಕ್ಷ ಕಳ್ಳ. ರಸ್ತೆ ಪಕ್ಕ ನಿಲ್ಲಿಸಿದ ಕಾರುಗಳು ಈತನ ಟಾರ್ಗೆಟ್, ಅದರಲ್ಲಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಈತನ ಗುರಿ. ವಾಹನ ಪಾರ್ಕ್ ಮಾಡಿ ಹೋಗುವ ಮಾಲೀಕರನ್ನು ಗಮನವಿಟ್ಟು ನೋಡಿಕೊಂಡು ಅವರು ಬರುವುದರೊಳಗೆ ಲ್ಯಾಪ್ ಟಾಪ್, ಮೊಬೈಲ್ ಎಗರಿಸುತ್ತಿದ್ದ. ಡೈಮಂಡ್ ಕಟ್ಟರ್ ಬಳಸಿ ಕಾರಿನ ಗಾಜುಗಳನ್ನು ಕೊರೆದು ಕಳ್ಳತನ ಮಾಡುವುದನ್ನು ಕರಗತ ಮಾಡಿಕೊಂಡಿದ್ದ.

ಇಂಥ ಖದೀಮ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಗರದ ಹಲವಾರು ಕಡೆಗಳಲ್ಲಿ ಲ್ಯಾಪ್ ಟಾಪ್, ಮೊಬೈಲ್ ಕಳ್ಳತನ ಮಾಡುತ್ತಿದ್ದ ಖದೀಮನೊಬ್ಬನನ್ನು ನಗರದ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.[ಕಳಸಾ-ಬಂಡೂರಿ ಹೋರಾಟ: ಉತ್ತರ ಕರ್ನಾಟಕ ಸ್ತಬ್ಧ]

hubball

ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಪಾಂಡು ರಾಣೆ ಮಾತನಾಡಿ, ವೀರೇಶ ನಾಗರಾಜಪ್ಪ ಅಂಗಡಿ (27) ಎಂಬಾತ ಪೊಲೀಸರ ಬಲೆಗೆ ಬಿದ್ದ ಚಾಣಾಕ್ಷ ಕಳ್ಳ.[ಹುಬ್ಬಳ್ಳಿ: ಮೈಸೂರು ಸ್ಯಾಂಡಲ್ ಸೋಪ್ ಕದ್ದೊಯ್ದ ಕಳ್ಳರು!]

hubball

ಈತನಿಂದ 5 ಲಕ್ಷ ರೂ. ಮೌಲ್ಯದ 12 ಲ್ಯಾಪ್ ಟಾಪ್, 4 ಟ್ಯಾಬ್, 8 ಮೊಬೈಲ್, 1 ಡಿಜಿಟಲ್ ಕ್ಯಾಮರಾ ಹಾಗೂ ಒಂದು ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನು ಹುಬ್ಬಳ್ಳಿ ನಗರದ ವಿವಿಧೆಡೆ ನಡೆದ 15 ಕಳ್ಳತನ ಪ್ರಕರಣಕ್ಕೆ ಪೊಲೀಸರಿಗೆ ಬೇಕಾಗಿದ್ದನು.

hubball

ಕಳ್ಳ ಸಿಕ್ಕಿದ್ದು ಹೀಗೆ :
ಬಂಧಿತ ಆರೋಪಿ ವೀರೇಶ ಸೋಮವಾರ ಬೆಳಗಿನ ಹೊತ್ತಿನಲ್ಲಿ ನಗರದ ಹಳೇ ಬಸ್ ನಿಲ್ದಾಣದ ಹೊರಭಾಗದಲ್ಲಿ ಕದ್ದ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಲು ಪ್ರಯತ್ನಿಸುತ್ತಿದ್ದ. ಈ ಸಮಯದಲ್ಲಿ ಸಂಶಯಗೊಂಡ ಉಪನಗರ ಠಾಣೆ ಪಿಎಸ್ಐ ಮುತ್ತಣ್ಣ ಸವರಗೋಳ ವೀರೇಶನನ್ನು ಆತನ ಬೈಕ್ ಸಮೇತ ಠಾಣೆ ಕರೆ ತಂದು ವಿಚಾರಣೆ ಮಾಡಿದ್ದಾರೆ. ಆಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

hubball
English summary
Hubballi: A laptop thief was arrested by Hubballi Police and recovered 5 lackh worth of 12 laptop, 8 movbile and a digital camera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X