ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯ ಕಿರಣ ಬಾಕಳೆಗೆ ರಾಜ್ಯ ಛಾಯಾಗ್ರಾಹಕ ಪ್ರಶಸ್ತಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್, 08: ಛಾಯಾಚಿತ್ರ ಕ್ಷೇತ್ರದಲ್ಲಿ ಮೂರು ದಶಕಗಳ ಸಾಧನೆ ಮಾಡಿದ ಹುಬ್ಬಳ್ಳಿಯ ಮುಕ್ತ ಪತ್ರಿಕಾ ಛಾಯಾಗ್ರಾಹಕ ಕಿರಣ ಬಾಳೆ ಅವರು ರಾಜ್ಯ ಮಟ್ಟದ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅನು ಛಾಯಾಚಿತ್ರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತುಮಕೂರಿನಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಡಿಸೆಂಬರ್ 6ರ ಭಾನುವಾರ ನಡೆದ ಅನು ರಾಷ್ಟ್ರೀಯ ಛಾಯಾಚಿತ್ರ ಸಮಾವೇಶದಲ್ಲಿ ಕಿರಣ ಬಾಳೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಮಾವೇಶದಲ್ಲಿ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ನಿರ್ದೇಶಕ ವಿಶುಕುಮಾರ, ಅನು ಸಂಸ್ಥೆಯ ಅಧ್ಯಕ್ಷ ಹಾಗೂ ಪತ್ರಿಕಾ ಛಾಯಾಗ್ರಾಹಕ ಶಾಂತರಾಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.[ಕರ್ನಾಟಕ ರಣಜಿ ತಂಡಕ್ಕೆ ಕ್ರೀಡಾ ಪತ್ರಕರ್ತರ ಸಂಘದ ಪ್ರಶಸ್ತಿ]

Hubballi Kiran bakale won State level photographer award

ಮಂಗಳೂರಲ್ಲಿ ಡಿಸೆಂಬರ್ 19, 20 'ಜನನುಡಿ' ಸಮಾರಂಭ

ಮಂಗಳೂರು, ಡಿಸೆಂಬರ್, 08 : ಸಾಹಿತ್ಯ ಸಂಸ್ಕೃತಿಯನ್ನು ದೇಶ-ಕಾಲದೊಂದಿಗೆ ಮುಖಾಮುಖಿಯಾಗಿಸಿ ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿರುವ 'ಜನನುಡಿ' ಕಾರ್ಯಕ್ರಮವು ಡಿಸೆಂಬರ್ 19 ಮತ್ತು 20 ಎರಡು ದಿನಗಳ ಕಾಲ ಮಂಗಳೂರಿನ ನಂತೂರಿನಲ್ಲಿರುವ ಶಾಂತಿ ಕಿರಣ ಸಭಾಂಗಣದಲ್ಲಿ ನಡೆಯಲಿದೆ.

ಜನನುಡಿ ಕಾರ್ಯಕ್ರಮವನ್ನು ಸಾಹಿತಿಗಳಾದ ದೇವನೂರು ಮಹಾದೇವ ಉದ್ಘಾಟಿಸಲಿದ್ದು, ನುಡಿ ಮಾರ್ಗ, ಮುಸ್ಲಿಮರ ತವಕ-ತಲ್ಲಣಗಳು, ಅಭಿವೃದ್ಧಿಯ ಸವಾಲುಗಳು ಮತ್ತು ಮತೀಯ ಅಸಹಿಷ್ಣುತೆ ಎಂಬ ವಿಚಾರದ ಮೇಲೆ ವಿಚಾರಗೋಷ್ಠಿಗಳು ನಡೆಯಲಿದೆ. ದಿನಾಂಕ 19ರಂದು ಸಂಜೆ ಮೈಸೂರು ತಂಡದಿಂದ ಮಲೆಮಹದೇಶ್ವರ ಮಂಟೆಸ್ವಾಮಿ ಕಾವ್ಯವನ್ನು ಜನಪದ ಗಾಯನದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ.[ರಾಮಾಯಣ 'ಸೀತೆ'ಯ ಮನದ ಮಾತಿಗೆ ದನಿ ಆಗೋಣ ಬನ್ನಿ]

ಈ ಸಮಾರಂಭದಲ್ಲಿ ಕಡಿದಾಳು ಶಾಮಣ್ಣ, ರಹಮತ್ ತರಿಕೆರೆ, ಡಿ. ಉಮಾಪತಿ, ದಿನೇಶ್ ಅಮಿನ್ ಮಟ್ಟು, ಡಾ.ಕೆ ಷರೀಫಾ, ದಯಾನಂದ ಟಿಕೆ, ಎಚ್ ಎಸ್ ಅನುಪಮ, ಬಾನು ಮುಷ್ತಕ್ , ಲಕ್ಮ್ಮಣ ಹೂಗಾರ ಇನ್ನಿತರ ಸಾಹಿತಿಗಳು ಭಾಗವಹಿಸಲಿದ್ದಾರೆ.

English summary
Hubballi Kiran bakale won State level photographer award. This programme organized by Anu Photography Institution in Tumakur, Prize presented by Shivakumar swamy, and Law minister T.B Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X