ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ಗುರುರಾಜ್ ದೇಶಪಾಂಡೆ ವಿರಚಿತ 'ದೇಶಾವಲೋಕನ' ಲೋಕಾರ್ಪಣೆ

By Madhusoodhan
|
Google Oneindia Kannada News

ಹುಬ್ಬಳ್ಳಿ, ಜುಲೈ, 08: ಸಮಸ್ಯೆಯನ್ನು ಗುರುತಿಸಿ ಪರಿಹರಿಸಬೇಕು ಬೇಕಾದರೆ ಅದನ್ನು ಪ್ರೀತಿಸಬೇಕು ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು.

ಅವರು ಗುರುವಾರ ಸ್ಥಳೀಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿರುವ ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲಿ "ದೇಶಾವಲೋಕನ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.[ದೇಶಾವಲೋಕನ ಸಮಾನ ಸಮಾಜದ ಕನಸಿಗೊಂದು ಮುನ್ನುಡಿ]

hubballi

ಸಮಸ್ಯೆಯನ್ನು ಗುರುತಿಸಬೇಕಾದರೆ ಅದನ್ನು ಪ್ರೀತಿಸಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ರೀತಿಯ ಹಲವಾರು ವಿಷಯಗಳನ್ನು ದೇಶಾವಲೋಕನ ಪುಸ್ತಕದಲ್ಲಿ ನಾನು ಬರೆದಿದ್ದೇನೆ ಎಂದರು.

hubballi

ಉದ್ಯಮಿಗಳಾಗಬೇಕಾದರೆ ಮೊದಲು ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಏಕೆಂದರೆ ನಮ್ಮ ನಡುವೆ ಮೂರು ತರಹದ ವ್ಯಕ್ತಿತ್ವ ಹೊಂದಿರುವ ಜನರಿದ್ದಾರೆ. ಆರಾಮಾಗಿ ಇದ್ದರಾಯಿತು ಎನ್ನುವವರು, ಸಮಸ್ಯೆ ಬಂದರೆ ಏಕೆ ಬಂತು ಎಂದು ಚಿಂತಿಸುತ್ತ ಕುಳಿತುಕೊಳ್ಳುವವರು ಮತ್ತು ಮೂರನೇಯವರು ಸಮಸ್ಯೆ ಬಂದರೆ ಧೈರ್ಯವಾಗಿ ಎದುರಿಸಬೇಕೆನ್ನುವವರು. ಹೀಗಾಗಿ ನಾವು ಮೂರನೇ ತರಹದ ವ್ಯಕ್ತಿತ್ವವನ್ನು ಹೊಂದಿದ್ದರೆ ಮಾತ್ರ ಯಶಸ್ಸು ಪಡೆಯಬಹುದು ಎಂದರು.[ದೇಶಾವಲೋಕನ ಕುರಿತು ಗುರುರಾಜ್ ದೇಶಪಾಂಡೆ ನುಡಿ]

ಲೇಖಕರೊಂದಿಗೆ ಸಂವಾದ:
ಪುಸ್ತಕವನ್ನು ಶ್ರೀನಿವಾಸ ದೇಶಪಾಂಡೆ ಮತ್ತು ಜಯಶ್ರೀ ದೇಶಪಾಂಡೆ ಬಿಡುಗಡೆ ಮಾಡಿದ ನಂತರ ಲೇಖಕರೊಂದಿಗೆ ಸಂವಾದ ನಡೆಯಿತು.
ಸತೀಶ ಚಪ್ಪರಿಕೆಯವರು ಲೇಖಕರಾದ ಗುರುರಾಜ ದೇಶಪಾಂಡೆ ಮತ್ತು ಕನ್ನಡ ಅನುವಾದಕಿ ಬೆಂಗಳೂರು ನ್ಯಾಶನಲ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ವೈ.ಸಿ. ಕಮಲಾ ಅವರನ್ನು ಸಂವಾದದಲ್ಲಿ ಪುಸ್ತಕ ಬರೆಯುವಾಗಿನ ಅನುಭವಗಳನ್ನು ಹಂಚಿಕೊಂಡರು. [ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಅಭಿವೃದ್ಧಿ ಮಂತ್ರ]

ಖ್ಯಾತ ಕವಿ ಚನ್ನವೀರ ಕಣವಿ ಅವರ ಪುತ್ರ ಪತ್ರಕರ್ತ ಬಿಸಿನೆಸ್ ಇಂಡಿಯಾ ಪತ್ರಿಕೆಯ ಸಂಪಾದಕ ಶಿವಾನಂದ ಕಣವಿ ಮತ್ತಿತರರು ಉಪಸ್ಥಿತರಿದ್ದರು. ಸಂವಾದದ ನಂತರ ಗುರುರಾಜ ದೇಶಪಾಂಡೆ ಅವರನ್ನು ಪುಸ್ತಕ ಪಡೆದುಕೊಂಡವರಿಗೆ ಆಟೋಗ್ರಾಫ್ ನೀಡಿ ಶುಭ ಹಾರೈಸಿದರು.

English summary
Hubballi: Dr. Gururaj Deshpande's Deshavalokana book released on 07 July 2016 at Hubballi BVB college campus. Dr. Gururaj Deshpande also known as Desh Deshpande, an Indian American venture capitalist and entrepreneur, has written a book Deshavalokana in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X