ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಸೆಡ್ಡು ಹೊಡೆದ ಟಿಕೆಟ್ ವಂಚಿತರು!

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಆಗಸ್ಟ್ 24: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ದೊರೆಯದಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಪಕ್ಷಗಳು ಪಕ್ಷಗಳು ಬಂಡಾಯದ ಬಿಸಿ ಎದುರಿಸುವಂತಾಗಿದೆ. ಕೊನೆ ಕ್ಷಣದವರೆಗೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಘೋಷಿತ ಪಟ್ಟಿಯಲ್ಲಿ ಹೆಸರು ಇಲ್ಲದ್ದನ್ನು ಕಂಡು ನಿರಾಸೆ ಅನುಭವಿಸಿದರು.

ಇದರಿಂದ ಅತೃಪ್ತಗೊಂಡ ಕಾರ್ಯಕರ್ತರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ ಇನ್ನೆರಡು ದಿನ ಅಸಮಾಧಾನಿತರನ್ನು ಕರೆಸಿ ಸಮಾಧಾನಪಡಿಸುವ ಸವಾಲು ಪಕ್ಷದ ನಾಯಕರಿಗೆ ಎದುರಾಗಿದೆ. ಬಂಡಾಯಗಾರರು ಮಣಿಯದಿದ್ದಲ್ಲಿ ಎರಡೂ ಪಕ್ಷಗಳು ಗೆಲ್ಲಲು ನಿಟ್ಟುಸಿರು ಬಿಡಬೇಕಾಗುತ್ತದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ; 577 ನಾಮಪತ್ರ ಸಲ್ಲಿಕೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ; 577 ನಾಮಪತ್ರ ಸಲ್ಲಿಕೆ

ಶನಿವಾರದವರೆಗೆ 68 ವಾರ್ಡ್‌ಗಳಲ್ಲಿ ಮೂರು ಹಂತದಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, 14 ವಾರ್ಡ್‌ಗಳಿಗೆ ಕುತೂಹಲ ಉಳಿಸಿಕೊಂಡಿತ್ತು. ನಾಮಪತ್ರ ಸಲ್ಲಿಕೆ ಕೊನೆ ದಿನ ಸೋಮವಾರ ನಾಲ್ಕನೇ ಪಟ್ಟಿಯಲ್ಲಿ 14 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುವ ಮೂಲಕ ಹೆಚ್ಚಿನ ಬಂಡಾಯವನ್ನು ತಡೆಯಲೆತ್ನಿಸಿದೆ.

Hubballi- Dharwad Municipal Corporation Election: BJP And Congress Faces Rebel Candidates

ರಾತ್ರಿ ಬದಲಾದ ಬಿ ಫಾರ್ಮ್‌
ವಾರ್ಡ್ ನಂ.56ರಲ್ಲಿ ಕಾಂಗ್ರೆಸ್‌ ಬಿ ಫಾರ್ಮ್‌ ಪಡೆದಿದ್ದ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಪತ್ನಿ ಚಂದ್ರಿಕಾಗೆ ಸೋಮವಾರ ಬೆಳಗ್ಗೆ ನಿರಾಕರಿಸಿ, ಎಸ್‌ಸಿ- ಎಸ್‌ಟಿ ಘಟಕ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ಸೊಸೆಗೆ ಬಿ ಫಾರ್ಮ್‌ ನೀಡಿದ್ದು ಹೊಸ ಬೆಳವಣಿಗೆಯಾಗಿದೆ. ಅದೇ ರೀತಿ ವಾರ್ಡ್ ನಂ.54ರಲ್ಲಿ ಶಿವಲೀಲಾ ಹಿರೇಮಠಗೆ ಟಿಕೆಟ್ ಘೋಷಿಸಲಾಗಿತ್ತು. ಕೊನೆ ಗಳಿಗೆಯಲ್ಲಿ ದಾಬಡೆ ಎಂಬುವವರಿಗೆ ಬಿ ಫಾರ್ಮ್‌ ನೀಡಲಾಗಿದೆ.

ಕಾಂಗ್ರೆಸ್‌ನಲ್ಲಿ ಹೆಚ್ಚಾದ ಬಂಡಾಯ
ಕೊನೆ ಕ್ಷಣದವರಿಗೂ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ನಿರತರಾಗಿದ್ದ ವೀರೇಶ ಉಂಡಿ ಸೇರಿ ಹಲವು ಹಾಲಿ ಸದಸ್ಯರಿಗೆ ಹಾಗೂ ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಸಹಜವಾಗಿ ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವೀರೇಶ ಉಂಡಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ.52ರಲ್ಲಿ ಆಕಾಂಕ್ಷಿಯಾಗಿದ್ದ ಚೇತನ ಹಿರೇಕೆರೂರ ಸಹ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ.

Hubballi- Dharwad Municipal Corporation Election: BJP And Congress Faces Rebel Candidates

ಟಿಕೆಟ್ ತಪ್ಪಿಸಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ವಿರುದ್ಧ ಅಸಮಾಧಾನಗೊಂಡಿರುವ ಗಣೇಶ ಟಗರಗುಂಟಿ ವಾರ್ಡ್ ನಂ.71ರಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಸವಾಲು ಒಡಿದ್ದಾರೆ. ವಾರ್ಡ್ ನಂ.50ರಲ್ಲಿ ಮಂಜುಳಾ ಯಾತಗೇರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತ ಅಭ್ಯರ್ಥಿ ಮಂಗಳಾ ಹಿರೇಮಠಗೆ ಸ್ಪರ್ಧೆ ನೀಡಿದ್ದಾರೆ.

ಅದೇ ರೀತಿ ವಾರ್ಡ್ ನಂ.82ರಲ್ಲಿ ಕಾಂಗ್ರೆಸ್‌ನ ಕಟ್ಟಾಳು ಮೋಹನ ಅಸುಂಡಿ ಪತ್ನಿ ಅಕ್ಷತಾ ತೀವ್ರ ಅಸಮಾಧಾನಗೊಂಡು ಬಂಡಾಯ ಎದ್ದಿದ್ದು, ಶಾಸಕರಿಗೆ ಪ್ರತಿರೋಧ ತೋರಿದ್ದಾರೆ. ಮತ್ತೊಂದೆಡೆ ವಾರ್ಡ್ ನಂ.68ರಲ್ಲಿ ಮಹಮ್ಮದ್‌ ಮುಧೋಳ ಎಂಬುವರು ಕೂಡ ಬಂಡಾಯ ಸಾರಿದ್ದಾರೆ.

ಕೊನೆ ಕ್ಷಣದಲ್ಲಿ ಕಣಕ್ಕಿಳಿದ ʼಕೈʼ ಅಭ್ಯರ್ಥಿಗಳು
ವಾರ್ಡ್ ನಂಬರ್‌ 36, 37 ಹಾಗೂ 38ನೇ ವಾರ್ಡ್‌ನಲ್ಲಿ ಮೊದಲು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೊನೆಕ್ಷಣದಲ್ಲಿ ಪಕ್ಷ ಟಿಕೆಟ್ ನೀಡುವುದಾಗಿ ಹೇಳಿದ್ದರೂ ಸ್ಪರ್ಧೆಯಿಂದ ಹಿಂದೆ ಸರಿದು ಆಶ್ಚರ್ಯ ಮೂಡಿಸಿದ್ದರು. ಪಕ್ಷವು ಬೇರೆಯವರ ಹೆಸರನ್ನು ಪರಿಗಣಿಸಲು ಮುಂದಾದಾಗ ಅವರು ಕೂಡಾ ಸ್ಪರ್ಧಿಸಲು ನಿರಾಕರಿಸಿದರು.

Hubballi- Dharwad Municipal Corporation Election: BJP And Congress Faces Rebel Candidates

842 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ
"ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆ ನಡೆದಿದ್ದು, 842 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು," ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.

ಮಾಧ್ಯಮರೊಂದಿಗೆ ಮಾತನಾಡಿದ ಅವರು, "ಒಟ್ಟು 4041 ಸಿಬ್ಬಂದಿ ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳುವರು. ಪ್ರತಿ ಮತಗಟ್ಟೆಗೆ 4 ಸಿಬ್ಬಂದಿ ನಿಯೋಜನೆ ಮಾಡಲಾಗುವುದು. 63 ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯೆ ಜವಾಬ್ದಾರಿ ನಿಭಾಯಿಸುವರು," ಎಂದು ತಿಳಿಸಿದರು.

"ಧಾರವಾಡದಲ್ಲಿ ಬಾಸೆಲ್‌ಮಿಷನ್ ಸ್ಕೂಲ್, ಹುಬ್ಬಳ್ಳಿಯಲ್ಲಿ ಲ್ಯಾಮಿಂಗ್ಟನ್ ಶಾಲೆ ಹಾಗೂ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ತರಬೇತಿ ಕೇಂದ್ರಗಳನ್ನು ಮಾಡಲಾಗಿದ್ದು, ಧಾರವಾಡದಲ್ಲಿ ಆಗಸ್ಟ್ 27 ರಂದು ಹಾಗೂ ಹುಬ್ಬಳ್ಳಿಯಲ್ಲಿ ಆ.29 ರಂದು ಸಿಬ್ಬಂದಿಗೆ ತರಬೇತಿ ನೀಡಲಾಗುವುದು," ಎಂದು ತಿಳಿಸಿದರು.

Recommended Video

ಎಲ್ಲಾ ವಿಮಾನವನ್ನ ಹೈಜಾಕ್ ಮಾಡುತ್ತಿರುವ ಉಗ್ರರು !! | Oneindia Kannada

"ಮತಯಂತ್ರಗಳ ಪರಿಶೀಲನೆ ಮಾಡಲಾಗಿದ್ದು, ಸದ್ಯಕ್ಕೆ 1035 ಮತಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾವ ವಾರ್ಡ್‌ನಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೋ ಅಲ್ಲಿನ ಬೂತ್‌ಗಳಲ್ಲಿ ಎರಡು ಮತಯಂತ್ರಗಳ ಅವಶ್ಯಕತೆಯಿರುತ್ತದೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತಯಂತ್ರಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ," ಎಂದು ಹೇಳಿದರು.

"ಈ ಚುನಾವಣೆಯಲ್ಲಿ ಪಿಂಕ್ ಬೂತ್ ಸೇರಿದಂತೆ ಯಾವುದೇ ವಿಶೇಷ ಬೂತ್ ಇರುವುದಿಲ್ಲ. ಕೋವಿಡ್ ನಿಯಮಾವಳಿಗಳ ಪಾಲನೆ ಮಾಡಲಾಗುವುದು. ಮಾಸ್ಕ್ ಕಡ್ಡಾಯವಾಗಿದೆ. ಮತದಾನ ನಡೆಯುವ ಮುನ್ನ ಮತದಾನ ನಡೆಯುವ ಮತಗಟ್ಟೆ ಸ್ಯಾನಿಟೈಸ್ ಮಾಡಲಾಗುವುದು," ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾಹಿತಿ ನೀಡಿದರು.

English summary
The BJP and the Congress are facing a rebellion of party activists in the Hubballi-Dharwad Municipal Corporation Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X