ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಗರಿ ಬಸ್‌ಗೆ 2 ವರ್ಷ; ಧಾರವಾಡದ ಜನರಿಗೊಂದು ಕೊಡುಗೆ

|
Google Oneindia Kannada News

ಧಾರವಾಡ, ಅಕ್ಟೋಬರ್ 02: ಹುಬ್ಬಳ್ಳಿ- ಧಾರವಾಡ ನಡುವೆ ಸಂಚಾರ ನಡೆಸುವ 'ಚಿಗರಿ' ನಗರ ಸಾರಿಗೆ ಬಸ್ 2 ವರ್ಷಗಳಲ್ಲಿ ಪೂರೈಸಿದೆ. ಬಿ. ಆರ್. ಟಿ. ಎಸ್ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅವಳಿ ನಗರದಲ್ಲಿ ಅನುಷ್ಠಾನಗೊಳಿಸಲಾಗಿದೆ.

'ಚಿಗರಿ' ಬಸ್‌ಗಳು ಸಾರ್ವಜನಿಕ ಸಾರಿಗೆ ಸೇವೆ ಆರಂಭಿಸಿ ಎರಡು ವರ್ಷಗಳು ಕಳೆದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಸರ ಸ್ನೇಹಿಯಾಗಿ ಬಿ. ಆರ್. ಟಿ. ಎಸ್ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಈ ಯೋಜನೆಯಡಿ 300 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ.

ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ; ಕೇಂದ್ರ ಸಚಿವ ಮಾಹಿತಿಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ; ಕೇಂದ್ರ ಸಚಿವ ಮಾಹಿತಿ

ಎರಡು ವರ್ಷಗಳ ಅವಧಿಯಲ್ಲಿ ಸುಮಾರು 3.35 ಕೋಟಿ ಜನರು 'ಚಿಗರಿ' ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಸುಮಾರು 1 ಲಕ್ಷದಷ್ಟು ಜನರು ತಮ್ಮ ನಿತ್ಯ ಜೀವನದ ಪ್ರಯಾಣಕ್ಕಾಗಿ 100 ಮಾದರಿಯ ತಡೆರಹಿತ ಬಸ್‍ಗಳನ್ನು ಅವಲಂಬಿಸಿದ್ದಾರೆ. ಕೇಂದ್ರ ಸರ್ಕಾರವು 2019ರಲ್ಲಿ ಉತ್ತಮ ನಗರ ಸಮೂಹ ಸಾರಿಗೆ ಶೇಷ್ಠತಾ ಪ್ರಶಸ್ತಿಯನ್ನು ಸಹ ಈ ಸೇವೆಗೆ ನೀಡಿದೆ.

ಹುಬ್ಬಳ್ಳಿ-ಹೈದರಾಬಾದ್ ಬಸ್ ಸಂಚಾರ ಆರಂಭ; ವೇಳಾಪಟ್ಟಿ ಹುಬ್ಬಳ್ಳಿ-ಹೈದರಾಬಾದ್ ಬಸ್ ಸಂಚಾರ ಆರಂಭ; ವೇಳಾಪಟ್ಟಿ

Hubballi Dharwad Chigari Buses Completed 2 Years

ಬಿ. ಆರ್. ಟಿ. ಎಸ್ ಯೋಜನೆಯಡಿ ಹೊಸ ಬಸ್ ನಿಲ್ದಾಣಗಳು, ಟರ್ಮಿನಲ್‍ಗಳು ಮತ್ತು ಹೊಸ ಡಿಪೋಗಳನ್ನು ಅಭಿವೃದ್ಧಿಗೊಳಿಸಿ, ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ವಾಕರಸಾಸಂ ಕೂಡ ತನ್ನ ಸಾರಿಗೆ ಸೇವಾ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ.

ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ

ಪ್ರಯಾಣಿಕರಿಗೆ ಕೊಡುಗೆ : 'ಚಿಗರಿ' ಬಸ್ ಸೇವೆ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜನರಿಗೆ ಕೊಡುಗೆಯೊಂದನ್ನು ನೀಡಲಾಗಿದೆ. ಸ್ಮಾರ್ಟ್ ಕಾರ್ಡ್ ಖರೀದಿ ಮತ್ತು ರೀಚಾರ್ಜ್‌ ಗಳಲ್ಲಿ ಶೇ. 50% ರಷ್ಟು ಬೋನಸ್ ರೂಪದಲ್ಲಿ ವಿಶೇಷ ಕೊಡುಗೆಯನ್ನು ಸಹ ನೀಡಲಾಗುತ್ತಿದೆ.

ಈ ಅವಕಾಶವನ್ನು ಅಕ್ಟೋಬರ್ 10ರ ತನಕ ಪಡೆಯಬಹುದಾಗಿದೆ. ಇದರಿಂದ ನಗದು ರಹಿತ ಪ್ರಯಾಣ ಸಾಧ್ಯವಾಗಲಿದ್ದು, ಕೋವಿಡ್-19 ಸಂದರ್ಭದಲ್ಲಿ ರೋಗಗಳ ಹರಡುವಿಕೆಯನ್ನು ನಿಯಂತ್ರಿಸಬಹುದಾಗಿದೆ.

Recommended Video

ಒಂದು ದಿನಾನೂ ಕಡ್ಡಿ ಕರ್ಪೂರ ಹಚ್ಲಿಲ್ಲಾ!! | Oneindia Kannada

English summary
Chigari buses completed the 2 years. It is the public transport between Hubballi and Dharwad in Karnataka and state's first Bus Rapid Transit System (BRTS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X